ಹಿಂದೂ ಕಾರ್ಯಕರ್ತನ ಪ್ರಕರಣ, ಅ.28ರಂದು ಬಂದ್ ಗೆ ಕರೆ

12:17 PM, Friday, October 27th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Belthangadi ಮಂಗಳೂರು: ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮೆಕ್ಕಾ ಮಸೀದಿಯ ಅವಹೇಳನ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಸಂಬಂಧಪಟ್ಟಂತೆ ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಪೋಲೀಸರು ಅಮಾಯಕ ಹಿಂದೂ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸಿದ್ದಾರೆ ಎಂದ ಬೆಳ್ತಂಗಡಿ ಹಿಂದೂ ಸಂಘಟನೆಗಳು ಆರೋಪಿಸಿವೆ. ಪೊಲೀಸ್ ಅಧಿಕಾರಿಗಳ ಈ ಹುನ್ನಾರವನ್ನು ವಿರೋಧಿಸಿ ಅಕ್ಟೋಬರ್ 28 ಶನಿವಾರದಂದು ಬೆಳ್ತಂಗಡಿಯ ಕಡಬ ಬಂದ್ ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಕಡಬದಲ್ಲಿ ಗುರುವಾರ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿವೆ.

ವಾಟ್ಸಾಪ್ ಅವಹೇಳನ ಪ್ರಕರಣದಲ್ಲಿ ಆರೋಪಿತ ಯುವಕನನ್ನು ಸಂಘಟನೆಯ ಪ್ರಮುಖರೇ ಪೋಲೀಸರಿಗೆ ಒಪ್ಪಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು.

ಆದರೆ, ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕರನ್ನು ಸಿಲುಕಿಸಲು ಪೊಲೀಸ್ ಅಧಿಕಾರಿಗಳು ಯತ್ನಿಸುತಿದ್ದಾರೆ ಎಂದು ಹಿಂದೂ ಸಂಘಟನೆಯ ಮುಖಂಡರು ಕಿಡಿಕಾರಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲೀಸರಿಗೆ ನಾವು ಇಷ್ಟೊಂದು ಸಹಕಾರ ನೀಡುತ್ತಿರುವಾಗ ಪ್ರಕರಣಕ್ಕೆ ಸಂಬಂಧಪಡದ ಯುವಕನೊಬ್ಬನನ್ನು ಪ್ರಕರಣದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ಹಿಂದೂಗಳನ್ನು ಧಮನಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English