ಮಂಗಳೂರು: ಕದ್ರಿ ಸ್ಮಶಾನವನ್ನು ಮುಂದಿನ ಮೂರು ತಿಂಗಳ ತನಕ ಜೋಗಿ ಸಮಾಜದವರನ್ನು ಹೊರತು ಪಡಿಸಿ ಬೇರೆಯವರು ಬಳಸ ಬಾರದು ಎಂದು ನೋಟಿಫಿಕೇಷನ್ ಹೊರಡಿಸಬೇಕೆಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ತಿಳಿಸಿದರು. ಅವರು ಇಂದು ಕದ್ರಿ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಜೋಗಿ ಸಮಾಜದವರೂ ದಫನ್ ಮಾಡಲು ಅವಕಾಶ ಎಂದು ನುಡಿದ ಅವರು ಮೂರು ತಿಂಗಳ ಒಳಗೆ ಕಾಮಗಾರಿ ಪೂರ್ಣವಾಗಬೇಕು ಎಂದರು.
ಈಗ ಕಾಮಗಾರಿ ವಿಳಂಭವಾಗುತ್ತಿದೆ. ಆದಷ್ಟು ಬೇಗನೆ ಮುಗಿಸಬೇಕು. ಡಿಸೆಂಬರ್ ತಿಂಗಳ ಒಳಗೆ ಕಾಮಗಾರಿ ಮುಗಿಯಬೇಕು. ಈ ನಿಟ್ಟಿನಲ್ಲಿ ಇಲ್ಲಿ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ತಿಳಿಸಿದರು. ಕದ್ರಿ ಸ್ಮಶಾನ ಈ ಭಾಗದ ಜನರಿಗೆ ತೀರಾ ಅಗತ್ಯವಾಗಿ ಬೇಕು. ಇಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕು ಎಂದು ನುಡಿದ ಅವರು ಈ ಕಾಮಗಾರಿಯನ್ನು ತ್ವರಿತಗೊಳಿಸಿ ಇದರ ಬಳಕೆಯನ್ನು ಜನರಿಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಎ.ಜೆ.ಶೆಟ್ಟಿ, ಕಾರ್ಪೊರೇಟರ್ ಡಿ.ಕೆ.ಅಶೋಕ್, ಟ್ರಸ್ಟಿ ಸುರೇಶ್, ಮಂಗಳೂರು ನಗರಪಾಲಿಕೆ ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ, ಗುತ್ತಿಗೆದಾರರಾದ ಪ್ರಭಾಕರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English