ಪವಿತ್ರಾತ್ಮ ಅಭಿಷೇಕೋತ್ಸವ 2017

5:18 PM, Saturday, November 4th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

abhishekothsavaಮಂಗಳೂರು: ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಕರ್ನಾಟಕ ರಾಜ್ಯ ಮಟ್ಟದ ಕಥೋಲಿಕ ಕ್ಯಾರಿಜ್ಮ್ಯಾಟಿಕ್ ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಧರ್ಮಾಧ್ಯಕ್ಷಕರ ನಿವಾಸದಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿ ಕೊಟ್ಟರು.

ಧರ್ಮಧ್ಯಕ್ಷರು, ’ಕಥೋಲಿಕ ಧರ್ಮಸಭೆಯಲ್ಲಿ ಕ್ಯಾರಿಜ್ಮ್ಯಾಟಿಕ್ ನವೀಕರಣದ ಸ್ವರ್ಣ ಮಹೋತ್ಸವದ ನೆನಪಿಗಾಗಿ ನಾಲ್ಕು ದಿವಸಗಳ ಈ ಸಮ್ಮೇಳನವು ನವೆಂಬರ್ 9 ರಿಂದ 12ರ ತನಕ ಸಾಯಂಕಾಲ ೪ ರಿಂದ ರಾತ್ರಿ ೮ ಗಂಟೆ ತನಕ ನಡೆಯಲಿದೆ. ಕರ್ನಾಟಕದ 14 ಧರ್ಮಪ್ರಾಂತ್ಯಗಳಿಂದ ಧರ್ಮಾಧ್ಯಕ್ಷರು, ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವರು. ಕಳೆದ ಐವತ್ತು ವರ್ಷಗಳಲ್ಲಿ ಕ್ಯಾರಿಜ್ಮ್ಯಾಟಿಕ್ ಸಂಚಲನದಿಂದಾಗಿ ಕಥೋಲಿಕ ಧರ್ಮಸಭೆಯಲ್ಲಿ ಅಪಾರ ಬೆಳವಣಿಗೆ ಆದುದನ್ನು ಕಾಣುತ್ತೇವೆ, ಜನರ ಆಧ್ಯಾತ್ಮಿಕ ಜೀವನದಲ್ಲಿ ಹೊಸ ಹುರುಪು-ಉತ್ಸಾಹ ಬಂದಿದೆ, ಜನರು ನವೀಕರಣದ ಫಲವಾಗಿ ಅನೇಕ ಸೇವೆಯ ಕೆಲಸದಲ್ಲಿ ತೊಡಗಿದ್ದನ್ನು ನೋಡುತ್ತೇವೆ, ಧ್ಯಾನ-ಕೂಟಗಳಲ್ಲಿ ಪಾಲ್ಗೊಂಡು ಜೀವನ ಬದಲಾವಣೆ ಆಗಿದ್ದನ್ನು ಕಾಣುತ್ತೇವೆ. ಈ ಎಲ್ಲಾ ಒಳಿತಿಗಾಗಿ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ’, ಎಂದರು.

ಸಮ್ಮೇಳನದ ಸಂಚಾಲಕರಾದ ಫಾ. ಒನಿಲ್ ಡಿ’ಸೋಜರವರು ಸಮ್ಮೇಳನದ ಮಾಹಿತಿಯನ್ನು ನೀಡಿದರು. ಗುರುವಾರ ನವೆಂಬರ್ 9 ನೇ ತಾರೀಕಿನಂದು ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಸಾಯಾಂಕಾಲ 4.45 ಕ್ಕೆ ಉದ್ಗಾಟನೆ ಮಾಡಿ ಆ ದಿವಸದ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ, ಶುಕ್ರವಾರ 10ನೇ ತಾರೀಕಿನಂದು ಶಿಮೊಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಬಿಶಪ್ ಫ್ರಾನ್ಸಿಸ್ ಸೆರಾವೊ ಮತ್ತು ಶನಿವಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಶಪ್ ಲಾರೆನ್ಸ್ ಮುಕ್ಕುಳಿಯವರು ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಆದಿತ್ಯವಾರ ಸಾಯಾಂಕಾಲ 6ಗಂಟೆಗೆ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷರು ಅ. ವಂ. ಡಾ. ಬರ್ನಾಡ್ ಮೊರಾಸ್‌ರವರು ಸಮರೋಪ ಬಲಿಪೂಜೆಯನ್ನು ನೆರವೇರಿಸುವರು.

ಇದೇ ಸಂದರ್ಭದಲ್ಲಿ ಸ್ಮರಣಿಕೆ ಪತ್ರಿಕೆಯನ್ನು ಸಹ ಬಿಡುಗಡೆ ಮಾಡಲಾಗುವುದು. ಎಲ್ಲಾ ನಾಲ್ಕು ದಿವಸಗಳಲ್ಲಿ ಕನ್ನಡ ಬಾಷೆಯಲ್ಲಿ ಪ್ರಸಿದ್ದ ಪ್ರವಚನ ಮಾಡಲಿರುವರು. ದ. ಕ. ಮತ್ತು ಕಾಸರಗೋಡು ಜಿಲ್ಲೆಗಳಿಂದ 15 ಸಾವಿರ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ದೂರದಿಂದ ಬರುವ ಬಸ್ಸು, ಮಿನಿ ಬಸ್ಸ್, ಟೆಂಪೋ ವಾಹನಗಳಿಗೆ ಎಮ್ಮೆಕೆರೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉಳಿದ ವಾಹನಗಳಿಗೆ ಸೈಂಟ್ ಆನ್ಸ್ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಮಾರು ೨೦೦ ಸ್ವಯಂ-ಸೇವಕರು ಸೇವೆಯನ್ನು ನೀಡುವರು.
ಇದೇ ಸಂದರ್ಭದಲ್ಲಿ ನವೆಂಬರ್ 10, 11 ಮತ್ತು 12 ತಾರೀಕಿನಂದು ಕರ್ನಾಟಕದ 14 ಧರ್ಮಪ್ರಾಂತ್ಯದಿಂದ ಬರುವ 500 ಮುಖಂಡರಿಗೆ ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ತರಬೇತಿ ನೀಡಲಾಗುತ್ತದೆ.

ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು ಧರ್ಮಪ್ರಾಂತ್ಯದ ಪ್ರಧಾನ ಗುರುಗಳು, ಶ್ರೀ ಎಮ್. ಪಿ. ನೊರೊನ್ಹಾ ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿ, ಫಾ. ಜೆ. ಬಿ. ಕ್ರಾಸ್ತಾ, ವಿವಿದ ಸಮಿತಿ ಸಂಚಾಲಕರಾದ ಶ್ರೀ ಆಲ್ವಿನ್ ಮಸ್ಕರೇನ್ಹಸ್, ಶ್ರೀ ಎಲಿಯಾಸ್ ಕ್ಕುವೆಲ್ಲೊ, ಶ್ರೀ ನವೀನ್ ಸಿಕ್ವೇರ, ಶ್ರೀ ಡೊಲ್ಫಿ ಲೋಬೊ, ಶ್ರೀ ಅರುಣ್ ಸಲ್ದಾನ್ಹ, ಶ್ರೀ ಜೆ. ವಿ. ಡಿ’ಮೆಲ್ಲೊ, ಶ್ರೀ ಆಲ್ವಿನ್ ಡಿ’ಸೋಜ, ಶ್ರೀ ರೊನಾಲ್ಡ್ ಡಿ’ಸೋಜ, ಶ್ರೀಮತಿ ಬರ್ನಾರ್ಡಿನ್ ಮಸ್ಕರೇನ್ಹಸ್, ಶ್ರೀ ಎಲಿಯಾಸ್ ಫೆರ್ನಾಂಡಿಸ್, ಶ್ರೀ ವಿನ್ಸೆಂಟ್ ಮಸ್ಕರೇನ್ಹಸ್, ಶ್ರೀ ಸ್ಟೇನ್ಲಿ ಮತ್ತು ಇತರರು ಉಪಸ್ಥಿತರಿದ್ದರು. ಫಾ. ಮೆಲ್ವಿನ್ ನೊರೊನ್ಹಾ ಮಂಗಳೂರು ಸೇವಾ ಸಮಿತಿಯ ಆಧ್ಯಾತ್ಮಿಕ ಗುರು ಸ್ವಾಗತಿಸಿದರು. ಶ್ರೀ ಅರುಣ್ ಲೋಬೊ ಮಂಗಳೂರು ಸೇವಾ ಸಮಿತಿಯ ಅಧ್ಯಕ್ಷರು ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English