ರಾಷ್ಟ್ರಮಟ್ಟದ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್ ದಕ್ಷಿಣ ಕನ್ನಡ ಬಾಲಕ- ಬಾಲಕಿಯರ ಮೇಲುಗೈ

5:40 PM, Saturday, November 4th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

karate championship ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸ್ಪರ್ಧಿಗಳು ರಾಷ್ಟ್ರಮಟ್ಟದ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್‌ನ ಬಾಲಕ- ಬಾಲಕಿಯರ ವಿಭಾಗದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಬಣ್ಣದ ಬೆಲ್ಟ್‌ಗಳ ಸ್ಪರ್ಧೆಗಳು ಮೊದಲ ದಿನ ನಡೆದವು. ಕಿಕ್ಕಿರಿದು ಸೇರಿದ್ದ ಸಮರ ಕಲೆಯ ಅಭಿಮಾನಿಗಳ ಸಮ್ಮುಖದಲ್ಲಿ ಪುಟಾಣಿಗಳು ತಮ್ಮ ಕೌಶಲ ಪ್ರದರ್ಶಿಸಿದರು.

ಫಲಿತಾಂಶ:8 ವರ್ಷ ವಯೋಮಿತಿ ಬಾಲಕಿಯರ ಕಟಾ ಸ್ಪರ್ಧೆ: ನಮಿತಾ (ಬಜ್ಪೆ)-1 ; ದ್ಯುತಿ (ಮಂಗಳೂರು)-2 ; ಸಮನ್ವಿ ಪೂಜಾರಿ (ಉಡುಪಿ)-3 ; ಸುಹಾನಾ ಪೂಜಾರಿ (ಕಿನ್ನಿಗೋಳಿ)-3.
8 ವರ್ಷ ವಯೋಮಿತಿ ಬಾಲಕಿಯರ ಕುಮಿಟೆ: ಹಿಮಾನಿ (ಮಂಗಳೂರು)-1 ; ಅವನಿ (ಮಂಗಳೂರು)-2 ; ನಮಿತಾ (ಬಜ್ಪೆ)-3 ; ಆರನಾ (ಮಂಗಳೂರು)-3 .
8 ವರ್ಷ ವಯೋಮಿತಿ ಬಾಲಕರ ಕಟಾ: ನಾಮದೇವ್ (ಕೇರಳ)-1, ಧನುಷ್ (ಬಜ್ಪೆ)-2, ಜೈಪದ್ಮಶಾಲಿ (ದಕ್ಷಿಣ ಕನ್ನಡ)-3, ಯಶ್ ಅಮಿನ್-3.
8 ವರ್ಷ ವಯೋಮಿತಿ ಬಾಲಕರ ಕುಮಿಟೆ: ಯಶ್ ಪೂಜಾರಿ-1, ಶಾನ್ (ಕಿನ್ನಿಗೋಳಿ)-2, ತನ್ಮಯ್ (ಮಂಗಳೂರು)-3, ಚಿನ್ಮಯ್ (ಬೆಳ್ತಂಗಡಿ)-3.

10 ವರ್ಷ ವಯೋಮಿತಿ ಬಾಲಕರ ಕಟಾ (ಗುಂಪು ಎ): ಪ್ರಮಥ್-1; ತನಿಶ್ ವಿ.ಸಿ-2; ಆರ್ಯನ್-3; ಸಮೃದ್ಧ್-3.
10ವರ್ಷ ವಯೋಮಿತಿ ಬಾಲಕರ ಕಟಾ (ಗುಂಪು ಬಿ): ಲಕ್ಷ್ವಿ ಶೆಟ್ಟಿ-1; ಸುಚಿತ್-2; ಹರ್ಷಿತ್ ಆರ್-3; ಕೆ.ಸಿ.ದೀಪಕ್-3.

10ವರ್ಷ ವಯೋಮಿತಿ ಬಾಲಕಿಯರ ಕಟಾ (ಗುಂಪು ಎ): ಅವನಿ (ಮಂಗಳೂರು)-1; ಚೈತ್ರಾ (ಕುಳಾಯಿ)-2, ಆಯೇಷಾ ಝಿಯಾ (ಉಡುಪಿ)-3; ಅಂಕಿತಾ ಶೆಟ್ಟಿ (ಮಂಗಳೂರು)-3.
10 ವರ್ಷ ವಯೋಮಿತಿ ಬಾಲಕಿಯರ ಕಟಾ (ಗುಂಪು ಬಿ) ಎನ್.ಎಂ.ಅನ್ಷಿ (ಮಂಗಳೂರು)-1; ಮನ್ವಿತಾ ಕೆ.ಶೆಟ್ಟಿ (ಮಂಗಳೂರು)-2; ವೃಂದಾ ಚಡಗ (ಸುರತ್ಕಲ್)-3; ಸಾಹ್ನಿ (ಮಂಗಳೂರು)-3.

ಪ್ರಮುಖ ಆಕರ್ಷಣೆಯಾದ ಬ್ಲ್ಯಾಕ್ ಬೆಲ್ಟ್ ಸ್ಪರ್ಧೆಗಳು ನಾಳೆ ನಡೆಯಲಿದ್ದು, ಭಾನುವಾರದ ರಜಾದಿನದಲ್ಲಿ ಮತ್ತಷ್ಟು ಕರಾಟೆ ಪ್ರೇಮಿಗಳು ಈ ಅಪೂರ್ವ ಸೆಣೆಸಾಟಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇಡೀ ಕೂಟದ ಶಿಖರಪ್ರಾಯವಾದ ಗ್ರ್ಯಾಂಡ್ ಚಾಂಪಿಯನ್‌ಶಿಪ್‌ಗೆ ತೀವ್ರ ಸ್ಪರ್ಧೆ ಇದ್ದು, ದೇಶದ ವಿವಿಧ ಭಾಗಗಳ ಬ್ಲ್ಯಾಕ್‌ಬೆಲ್ಟ್ ಪಟುಗಳು ಇದರಲ್ಲಿ ಸೆಣೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English