ಶಕ್ತಿನಗರದ ರಾಜೀವನಗರ ವಾಸಿಗಳಿಗೆ ಹಕ್ಕುಪತ್ರ: ಶಾಸಕ ಜೆ.ಆರ್.ಲೋಬೊ ಭರವಸೆ

2:17 PM, Wednesday, October 25th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

JR loboಮಂಗಳೂರು: ರಾಜೀವನಗರದ ನಿವಾಸಿಗಳಿಗೆ ಹಕ್ಕುಪತ್ರ ಕೊಡಲು ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಲಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಶಕ್ತಿನಗರ ರಾಜೀವ ನಗರ ನಿವಾಸಿಗಳ ಸಭೆ ನಡೆಸಿ ಅಹವಾಲು ಸ್ವೀಕರಿಸಿ ಮಾತನಾಡುತ್ತಿದ್ದರು.

ರಾಜೀವ ನಗರದ ನಿವಾಸಿಗಳು 25 ವರ್ಷಗಳಿಂದ ವಾಸಿಸುತ್ತಿದ್ದು ಹಕ್ಕುಪತ್ರ ನೀಡಿಲ್ಲ. ಕೆಲವರು ಮಾರಿಕೊಂಡಿದ್ದಾರೆ. ಇನ್ನೂ ಕೆಲವರು ಖಾಲಿ ಸ್ಥಳದಲ್ಲಿ ವಾಸವಾಗಿದ್ದಾರೆ ಎಂದು ಸ್ಥಳೀಯ ಸಮಸ್ಯೆಗಳನ್ನು ಮಾಜಿ ಮೇಯರ್ ಅಬ್ದುಲ್ ಅಜೀಜ್ ಹೇಳಿದಾಗ ಶಾಸಕರಾದ ಜೆ.ಆರ್.ಲೋಬೊ ಅವರು ಯಾರು ವಾಸವಾಗಿದ್ದಾರೆ ಎಂಬುದನ್ನು ಖಚಿತ ಪಡಿಸಲು ಅಧಿಕಾರಿಗಳು ಬರಲಿದ್ದಾರೆ ಎಂದರು.

ಇಲ್ಲಿಯ ಸಮಸ್ಯೆಯನ್ನು ಬೇರೆ ರೀತಿಯಲ್ಲಿ ನೋಡಬೇಕು. ಒಂದು ವಾಸವಿದ್ದವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಇನ್ನೊಂದು ಸ್ಥಳವನ್ನು ಮಾರಾಟ ಮಾಡಿಕೊಂಡು ಹೋಗಿದ್ದಾರೆ. ಕೆಲವರಿಗೆ ಹಕ್ಕುಪತ್ರ ಕೊಡಲು 3- 4 ಲಕ್ಷ ರೂಪಾಯಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಹಣ ಕೊಡಲು ಹೋಗಬಾರದು ಎಂದು ಲೋಬೊ ಅವರು ಹೇಳಿದರು.

ನೀವು ಕೊಟ್ಟಿರುವ ಅರ್ಜಿಯ ಆಧಾರದಲ್ಲಿ ಅವುಗಳನ್ನು ಸ್ಥಳ ತನಿಖೆ ಮಾಡಲು ಅಧಿಕಾರಿಗಳು ಬಂದಾಗ ನಿಮ್ಮಲ್ಲಿರುವ ದಾಖಲೆಪತ್ರಗಳನ್ನು ಕೊಡಿ ಎಂದು ತಿಳಿಸಿದ ಶಾಸಕರು ಯಾರು ಅಧಿಕೃತವಾಗಿ ಸ್ಥಳದಲ್ಲಿ ವಾಸಿಸುತ್ತಿದ್ದಾರೆ ಅವರಿಗೆ ಖಂಡಿತಾ ಹಕ್ಕುಪತ್ರ ಸಿಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಭರವಸೆ ಕೊಟ್ಟರು.

ಇದೇ ಸಂದರ್ಭದಲ್ಲಿ ಸ್ಥಳಿಯರ ಐದು ಮಂದಿ ಸಮಿತಿಯನ್ನು ಮಾಡಲಾಯಿತು. ಈ ಸಮಿತಿಯವರು ಅಧಿಕಾರಿಗಳಿಗೆ ನೆರವಾಗುತ್ತಾರೆ. ಮಹಿಳೆಯರಿಗೆ ಹಕ್ಕುಪತ್ರ ಕೊಡುವುದರಿಂದ ಮಹಿಳೆಯರು 32 ಸಾವಿರ ರೂಪಾಯಿ ಆದಾಯ ಪತ್ರವನ್ನು ಹೊಂದುವುದು ಕಡ್ಡಾಯವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಉಪಯುಕ್ತ ಗೋಕುಲ್ ದಾಸ್ ನಾಯ್ಕ್, ಮರಿಯಮ್ಮ ಥೋಮಸ್, ಮಾಜಿ ಮೇಯರ್ ಅಬ್ದುಲ್ ಅಜೀಜ್ ಮುಂತಾದವರು ಉಪಸ್ಥಿತರಿದ್ದರು..

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English