ಲಕ್ಷದ್ವೀಪ ಮಂಗಳೂರು ಹಳೆ ಬಂದರಿನಲ್ಲಿ ವಾಣಿಜ್ಯ ವ್ಯವಹಾರ ಮುಂದುವರಿಸಲು ಒಪ್ಪಿಗೆ : ಶಾಸಕ ಜೆ.ಆರ್.ಲೋಬೊ

5:43 PM, Tuesday, October 31st, 2017
Share
1 Star2 Stars3 Stars4 Stars5 Stars
(No Ratings Yet)
Loading...

JR loboಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದ ನಿಯೋಗದ ಸಮಗ್ರ ಮಾಹಿತಿ ಮತ್ತು ಒಡಂಬಡಿಕೆಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಲಕ್ಷದ್ವೀಪ ಆಡಳಿತ ಮಂಡಳಿ ಮಂಗಳೂರು ಬಂದರಿನ ಮೂಲಕ ವಾಣಿಜ್ಯ ವ್ಯವಹಾರ ಮುನ್ನಡೆಸಲು ಒಪ್ಪಿಗೆ ನೀಡಿತು. ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ನಿಯೋಗ ಲಕ್ಷದ್ವೀಪಕ್ಕೆ ಅಕ್ಟೋರ್ 30, 31 ಹಾಗೂ ನವೆಂಬರ್ 1 ರವರೆಗೆ ಹೋಗಿ ಮಾತುಕತೆ ನಡೆಸಿತು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ 100 ಕೋಟಿ ರೂಪಾಯಿ ಮೊತ್ತದ ಯೋಜನೆ ಮಂಜೂರಾಗಿದೆ. ಹಾಗೂ 70 ಕೋಟಿ ರೂಪಾಯಿ ವೆಚ್ಚದಲ್ಲಿ ಲಕ್ಷದ್ವೀಪ ವಾಣಿಜ್ಯ ಮತ್ತು ಪ್ಯಾಸೆಂಜರ್ ನೌಕೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 9 ಒಡಂಬಡಿಕೆಯನ್ನು ಮೂರು ವರ್ಷಗಳ ಹಿಂದೆ ಮಾಡಿಕೊಂಡಿದ್ದು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಜೆ.ಆರ್.ಲೋಬೊ ನೇತೃತ್ವದ ನಿಯೋಗವನ್ನು ಲಕ್ಷದ್ವೀಪಕ್ಕೆ ಕಳುಹಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿತ್ತು.

ಲಕ್ಷದ್ವೀಪದ ಅಧಿಕಾರಿಗಳ ಮನಪರಿವರ್ತನೆ ಮಾಡುವಲ್ಲಿ ಶಾಸಕ ಜೆ.ಆರ್.ಲೋಬೊ ಅವರ ನಿಯೋಗ ಫಲಪ್ರದವಾಗಿದ್ದು ಇಲ್ಲಿ ನಡೆದ ಮಾತುಕತೆಗಳ ಆಧಾರದಲ್ಲಿ ಲಕ್ಷದ್ವೀಪದ ಅಧಿಕಾರಿಗಳ ನಿಯೋಗ ಕೂಡಾ ಆದಷ್ಟು ಬೇಗನೆ ಮಂಗಳೂರಿಗೆ ಭೇಟಿ ಕೊಡಲಿದೆ. ಶಾಸಕ ಜೆ.ಆರ್.ಲೋಬೊ ಅವರ ನೇತ್ರೂತ್ವದ ನಿಯೋಗ ಲಕ್ಷದ್ವೀಪ ಆಡಳಿತ ಅಧಿಕಾರಿ ಆಗಿರುವಂತಹ ಫಾರೂಕ್ ಖಾನ್ (ನಿವೃತ್ತ ಐಪಿಎಸ್ ಅಧಿಕಾರಿ), ಅಂಕೂರ್ ಮಿಶ್ರ ನಿರ್ದೇಶಕರು ಬಂದರು ಹಾಗೂ ನಾಗರಿಕ ವಿಮಾನ ಇಲಾಖೆ ಪಾರೀಕ್ ಥೋಮಸ್ ಐಎ ಎಸ್ ಜಿಲಾಧಿಕಾರಿಗಳು ಹಾಗೂ ಬಂದರ ಇಲಾಖೆಯ ಕಾರ್ಯದರ್ಶಿಗಳು ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

ಮಾತುಕತೆ ವೇಳೆ ಲಕ್ಷದ್ವೀಪ ಆಡಳಿತ ಮಂಡಳಿ ತಾವು ಹೊಸ ಮೂಲಭೂತ ಸೌಕರ್ಯಗಳನ್ನು ಲಕ್ಷದ್ವೀಪದ ಹಣಕಾಸು ಇಲಾಖೆಯ ನೆರವಿನಿಂದ ಸೂಕ್ತ ಒಪ್ಪಂದಗಳು ಇದ್ದಲ್ಲಿ ಮಾತ್ರ ಮುಂದೆ ಹೋಗುವುದಾಗಿ ಮತ್ತು ಇಲ್ಲದಿದ್ದಲ್ಲಿ ಮುಂದೆ ಹೋಗಲು ಇಚ್ಚಿಸುವುದಿಲ್ಲವೆಂದು ನಿಖರವಾಗಿ ತಿಳಿಸಿದರು. ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಅನುಷ್ಟಾನಕ್ಕೆ ತರದಿರುವುದು ಮತ್ತು ಮಂಗಳೂರು ಬಂದರಿನ ಅನುಕೂಲತೆಗಳನ್ನು ಶಾಸಕ ಜೆ.ಆರ್.ಲೋಬೊ ಅವರು ವಿವರವಾಗಿ ತಿಳಿಸಿದ ನಂತರ ಲಕ್ಷದ್ವೀಪ ಅಧಿಕಾರಿಗಳು ತಮ್ಮ ನಿಲುವನ್ನು ಬದಲಿಸಿದರು ಎಂದು ಲೋಬೊ ಅವರು ತಿಳಿಸಿದ್ದಾರೆ.

ಮಂಗಳೂರು ಹಳೆ ಬಂದರಿನಲ್ಲಿ ಲಕ್ಷದ್ವೀಪಕ್ಕೆ ಬೇಕಾಗಿರುವಂತ ಸಾಮಾಗ್ರಿಗಳು ಕಡಿಮೆ ದರದಲ್ಲಿ ದೊರಕುವುದರಿಂದ, ಸರಕುಗಳನ್ನು ಹಡಗಿಗೆ ಲೋಡ ಮಾಡಲು ತಗಲುವ ವೆಚ್ಚ ಹಾಗೂ ಸಮಯ ಕಡಿಮೆ ಆಗಿರುವುದರಿಂದ ಹಾಗೂ ಕೆಲವು ದ್ವೀಪಗಳು ಮಂಗಳೂರು ಬಂದರಿಗೆ ಹತ್ತಿರವಾಗಿರುವುದರಿಂದ ಮಂಗಳೂರು ಬಂದರಿನ ವಾಣಿಜ್ಯ ಸಂಪರ್ಕ ಲಕ್ಷದ್ವೀಪಕ್ಕೆ ಅನುಕೂಲಕರವಾಗಿರುವುದಾಗಿ ಅವರು ಮನಗಂಡರು. ಆದರೆ ದೊಡ್ಡ ನೌಕೆಗಳು ಬಂದರಿನ ಒಳಗೆ ಬರಲು ಅವಶ್ಯಕವಾಗುವ ಸುಮಾರು 6 ರಿಂದ 7 ಮೀಟರ್ ಆಳದ ಕಾಲುವೆಯ ಮಾರ್ಗದ ಅವಶ್ಯಕತೆ ಇದೆ. ಇವೊತ್ತಿಗೆ ಕೇವಲ 2 ರಿಂದ 3 ಮೀಟರ್ ಮಾತ್ರ ಆಳ ಇರುವುದರಿಂದ ಇದನ್ನು ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ. ಇದಲ್ಲದೆ ಲಕ್ಷದ್ವೀಪಕ್ಕೆ ಪ್ರವಾಸೋದ್ಯಮದ ಅಭಿವೃದ್ಧಿ ಆಗಲು ಬಹಳಷ್ಟು ಅವಕಾಶಗಳಿದ್ದು ಇದೂ ಕೂಡಾ ತಮಗೆ ಪೂರಕವಾಗುವುದಾಗಿ ಒಪ್ಪಿದ ಅವರು ಮಂಗಳೂರು ವಿದ್ಯಾಕೇಂದ್ರವಾಗಿರುವುದರಿಂದ ಯುವಕರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದಾಗಿಯೂ, ಆರೋಗ್ಯ ಸೇವೆಯ ಕೂಡಾ ಕಡಿಮೆ ವೆಚ್ಚದಲ್ಲಿರುವುದಾಗಿ ಅವರು ಒಪ್ಪಿದರು.

ಅಲ್ಲದೆ ದ್ವೀಪಗಳಿಗೆ ಅತ್ಯವಶ್ಯಕವಾಗಿರುವ ಪೆಟ್ರೋಲಿಯಂ ಉತ್ಪನ್ನಗಳು ಕೂಡಾ ಇಲ್ಲಿಂದ ತರಬಹುದೆಂದು ಕೂಡಾ ಅವರು ಒಪ್ಪಿದರು. ಈ ಕಾರಣದಿಂದ ಮಂಗಳೂರು ಬಂದರಿನಲ್ಲಿ ಸರಕು ಹಾಗೂ ಪ್ರಯಾಣಿಕರ ಸೌಕರ್ಯಕ್ಕೆ ಜೆಟ್ಟಿ ನಿರ್ಮಾಣಕ್ಕೆ ಮತ್ತು ಇದರ ಮೂಲಭೂತ ಸೌಕರ್ಯಗಳನ್ನು ಮಾಡುವುದು ಅತೀ ಅಗತ್ಯವೆಂದು ಲಕ್ಷದ್ವೀಪ ಅಧಿಕಾರಿಗಳು ಸಮ್ಮತಿಸಿದರು. ಇದಲ್ಲದೇ ಲಕ್ಷದ್ವೀಪದ ಜನಸಾಮಾನ್ಯರೂ ಕೂಡಾ ಶಾಸಕರು ಮಾತನಾಡುವಾಗ ಹೆಚ್ಚಿನ ಜನರು ಮಂಗಳೂರಿನ ಜೊತೆ ತಮ್ಮ ಸಂಪರ್ಕವನ್ನು ಅಭಿವೃದ್ಧಿಗೊಳಿಸಲು ಬಯಸಿದರು. ಲಕ್ಷದ್ವೀಪಕ್ಕೆ ಅವಶ್ಯಕತೆ ಇರುವ ಎಲ್ಲಾ ಸಾಮಾಗ್ರಿಗಳನ್ನು ಹೊರಗಡೆಯಿಂದಲೇ ಬರಬೇಕಾಗಿರುವುದರಿಂದ ಇದನ್ನು ಬಂದರಿಗೆ ತಾಗಿರುವ ನಗರಗಳೊಂದಲೇ ಖರೀದಿಸಬೇಕಾಗಿದೆ. ಈ ಮೂಲಕ ಜನರಿಗೆ ವ್ಯಾಪಾರ ವಹಿವಾಟು ಜಾಸ್ತಿಯಾಗುವುದಲ್ಲದೆ ರಾಜ್ಯ ಬೊಕ್ಕಸಕ್ಕೆ ತೆರಿಗೆ ಆದಾಯ ಹೆಚ್ಚಾಗುತ್ತದೆ. ಬಂದರಿನಲ್ಲಿ ನೂರಾರು ಮಂದಿಗೆ ಕೆಲಸ ಸಿಗುವ ಅವಕಾಶವಾಗಲಿದೆ ವಿದ್ಯಾ ಸಂಸ್ಥೆಗಿಗೆ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗಳಿಗೆ ಹೆಚ್ಚಿನ ರೀಗಿಗಳು ಸಿಗುವ ಸಾಧ್ಯತೆ ಇದೆ. ಇದಕ್ಕಿಂತಲೂ ಹೆಚ್ಚಿಗೆ ಲಕ್ಷದ್ವೀಪದಲ್ಲಿ ಪ್ರವಾಸಿಗಳು ಮಂಗಳೂರಿನ ಮೂಲಕ ಲಕ್ಷದ್ವೀಪಕ್ಕೆ ಹೋಗಲು ಹೆಚ್ಚಿನ ಅವಕಾಶವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಾದ ಬಂದರು ಮತ್ತು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾದ ರಮೇಶ್ ಎನ್.ಎಸ್, ಬಂದರು ಇಲಾಖೆಯ ನಿರ್ದೇಶಕರಾದ ಕ್ಯಾ. ಸಿ.ಸ್ವಾಮಿಯವರು ಬಂದರು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಾದ ಕೆ.ಆರ್. ದಯಾನಂದ್, ಮುಖಂಡರಾದ ಡೆನಿಸ್ ಡಿ’ಸಿಲ್ವಾ ಹಗೂ ನೆಲ್ಸನ್ ಮೋಂತೆರ್ ಅವರು ಇದ್ದರು.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English