ಚಾರಿತ್ರಿಕ ಮಹತ್ವಕ್ಕಾಗಿ ಉಪವಾಸ ಕಾರ್ಯಕ್ರಮ

1:50 PM, Thursday, October 26th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

pv mohanಮಂಗಳೂರು: ಇಂದು ದೇಶದಲ್ಲಿ ಉದ್ದಗಲಗಳಲ್ಲಿ, ರಾಜ್ಯದಲ್ಲಿ ವಿಶೇಷವಾಗಿ ಕರಾವಳಿ ಕರ್ನಾಟಕವೆನ್ನುವ ನಮ್ಮ ಪ್ರದೇಶದಲ್ಲಿ ಉದ್ವಿಗ್ನತೆಯ, ಸಂವಿಧಾನಿಕ ವ್ಯವಸ್ಥೆ ಬಗ್ಗೆ, ಧಿಕ್ಕಾರವನ್ನು ನಾವು ಕಾಣುತ್ತಿದ್ದೇವೆ. ಕಾನೂನು ಕಟ್ಟಳೆಗಳನ್ನು ಅಣಕ ಮಾಡುವ ರೀತಿಯಲ್ಲಿ ಘಟನೆಗಳು ನಡೆಯುತ್ತಿವೆ. ಜನರ ವೈಯಕ್ತಿಕ ಬದುಕಿನ ಮೇಲೆ ಹಿಂಸಾತ್ಮಕ ದಾಳಿ ಮಾಡುವ ಅನಾಗರಿಕ ಆಚಾರವು ಅಲ್ಲಲ್ಲಿ ನೋಡುತ್ತಿದ್ದೇವೆ. ಜಾತೀಯವಾದಿ ಸಂಕುಚಿತತೆ, ಧಾರ್ಮಿಕ ಅಸಹಿಷ್ಣುತೆ ಮತ್ತು ರಾಜಕಾರಣದಲ್ಲಿ ಸೈದ್ಧಾಂತಿಕತೆಯ ರಾಜಕೀಯ ಸಂಪೂರ್ಣ ಗೈರು ಹಾಜರಿ ನಮ್ಮೆಲ್ಲರನ್ನು ಕಂಗೆಡಿಸಿದೆ. ವಿಭಿನ್ನ ಬಗೆಯ ಕೋಮುವಾದಿ ಮನೋಭಾವಗಳು, ವಿಭಜನೆಯ ಚಿಂತನೆಗಳು ನಮ್ಮೆಲ್ಲರ ಪ್ರಜ್ಞೆಯ ಆಳಕ್ಕಿಳಿದು ನಮ್ಮ ಲೋಕ ದೃಷ್ಟಿಯನ್ನು ನಿರ್ಣಾಯಕ್ತವಾಗಿ ರೂಪಿಸಿದೆ. ಇಂದು ಕೋಮುವಾದ, ಜಾತೀವಾದ, ಧಾರ್ಮಿಕ ಮೂಲಭೂತವಾದ, ಮತಾಂಧತೆ ಹಾಗೂ ಪ್ರತ್ಯೇಕತಾ ಮನೋಭಾವಗಳು ನಮ್ಮ ಚಿಂತನೆಗಳನ್ನು ರೂಪಿಸುವ ಮತ್ತು ರಾಜಕೀಯ ನಿಲುವುಗಳನ್ನು ನಿರ್ಧರಿಸುವ ವಿಷಯಗಳಾಗಿವೆ.

ಇಂತಹ ನಿರಾಶಾದಾಯಕವಾದ ಮತ್ತು ಹಿಂಸೆಯಿಂದ ರಾರಾಜಿಸುವ ಸನ್ನಿವೇಶದಲ್ಲಿ ಅತ್ಯಂತ ಆಳವಾದ ಪ್ರಜಾತಾಂತ್ರಿಕ ವೈಚಾರಿಕತೆಯಿಂದ ಸೃಷ್ಟಿಗೊಳ್ಳುವ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಒಲವು, ನಿಲುವುಗಳನ್ನು ಮತ್ತೆ ನಾವು ಮರು ಸಂಘಟಿಸುವ ಅಗತ್ಯವಿದೆ. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಸದಾ ಪ್ರಾರ್ಥನೆಯ ಸಬ್‌ಕೋ ಸನ್ಮತಿ ದೇ ಭಗವಾನ್, ಇದರ ಪ್ರಕಾರ ಸನ್ಮತಿಯನ್ನು ಬಿತ್ತುವ ಪ್ರಯತ್ನಗಲನ್ನು ನಡೆಸುವ ಅಗತ್ಯವಿದೆ. ಸಹನೆಯ ಸಂದೇಶವನ್ನು ತಲುಪಿಸುವ ಕ್ರಿಯಾತ್ಮಕ ಯೋಜನೆಗಳ ಅವಶ್ಯಕತೆ ಇದೆ. ನಾವು ಹೆಚ್ಚು ಕಮ್ಮಿ ಮರೆತೇ ಬಿಟ್ಟಿರುವ ನಮ್ಮ ಸ್ವಾತಂತ್ರ್ಯ ಹೋರಾಟದ ಧ್ಯೇಯೋದ್ದೇಶಗಳಾದ ಪ್ರಜಾತಂತ್ರ, ಸೆಕ್ಯೂಲರ್‌ವಾದ, ಸಾಮಾಜಿಕ ನ್ಯಾಯ ಮತ್ತು ಬಹುಸಂಸ್ಕೃತೀಯನ್ನು ನಾವು ಜನ ಸಮುದಾಯಗಳಲ್ಲಿ ಮತ್ತೆ ಕೊಂಡೊಯ್ಯುವ ಹಾಘೂ ಬೆಳೆಸುವ ದೇಶ ನಿರ್ಮಾಣದ ಕಾರ್ಯವೊಂದನ್ನು ನಾವು ಅತ್ಯಂತ ನಿಷ್ಠೆಯಿಂದ ಕೈಗೆತ್ತಿಕೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದಲ್ಲಿ ಕದಡಿ ಹೋಗಿರುವ ಸಮುದಾಯಗಳ ನಡುವಿನ ಸೌಹಾರ್ದ ಮತ್ತು ಸಹಕಾರಗಳನ್ನು ಮರುಪ್ರತಿಷ್ಠಾಪಿಸುವುದು ಬಹಳ ಜರೂರಾಗಿದೆ. ಇಡೀ ದೇಶಕ್ಕೆ ಮಾದರಿ ಯಾಗಬಹುದಾದ ಮತೀಯ ಸಾಮರಸ್ಯದ ಚರಿತೆಯುಳ್ಳ ಈ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಸಂಬಂಧಗಳನ್ನು ಜೋಡಿಸಬೇಕಾಗಿದೆ. ಮಾನವೀಯ ಮೌಲ್ಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವದ ಅರಿವು ಜನರಿಗೆ ತಲುಪಿಸಬೇಕಾಗಿದೆ. ಹಾಗೂ ಹದಗೆಡುತ್ತಿರುವ ನಮ್ಮ ಸಾಮಾಜಿಕ ವಾಸ್ತವದಲ್ಲಿ ಸಕ್ರಿಯ ನಾಗರಿಕತ್ವ ಅವಶ್ಯಕತೆಯನ್ನೂ ಎತ್ತಿ ಹಿಡಿಯಬೇಕಾಗಿದೆ. ಈ ದೃಷ್ಟಿಯಿಂದ ಜನಜಾಗೃತಿಯನ್ನು, ಲೋಕ ಎಚ್ಚರದ ಕೆಲಸವನ್ನು ಒಂದು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರಾಜಕೀಯವಾಗಿ ಮಾಡಬಹುದಾದ ಸಾರ್ವಜನಿಕ ಕ್ರಿಯೆಯೇ ಉಪವಾಸ ಸತ್ಯಾಗ್ರಹ ಎಂದು ನಾವು ನಂಬಿಕೊಂಡಿದ್ದೇವೆ. ಉಪವಾಸ ಸತ್ಯಾಗ್ರಹಕ್ಕೆ ಸಂತರ ಪರಂಪರೆಯಿದೆ. ಆಧ್ಯಾತ್ಮಿಕ ಸಿಂಚನವಿದೆ. ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಸ್ವರಾಜ್ಯದ ರಾಜಕಾರಣದ ಕೇಂದ್ರ ಬಿಂದುವಾದ ಉಪವಾಸ ಸತ್ಯಾಗ್ರಹದ ಕಲ್ಪನೆಗಳನ್ನು ಮರುನೆನಪಿಸಿಕೊಂಡು ನಿರ್ದಿಷ್ಟ ಕಾರಣಗಳಿಗೆ ಮತ್ತು ಚಾರಿತ್ರಿಕ ಮಹತ್ವಕ್ಕಾಗಿ ಈ ಕೆಳಗಿನ ದಿನಗಳನ್ನು ಮತ್ತು ಸ್ಥಳಗಳನ್ನು ಉಪವಾಸ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲಾಗಿದೆ.

1) ಅಕ್ಟೋಬರ್ 31 : ಶ್ರೀಮತಿ ಇಂದಿರಾಗಾಂಧಿ ನಿಧನರಾದ ದಿನ
ಸ್ಥಳ: ತೊಕ್ಕೊಟ್ಟು, ಮಂಗಳೂರು ತಾಲೂಕು
2) ನವೆಂಬರ್ 16 : ಅಂತರಾಷ್ಟ್ರೀಯ ಸಹಿಷ್ಣುತೆಯ ದಿನ
ಸ್ಥಳ: ಪುತ್ತೂರು, ದಕ್ಷಿಣ ಕನ್ನಡ
3) ನವೆಂಬರ್ 13 : ಅಂತರಾಷ್ಟ್ರೀಯ ಕಾರುಣ್ಯ ದಿನ
ಸ್ಥಳ: ಸುಳ್ಯ, ದಕ್ಷಿಣ ಕನ್ನಡ
4) ನವೆಂಬರ್ 26 : ಸಂವಿಧಾನದ ದಿನ
ಸ್ಥಳ: ಬಂಟ್ವಾಳ, ದಕ್ಷಿಣ ಕನ್ನಡ
5) ಡಿಸೆಂಬರ್ 6 : ಅಂಬೇಡ್ಕರ್ ನಿಧನರಾದ ದಿನ

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English