ನ.5 ರಂದು ಬಿ.ಸಿ.ರೋಡಿನಲ್ಲಿ ಹಿಜಾಮ ಚಿಕಿತ್ಸಾ ಉಚಿತ ಶಿಬಿರ

11:12 AM, Friday, November 3rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

hijama treatment ಮಂಗಳೂರು: ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಹಾಗೂ ಯು.ಟಿ.ಖಾದರ್ ಅಭಿಮಾನಿಗಳ ಬಳಗ ಮಂಗಳೂರು ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಭಾನುವಾರ ನ.5 ರಂದು ಉಚಿತ ಹಿಜಾಮ ಚಿಕಿತ್ಸಾ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆ, ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.

ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಯು.ಟಿ.ಖಾದರ್ ಅಭಿಮಾನಿಗಳ ಬಳಗ ಅಧ್ಯಕ್ಷ ಆಶಿಕ್ ಕುಕ್ಕಾಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಮಿತ್ತಬೈಲು ಜುಮಾ ಮಸೀದಿ ಖತೀಬರಾದ ಎಂ.ವೈ. ಅಶ್ರಫ್ ಫೈಝಿ ದುವಾ ನೆರವೇರಿಸಲಿದ್ದಾರೆ. ವೆನ್ಲಾಕ್ ಜಿಲ್ಲಾಸ್ಪತ್ರೆಯ ಯುನಾನಿ ವೈದ್ಯರಾದ ಡಾ. ಸಯ್ಯದ್ ಝಾಹಿದ್ ಹುಸೈನ್ ಹಿಜಾಮ ಕ್ಯಾಂಪ್ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೇರು ಅಭಿವೃಧ್ಧಿ ನಿಗಮದ ಅಧ್ಯಕ್ಷರಾದ ಬಿ.ಎಚ್. ಖಾದರ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಬಿ.ಎ. ಮಹಮ್ಮದಾಲಿ ಕಮ್ಮರಡಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರಾದ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಬಂಟ್ವಾಳ ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ, ಉಪಾಧ್ಯಕ್ಷರಾದ ಮಹಮ್ಮದ್ ನಂದರಬೆಟ್ಟು, ಬೂಡಾ ಅಧ್ಯಕ್ಷರಾದ ಸದಾಶಿವ ಬಂಗೇರ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಇದೇ ವೇಳೆ ಕೊಡಂಗೆ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಮತ್ತು ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಅಧ್ಯಕ್ಷ ರಿಯಾಝ್ ಜವಾನ್, ಸದಸ್ಯರಾದ ಸತ್ತಾರ್ ನಂದರಬೆಟ್ಟು, ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ, ಯೂನುಸ್ ನೌಫಲ್ ಬಂಟ್ವಾಳ ಉಪಸ್ಥಿತರಿದ್ದರು.

ಹಿಜಾಮ ಯುನಾನಿ ವೈದ್ಯ ಪದ್ದತಿಯ ಚಿಕಿತ್ಸೆ. ಇದೊಂದು ಅರೇಬಿಕ್ ಪದ. ಹಿಜಮ್ ಎಂದರೆ ಸೆಳೆದುಕೊಳ್ಳುವುದು. ಈ ವಿಧಾನದಿಂದ ಮನುಷ್ಯನ ದೇಹದಲ್ಲಿರುವ ನಿರ್ಧಿಷ್ಟ ಬಿಂದುಗಳನ್ನು ಕೇಂದ್ರೀಕರಿಸಿ ಕೆಟ್ಟ ರಕ್ತಕಣಗಳು ಹಾಗೂ ನಿರುಪಯುಕ್ತ ತ್ಯಾಜ್ಯಗಳನ್ನು ದೇಹದ ಮೇಲೈಗೆ ಸೆಳೆದು ಸಣ್ಣ ಸಣ್ಣ ರಂಧ್ರಗಳ ಮೂಲಕ ನೋವಾಗದಂತೆ ಹೊರಗೆ ತೆಗೆಯಲಾಗುತ್ತದೆ. ಇಪ್ಪತ್ತೊಂದನೇ ಶತಮಾನದಲ್ಲಿ ಯುನಾನಿ ಚಿಕಿತ್ಸಾ ವಿಧಾನವು ಹೆಚ್ಚು ಪ್ರಭಾವಿ ಚಿಕಿತ್ಸೆಯಾಗಿ ಮಾರ್ಪಟ್ಟಿದೆ. ಇದರಲ್ಲೂ ಹಿಜಾಮ (ಕಪ್ಪಿಂಗ್) ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪೂರ್ಣವಾಗುತ್ತಿದೆ.  ಔಷಧಿಯ ಲೋಕದಲ್ಲಿ ಯುನಾನಿ ಚಿಕಿತ್ಸಾ ವಿಧಾನವು ಆರೋಗ್ಯಕ್ಕೆ ಬಹಳ ಪ್ರಯೋಜನಾಕಾರಿಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English