ತುಳುವರ ಬೇಡಿಕೆ ಪ್ರಧಾನಿಗೆ ತಲುಪಿಸಲು ಟ್ವಿಟರ್‌ ಅಭಿಯಾನ

4:50 PM, Tuesday, October 24th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

twitterಮಂಗಳೂರು:  ಅ. 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇರುವುದರಿಂದ ತುಳುವರ ಬೇಡಿಕೆಯನ್ನು ಪ್ರಧಾನಿಗೆ ತಲುಪಿಸಲು ತುಳುನಾಡು ಯೂನಿಫಿಕೇಶನ್‌ ಸಂಘಟನೆಯು ಇನ್ನೊಂದು ಟ್ವಿಟರ್‌ ಅಭಿಯಾನಕ್ಕೆ ಮುಂದಾಗಿದೆ. ಇದರಲ್ಲಿ ಎಲ್ಲ ಟ್ವೀಟ್‌ಗಳನ್ನು ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಗೆ ಟ್ಯಾಗ್‌ ಮಾಡಲು ನಿರ್ಧರಿಸಲಾಗಿದೆ.

ಅ. 29ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಜಿಲ್ಲೆಗೂ ಬರುವ ಸಾಧ್ಯತೆ ಇರುವುದರಿಂದ ಸಂಘಟನೆಯು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಸೇರಿದಂತೆ ತುಳುವರ ಬೇಡಿಕೆಯನ್ನು ಪ್ರಧಾನಿಯವರ ಮುಂದಿಡಲು ಸಾಮಾಜಿಕ ತಾಣ ಟ್ವೀಟರನ್ನು ಬಳಸಿಕೊಂಡಿದೆ.

ಅ. 28 ಮತ್ತು 29ರಂದು ಟ್ವೀಟರ್‌ ಅಭಿಯಾನ ನಡೆಯಲಿದ್ದು, ಯಾವುದೇ ಟಾರ್ಗೆಟ್‌ ಇಡಲಾಗಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು. ಮಾಡಿದ ಎಲ್ಲ ಟ್ವೀಟ್‌ಗಳನ್ನು ರಾಜ್ಯದ ಸಂಸದರಿಗೆ ಟ್ಯಾಗ್‌ ಮಾಡಲಾಗುತ್ತದೆ. ಪ್ರಮುಖವಾಗಿ ಜಿಲ್ಲೆಯ ನಾಯಕರಾದ ಡಿ.ವಿ. ಸದಾನಂದ ಗೌಡ, ನಳಿನ್‌ಕುಮಾರ್‌ ಕಟೀಲು ಅವರಿಗೆ ಟ್ಯಾಗ್‌ ಮಾಡಿ ತುಳುನಾಡಿನ ಧ್ವನಿಯನ್ನು ಪ್ರಧಾನಿಯವರಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ.

ಈ ಹಿಂದೆ ಆ. 10ರಂದು ಸಂಘಟನೆ ಟ್ವೀಟರ್‌ ಅಭಿಯಾನ ನಡೆಸಿದ್ದು, ಒಟ್ಟು 49,000 ಮಂದಿ ಪಾಲ್ಗೊಂಡಿದ್ದರು. ನ. 1ರ ಕರ್ನಾಟಕ ರಾಜ್ಯೋತ್ಸವದಂದು ಕೂಡ ಟ್ವೀಟರ್‌ನಲ್ಲಿ ಬ್ಲಾಕ್‌ ಡೇ ಫಾರ್‌ ತುಳುನಾಡು ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಅಭಿಯಾನ ನಡೆಯಲಿದ್ದು, ಒಂದು ಲಕ್ಷ ಟ್ವೀಟ್‌ ಗುರಿ ಇರಿಸಲಾಗಿದೆ. ಅದಕ್ಕೂ ಮುನ್ನ ಪ್ರಧಾನಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಟ್ವೀಟ್‌ ಅಭಿಯಾನ ಮಹತ್ವ ಪಡೆದಿದೆ. ವಾಟಾಳ್‌ ನಾಗರಾಜ್‌ ಅವರೂ ಟ್ವೀಟರ್‌ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಟ್ವೀಟ್‌ ಟ್ಯಾಗ್‌: NarendraModi@PMO india @bsyBJP#tuluto8thschedule#Save Tulunad

ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬುದು ಹಲವು ವರ್ಷಗಳ ಹೋರಾಟವಾಗಿದೆ. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಯಾಗಬೇಕೆಂಬುದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಕನಸು. ಈ ನಿಟ್ಟಿನಲ್ಲಿ ಅವರು ಹಲವು ಬಾರಿ ಪ್ರಧಾನಿ ಸೇರಿದಂತೆ ಪ್ರಮುಖರನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಬಾರಿ ಪ್ರಧಾನಿ ಜಿಲ್ಲೆಗೆ ಆಗಮಿಸಿದ್ದಲ್ಲಿ ಖುದ್ದು ಹೆಗ್ಗಡೆಯವರೇ ಮತ್ತೂಮ್ಮೆ ಪ್ರಧಾನಿಯವರನ್ನು ಆಗ್ರಹಿಸುವ ಬಗ್ಗೆ ತಿಳಿಸಿದ್ದಾರೆ ಎಂದು ತುಳುನಾಡು ಯೂನಿಫಿಕೇಶನ್‌ ಅಧ್ಯಕ್ಷ ಅಶ್ವತ್ಥ್ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English