ಬೆಂಗಳೂರು : ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್ಸ್ ಪೆಕ್ಟರ್ ಸುದರ್ಶನ್ ಎಂಬುವರ ಪತ್ನಿ ಶುಭಾ ತನ್ನ ಪತಿಯ ಸರ್ವಿಸ್ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಶನಿವಾರ ಮಧ್ಯ ರಾತ್ರಿ ವೇಳೆ ಪ್ರಾಣ ಬಿಟ್ಟಿದ್ದಾರೆ.
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ನಿರ್ಣಯ ಕೈಗೊಳ್ಳಲಾಗದೆ ಪತಿಯೊಡನೆ ಸದಾ ಜಗಳವಾಡುತ್ತಿದ್ದ ಶುಭಾ ಅವರು ಸಾವಿನಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.
ಹಾಸನ ಮೂಲದ ಶುಭಾ ಅವರು 12 ವರ್ಷದ ಹಿಂದೆ ಸುದರ್ಶನ್ ಪಿಎಸ್ ಎಂಬ ಪೊಲೀಸ್ ಅಧಿಕಾರಿಯನ್ನು ಮದುವೆಯಾಗಿದ್ದರು. ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ಸಮೀಪದ ಬಡಾವಣೆಯಲ್ಲಿ ಈ ಕುಟುಂಬ ವಾಸವಾಗಿದ್ದು ಎರಡು ಗಂಡು ಮಕ್ಕಳನ್ನು ಈ ದಂಪತಿ ಹೊಂದಿದ್ದಾರೆ.
ಭಾನುವಾರ ರಾತ್ರಿ 12.30 ವೇಳೆಯಲ್ಲೇ ಜಗಳ ನಡೆದಿತ್ತು. ದಿನ ಜಗಳ, ಹೊಡೆದಾಟ, ಕೂಗಾಟ ಮಾಮೂಲಿಯಾಗಿದ್ದರಿಂದ ನಾವು ಕೂಡಾ ಏನು ಎಂದು ವಿಚಾರಿಸಲು ಹೋಗಲಿಲ್ಲ. ಬೆಳಗ್ಗೆ ನೋಡಿದರೆ ಶುಭಾ ಅವರು ಗುಂಡು ಹೊಡೆದುಕೊಂಡು ಪ್ರಾಣಬಿಟ್ಟಿದ್ದಾರೆ ಎಂದು ನೆರೆಮನೆಯವರು ಹೇಳಿದ್ದಾರೆ.
Click this button or press Ctrl+G to toggle between Kannada and English