ಬ್ಲೂವೇಲ್ ಆಟ: ಅಸ್ವಸ್ಥಗೊಂಡಿದ್ದ ಯುವಕ ಹೆತ್ತವರ ಮಡಿಲಿಗೆ

2:28 PM, Monday, October 30th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

blue whaleಮಂಗಳೂರು: ಮಂಜೇಶ್ವರ ಪಾವೂರಿನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರ ಪ್ರಯತ್ನದಿಂದ ಬ್ಲೂವೇಲ್ ಆಟದ ಹಿಂದೆ ಬಿದ್ದು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಯುವಕನೊಬ್ಬ  ಹೆತ್ತವರ ಮಡಿಲು ಸೇರುವಂತಾಗಿದೆ.

ಅಸ್ಸಾಮಿನ ನಾಗೌನ್ ಜಿಲ್ಲೆಯ ಚೋಕ್ಟಾಪ್ ಗ್ರಾಮದ ನೂರುಲ್ ಹಕ್- ಹಲೀಮಾ ಬೇಗಮ್ ದಂಪತಿಯ ಪುತ್ರ ವಾಸಿಂ ಅಕ್ರಂ (22) ರಕ್ಷಿಸಲ್ಪಟ್ಟ ಯುವಕ. ಸುಮಾರು 5 ತಿಂಗಳ ಹಿಂದೆ ಕೇರಳಕ್ಕೆ ಕೆಲಸ ಅರಸಿಕೊಂಡು ಬಂದಿದ್ದ ವಾಸಿಂ ಅಕ್ರಂ ಕೊಚ್ಚಿಯ ವಿಮಾನ ನಿಲ್ದಾಣ ಸಮೀಪದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ.

9ನೇ ತರಗತಿಯವರೆಗೆ ಕಲಿತಿದ್ದ ವಾಸಿಂ ಬ್ಲೂವೇಲ್ ಆಟಕ್ಕೆ ಮರುಳಾಗಿ ಮಾನಸಿಕವಾಗಿ ಅಸ್ವಸ್ಥಗೊಂಡು ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

ಅ. 2ರಂದು ಪಣಂಬೂರು ಬಳಿ ಅಲೆದಾಡುತ್ತಿದ್ದ ಈತನನ್ನು ವಶಕ್ಕೆ ತೆಗೆದುಕೊಂಡ ಇನ್ಸ್‌ಪೆಕ್ಟರ್ ರಫೀಕ್ ಮಂಜೇಶ್ವರದ ಸ್ನೇಹಾಲಯಕ್ಕೆ ಸೇರಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆದ ವಾಸಿಂ ಗುಣಮುಖನಾದ. ಬಳಿಕ ರವಿವಾರ ವಾಸಿಂನನ್ನು ಹೆತ್ತವರಿಗೆ ಹಸ್ತಾಂತರಿಸಲಾಯಿತು.

ಮೂಲತಃ ಪಾಕಿಸ್ತಾನದ ನೂರುಲ್ ಹಕ್ ಊರಲ್ಲಿ ಚಪ್ಪಲಿ ಅಂಗಡಿ ಹೊಂದಿದ್ದ ಇವರ ಪತ್ನಿ ಹಲೀಮಾ ಬೇಗಮ್ ನರ್ಸ್‌ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮತ್ತು ಒರ್ವ ಹೆಣ್ಣು ಮಗಳು. ಹಿರಿಯವನಾದ ಅಕ್ರಂ 9ನೇ ತರಗತಿ ತನಕ ಕಲಿತು ಕೆಲಸ ಅರಸಿಕೊಂಡು ಕೇರಳ ಕಡೆಗೆ ಬಂದಿದ್ದ.

ಊರು ಬಿಟ್ಟು ಬಂದು ವಾಸಿಂ ಬ್ಲೂವೇಲ್ ಆಟದ ಹಿಂದೆ ಬಿದ್ದಿದ್ದ. ಕೊನೆಗೂ ಆತ್ಮಹತ್ಯೆಗೆ ಯತ್ನಿಸಿ ಪಣಂಬೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ. ಅ. 2ರಂದು ಸ್ನೇಹಾಲಯಕ್ಕೆ ಸೇರಿಸಲ್ಪಟ್ಟ ಈತನಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದೆವು. ಗುಣಮುಖವಾಗುತ್ತಲೇ ಹೆತ್ತವರ ಹೆಸರು, ವಿಳಾಸ ಪತ್ತೆ ಹಚ್ಚಿ ಮಾಹಿತಿ ನೀಡಿದೆವು ಎಂದು ಸ್ನೇಹಾಲಯದ ನಿರ್ದೇಶಕ ಜೋಸೆಫ್ ಕ್ರಾಸ್ತಾ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English