ಮಂಗಳೂರು : ನಟ ಧರ್ಮ ಮತ್ತು ಕನ್ನಡದ ನಟಿ ಯಜ್ಞಾಶೆಟ್ಟಿಯೊಂದಿಗೆ ಪರಿಚಯವಾಗಿದೆ. ಬಳಿಕ ಅದು ಸ್ನೇಹ, ಪ್ರೀತಿಗೆ ತಿರುಗಿ. ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು ಎಂಬುದು ಗಾಂಧಿನಗರದಲ್ಲಿ ಸುದ್ದಿಯಾಗಿತ್ತು.
ಖಳನಟನಾಗಿ, ಪೊಲೀಸ್ ಅಧಿಕಾರಿಯಾಗಿ ತಮ್ಮ ಪಾತ್ರಗಳಿಗೆ ಧರ್ಮ ಜೀವತುಂಬುತ್ತಿದ್ದರು. ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಸುಮಾರು 95ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಪೋಷಿಸಿರುವ ಧರ್ಮ ಈಗ ಧರ್ಮ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.
ಶೂಟಿಂಗ್‍ನಲ್ಲಿ ಸಮಯ ಸಿಕ್ಕಾಗಲೆಲ್ಲಾ ಧರ್ಮ ಮತ್ತು ಯಜ್ಞಾ ಫೋನಿನಲ್ಲಿ ಮಾತಾಡುತ್ತಿದ್ದರಂತೆ. ಇಬ್ಬರೂ ಮದುವೆಯಾಗಲೂ ತೀರ್ಮಾನಿಸಿದ್ದರು. ಆದರೆ ಇವರಿಬ್ಬರ ಪ್ರೇಮ ದುರಂತದಲ್ಲಿ ಅಂತ್ಯವಾಗಿದೆ. ಇಬರಿಬ್ಬರ ಲವ್ ಸ್ಟೋರಿ ಮನೆಯವರಿಗೆ ಗೊತ್ತಾಗಿ ಲವ್ ಬ್ರೇಕ್ ಆಗಿದೆ. ಧರ್ಮನ ಮನೆಯವರಿಗೂ ಹುಡುಗಿ ಓಕೆ ಆಗಲಿಲ್ಲ. ಯಜ್ಞಾ ಮನೆಯವರೂ ಲವ್ ಮಾಡ್ಬೇಡಾ ಅಂದಿದ್ದಾರೆ.
ಲವ್ ಪೈಲ್ಯುರ್ ಆಗಿ ವಿರಹ ವೇದನೆಯಲ್ಲಿ ಧರ್ಮ ಕಾಲ ಕಳೆಯುತ್ತಿದ್ದು, ಅತ್ತ ಅವಕಾಶಗಳೂ ಇಲ್ಲದೆ ಇತ್ತ ಪ್ರೀತಿಸಿದ ಹುಡುಗಿಯೊ ಸಿಗದೆ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.
Click this button or press Ctrl+G to toggle between Kannada and English