ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್

6:03 PM, Tuesday, October 24th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Alvas nudisiriಮಂಗಳೂರು:  ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಡಿ.1ರಿಂದ 3ರವರೆಗೆ ನಡೆಯಲಿರುವ 14ನೇ ವರ್ಷದ ಆಳ್ವಾಸ್ ನುಡಿಸಿರಿಯ ಉದ್ಘಾಟಕರಾಗಿ ಸಾಹಿತಿ ಡಾ.ಸಿ.ಎನ್.ರಾಮಚಂದ್ರನ್, ಸರ್ವಾಧ್ಯಕ್ಷರಾಗಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಬಹುತ್ವದ ನೆಲೆಗಳು ಎನ್ನುವ ಪ್ರಧಾನ ಪರಿಕಲ್ಪನೆಯಡಿ ಈ ಬಾರಿಯ ಸಮ್ಮೇಳನ ನಡೆಯಲಿದೆ ಎಂದು ಅವರು ವಿವರಿಸಿದರು. ರಾಜ್ಯ, ಹೊರ ರಾಜ್ಯ ಮತ್ತು ಹೊರ ದೇಶದಲ್ಲಿರುವ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ. ಆಳ್ವ ಮಾಹಿತಿ ನೀಡಿದರು.

ಡಾ.ಸಿ.ಎನ್.ರಾಮಚಂದ್ರನ್:
ಇಂಗ್ಲಿಷ್ ಭಾಷೆ-ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ ಹಾಗೂ ನ್ಯಾಯಶಾಸ್ತ್ರದಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದವರು ಡಾ.ಸಿ.ಎನ್.ರಾಮಚಂದ್ರನ್. ಭಾರತ, ಸೊಮಾಲಿಯಾ, ಸೌದಿ ಅರೇಬಿಯಾ ಮತ್ತು ಅಮೇರಿಕಾಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕರಾಗಿ ಹೆಸರುವಾಸಿಯಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 16 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ವಿಭಾಗಮುಖ್ಯಸ್ಥರಾಗಿ ಕರ್ತವ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ದೆಹಲಿ, ಸ್ಯಾನ್‍ಫ್ರಾನ್ಸಿಸ್ಕೋ, ಟೋಕಿಯೋ, ತುರ್ಕಿ, ಕಾಲ್ಫ್ ಮೊದಲಾದ ದೇಶವಿದೇಶಗಳ ವಿಚಾರಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿ ಖ್ಯಾತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಖ್ಯಾತ ವಿಮರ್ಶಕರಾಗಿ ಗುರುತಿಸಿಕೊಂಡಿರುವ ಶ್ರೀಯುತರು ಇಂಗ್ಲಿಷ್‍ನಲ್ಲಿ 10, ಕನ್ನಡದಲ್ಲಿ 16 ಕೃತಿಗಳನ್ನು ರಚಿಸಿದ್ದಾರೆ. ‘ಸಾಹಿತ್ಯ ವಿಮರ್ಶೆ’, ‘ತೌಲನಿಕ ಸಾಹಿತ್ಯ’, 1ಹೊಸಮಡಿಯ ಮೇಲೆ ಚದುರಂಗ’ ಅವುಗಳಲ್ಲಿ ಕೆಲವು ಕೃತಿಗಳು. ಕನ್ನಡದಿಂದ ಅನೇಕ ಕೃತಿಗಳನ್ನು ಇಂಗ್ಲಿಷ್‍ಗೆ ಇವರು ಅನುವಾದಿಸಿದ್ದು ‘ಮಲೆಮಾದೇಶ್ವರ’ ಜನಪದ ಮಹಾಕಾವ್ಯದ ಅನುವಾದವು ಅತೀ ಮಹತ್ವಾಕಾಂಕ್ಷಿ ಅನುವಾದವೆಂದು ಪ್ರಸಿದ್ಧಿಪಡೆದಿದೆ. ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಥಾಪ್ರಶಸ್ತಿ ಹಾಗೂ ಕೆ.ಕೆ.ಬಿರ್ಲಾ ಫೆಲೋಶಿಪ್ ಮೊದಲಾದ ಪ್ರಶಸ್ತಿ, ಗೌರವಗಳಿಗೆ ಶ್ರೀಯುತರು ಪಾತ್ರರಾಗಿದ್ದಾರೆ. ಘನ ವಿದ್ವಾಂಸರೂ, ಖ್ಯಾತ ವಿಮರ್ಶಕರೂ ಆಗಿರುವ ಡಾ.ಸಿ.ಎನ್.ರಾಮಚಂದ್ರನ್‍ರವರು 14ನೇ ವರ್ಷದ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟಿಸುತ್ತಿರುವುದು ನಮಗೆ ಹೆಚ್ಚಿನ ಸಂತೋಷವನ್ನುಂಟುಮಾಡಿದೆ.

ಡಾ.ನಾಗತಿಹಳ್ಳಿ ಚಂದ್ರಶೇಖರ್:
ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರಾದ ಚಂದ್ರಶೇಖರ್ ಅವರು ನಾಗತಿಹಳ್ಳಿ ಚಂದ್ರಶೇಖರ್ ಎಂದೇ ಪ್ರಸಿದ್ಧರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಸ್ವರ್ಣಪದಕಗಳೊಂದಿಗೆ ಪಡೆದ ಇವರು ಮೂಲತ: ಕನ್ನಡದ ಪ್ರಾಧ್ಯಾಪಕರು. ತಮ್ಮ ಗ್ರಾಮದ ಒಳಿತಿಗಾಗಿ ಇವರು ಪ್ರಾರಂಭಿಸಿದ ‘ಅಭಿವ್ಯಕ್ತಿ ಸಾಂಸ್ಕøತಿಕ ವೇದಿಕೆ’ಯು ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳು ಹಾಗೂ ಪ್ರತೀ ಯುಗಾದಿ ಸಮಯದಲ್ಲಿ ನಡೆಸುವ ‘ನಾಗತಿಹಳ್ಳಿ ಸಾಂಸ್ಕøತಿಕ ಹಬ್ಬ’ದಿಂದ ಗ್ರಾಮೀಣ ಜನರ ಸಾಂಸ್ಕøತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು. ಈ ವೇದಿಕೆಯ ಮೂಲಕ ಗ್ರಾಮೀಣ ಜನರ ಆರ್ಥಿಕ ಸಮಸ್ಯೆಗೂ ಸ್ಪಂದಿಸುತ್ತಿರುವ ಸಂಗತಿ ಸುತ್ತುಮುತ್ತಲ ಗ್ರಾಮಸ್ಥರನ್ನು ಜಾಗೃತಿಗೊಳಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪ್ರೇರೇಪಿಸಿತು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English