ಟಿಪ್ಪು ಜಯಂತಿ ಆಚರಿಸದಂತೆ ಹಿಂದುತ್ವವಾದಿ ಸಂಘಟನೆಗಳ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ

5:28 PM, Thursday, November 2nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

putturuಮಂಗಳೂರು: ಟಿಪ್ಪು ಜಯಂತಿ ಆಚರಿಸದಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸ್ಥಳೀಯ ಸಮಸ್ತ ಹಿಂದುತ್ವವಾದಿ ಸಂಘಟನೆಗಳ ವತಿಯಿಂದ ಪುತ್ತೂರಿನ ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಬೆಳಿಗ್ಗೆ ಶಂಖನಾದದೊಂದಿಗೆ ಪ್ರತಿಭಟನೆ ಆರಂಭವಾಯಿತು. ಶಂಖನಾದವನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ದಯಾನಂದ ಹೆಗ್ಡೆ ಮಾಡಿದರು. ಪ್ರತಿಭಟನೆಯ ನಂತರ ಕರ್ನಾಟಕದ ರಾಜ್ಯಪಾಲರಿಗೆ ಸಹಾಯಕ ಕಮಿಷನರ್ ಮೂಲಕ ಮನವಿ ನೀಡಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಶ್ರೀ ಜನಾರ್ದನ ಗೌಡ, ಹಿಂದೂ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲ, ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿದರು.

putturuಶ್ರೀ ಕೃಷ್ಣ ಉಪಾಧ್ಯಾಯ, ಖ್ಯಾತ ವಾಗ್ಮಿಗಳು, ಪುತ್ತೂರು: ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿ ಸಮಸ್ತ ಕರ್ನಾಟಕಕ್ಕೆ ಮೋಸಮಾಡುತ್ತಿರುವ ಮಾನ್ಯ ಕರ್ನಾಟಕ ಸರಕಾರದ ನಿಜಮುಖ ಬಯಲಾದಂತಾಗಿದೆ. ಮಾನ್ಯ ಸಿದ್ಧರಾಮಯ್ಯನವರ ನೇತೃತ್ವದ ಸರಕಾರದ ಮುಕ್ತಾಯದ ಸಮಯ ಸಮೀಪಿಸುತ್ತಿದೆ. ಟಿಪ್ಪು ಜಯಂತಿ ಇದು ಕರ್ನಾಟಕ ಸರಕಾರದ ಆಡಳಿತಾವಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಕಪ್ಪು ಚುಕ್ಕೆಯ ಕೊಡುಗೆಯಾಗಿದೆ. ‘ಟಿಪ್ಪೂ ಸುಲ್ತಾನನು ಆ ಕಾಲದಲ್ಲಿ ಸಮೀಪದ ಸುಳ್ಯದ ಪೆರಾಜೆ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದ, ದ.ಕ ಜಿಲ್ಲೆ & ಕೊಡಗಿನಿಂದ ಮಲಬಾರಿನವರೆಗೂ ಹಿಂದೂ ದೇವಾಲಯಗಳನ್ನು ನಾಶಮಾಡಿದ, 70 ಸಾವಿರಕ್ಕಿಂತಲೂ ಹೆಚ್ಚು ಕ್ರೈಸ್ತರನ್ನು ಮತಾಂತರ ಮಾಡಿದ ಕ್ರೂರಿ ಮತಾಂಧ ಟಿಪ್ಪುಸುಲ್ತಾನನು ದಕ್ಷಿಣ ಭಾರತದ ೮ ಸಾವಿರಕ್ಕಿಂತಲೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದನು ಎಂದು ಉಲ್ಲೇಖವಿದೆ. ಈ ರೀತಿ ಟಿಪ್ಪುವಿನ ಮತಾಂಧತೆ, ಅಸುಹಿಷ್ಣುತೆಯಿಂದಾಗಿ ಲಕ್ಷಾಂತರ ಜನರ ಹತ್ಯೆ, ಲಕ್ಷಾಂತರ ಜನರು ಇಸ್ಲಾಂಗೆ ಮತಾಂತರ ಮತ್ತು ಸಾವಿರಾರು ದೇವಸ್ಥಾನಗಳು ಮಸೀದಿಗಳಾಗಿ ರೂಪಾಂತರ, ಮೂರ್ತಿಗಳ ಧ್ವಂಸ, ಗೋಹತ್ಯೆ ಈ ರೀತಿ ಆತನ ರಕ್ತಸಿಕ್ತ ಆಡಳಿತವಾಗಿತ್ತು, ಹಿಂದೂ ಧರ್ಮದಲ್ಲಿನ ವೇದೋಪನಿಷತ್ತುಗಳು ಸಾರುವುದು ಇಡೀ ಜಗತ್ತಿಗೇ ಒಳ್ಳೆಯದಾಗಲಿ, ಶಾಂತಿ ನೆಮ್ಮದಿ ನೆಲೆಸಲಿ ಎಂಬ ಸಾರಾಂಶವನ್ನು ಸಾರುತ್ತದೆ, ಎಂದರು.

putturuಶ್ರೀ ಅರುಣ್ ಕುಮಾರ್ ಪುತ್ತಿಲ, ಹಿಂದೂ ಮುಖಂಡರು, ಪುತ್ತೂರು: ರಾಜ್ಯದ ಮಾನ್ಯ ಸಿಧ್ಧರಾಮಯ್ಯನವರ ಸರಕಾರ ಮುಸಲ್ಮಾನರ ಓಲೈಕೆಗಾಗಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲು ಹೊರಟಿದೆ. ಯಾವುದೋ ಪಿ.ಎಫ್.ಐ ಸಂಘಟನೆಯು ಇಂದು ರಾಜ್ಯದಲ್ಲಿ ಕೋಲಾಹಲವೆಬ್ಬಿಸಲು ಪ್ರಯತ್ನವನ್ನು ಮಾಡುತ್ತಿದೆ. ನಾವು ಇಂದಿನ ಈ ಪ್ರತಿಭಟನೆಯ ಮೂಲಕ ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಲು ಬಯಸುತ್ತೇವೆ. ಕಳೆದ ೪ ವರ್ಷಗಳಿಂದ ಮತಾಂಧರ ಪರ ನಿಂತು ಹಿಂದೂ ಧರ್ಮದ ಮೇಲೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಟಿಪ್ಪು ಜಯಂತಿ ಸಂದರ್ಭದಲ್ಲಿ ಹಿಂದುತ್ವವಾದಿಗಳ ಹತ್ಯೆಯನ್ನು ಮಾಡಿ ಸರಕಾರ ರಾಜ್ಯದಲ್ಲಿ ಅರಾಜಕತೆ ನಿರ್ಮಾಣ ಮಾಡಿ ರಾಜಕೀಯ ಲಾಭವನ್ನು ಪಡೆಯುತ್ತಿದೆ. ಹಿಂದೂಗಳ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡಿದ ಈ ಕ್ರೂರಿ ಟಿಪ್ಪು ಸುಲ್ತಾನನ ಜಯಂತಿಯನ್ನು ತಕ್ಷಣವೇ ಸರಕಾರ ಪತನವಾಗುವ ಮೊದಲೇ ಎಚ್ಚೆತ್ತು ರದ್ದುಪಡಿಸಬೇಕಾಗಿ ಆಗ್ರಹಿಸುತ್ತೇವೆ.

ಪ್ರತಿಭಟನೆಯ ಸಮಯದಲ್ಲಿ “ಟಿಪ್ಪು ಕ್ರೂರಕರ್ಮಿ ಆಗಿದ್ದನು, ಸುಲ್ತಾನ ಅಲ್ಲ ಕ್ರೂರಿ ಆಗಿದ್ದನು”, “ಇತಿಹಾಸದ ವಿಕೃತಿಕರಣವನ್ನು ತಡೆಯಲು, ಟಿಪ್ಪುಜಯಂತಿ ಆಚರಣೆ ಕೈಬಿಡಿ ಎಂಬ ಘೋಷಣೆಯನ್ನು ಕೊಡಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English