ಮಂಗಳೂರು: ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನವೆಂಬ ಜ್ಯೋತಿಯು ಎಲ್ಲರ ಬದುಕಿನಲ್ಲೂ ಹೊಸ ಬೆಳಕನ್ನು ನೀಡಲಿ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಎಮ್. ಕರುಣಾಕರ ಶೆಟ್ಟಿಯವರು ನಗರದ ರೋಟರಿ ಬಾಲಭವನದಲ್ಲಿ ನಡೆದ ರೋಟರಿ ಕ್ಲಬ್ ಮಂಗಳೂರು ಪೂರ್ವದ ದೀಪಾವಳಿ ಹಬ್ಬದ ಆಚರಣೆಯ ಮತ್ತು ವೃತ್ತಿ ಸೇವೆಯಲ್ಲಿ ಸಾದಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಹೇಳಿದರು.
ಪಣಂಬೂರು ಬೀಚಿನಲ್ಲಿ 110 ಕ್ಕಿಂತ ಹೆಚ್ಚುಪ್ರವಾಸಿಗರ ಪ್ರಾಣವನ್ನು ಕಾಪಾಡಿದ ಜೀವ ರಕ್ಷಕರಾದ ಶ್ರೀಯುತ ರೋಶನ್ ಕುಮಾರ್ ಬೈಕಂಪಾಡಿ, ಶಕ್ತಿ ನಗರ ಶ್ಮಶಾನದ ಪಾಲಕರಾಗಿ, ರುದ್ರಭೂಮಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಅಭಿನಂದನೆಗೆ ಪಾತ್ರರಾದ ಶ್ರೀ ಪದ್ಮನಾಭ ಅಂಚನ್ ಹಾಗೂ ಸಮಾಜ ಸೇವೆ, ಸಾಂಸ್ಕೃತಿಕ ರಂಗ, ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿ ಕೊಂಡ ಶ್ರೀಮತಿ ಭವಾನಿ ಇವರನ್ನು ಮಂಗಳೂರು ರೋಟರಿ ಕ್ಲಬ್ ಪೂರ್ವದ ವತಿಯಿಂದ ಸನ್ಮಾಯಿಸಲಾಯಿತು.
ಸನ್ಮಾನಿತರ ಪರಿಚಯ ಪತ್ರವನ್ನು ರೊ.ಸಿಎ.ಹರೀಶ್ ಶೆಟ್ಟಿ, ರೊ.ಡಾ.ವಸಂತ್‌ಕುಮಾರ್‌ಶೆಟ್ಟಿ ಹಾಗೂ ರೊ.ರಾಘವೇಂದ್ರ ಇವರು ವಾಚಿಸಿದರು ಮತ್ತು ರೊ.ಜಗನ್ನಾಥನಾಯಕ್, ರೊ.ಸಿಎ. ಪ್ರವೀಣ್ ಕುಮಾರ್ ಶೆಟ್ಟಿ, ರೊ.ನಿತ್ಯಾನಂದ ಶೆಟ್ಟಿ, ರೊ.ಸದಾಶಿವ ಶೆಟ್ಟಿ, ರೊ.ಆನಂದ ಶೆಟ್ಟಿ, ರೊ.ಜೈಕುಮಾರ್, ರೊ.ವಿನೋಧ್ ಕುಡ್ವ, ರೊ.ಗಜೇಂದ, ರೊ.ದಿನೇಶ್ ಪೈ ವೃತ್ತಿ ಸೇವಾ ಸಾದಕರನ್ನು ಸನ್ಮಾನಿಸಿದರು. ರೊ.ರಮಾನಾಥ ಶೆಟ್ಟಿಯವರ ನೇತೃತ್ವದಲ್ಲಿ ಎಲ್ಲಾ ರೋಟರಿ ಸದಸ್ಯರ ಕುಟುಂಬದವರು ಸೇರಿಕೊಂಡು ದೀಪಗಳನ್ನು ಹೊತ್ತಿಸಿ ದೀಪಾವಳಿಯ ಸಂಭ್ರಮಾಚರಣೆಯನ್ನು ವೈಶಿಷ್ಟಪೂರ್ಣವಾಗಿ ಆಚರಿಸಿದರು.
ಅತ್ಯುತ್ತಮ ಸಾಂಪ್ರಾದಾಯಿಕ ಉಡುಗೆಯನ್ನು ತೊಟ್ಟ ಜಗನ್ನಾಥ ನಾಯಕ್, ಅಂಬಿಕಾ ದಯಾನಂದ ಶೆಟ್ಟಿ, ಅಮೋಘ ಶೆಟ್ಟಿ, ತೇಜಸ್ ಶೆಟ್ಟಿ ಯವರಿಗೆ ಬಹುಮಾನವನ್ನು ರೊ.ಸಿಎ.ಶಾಂತಾರಾಮ ಶೆಟ್ಟಿಯವರು ವಿತರಿಸಿದರು. ಶ್ರೀಮತಿ ಸಿಂಧು ಪ್ರದೀಪ್ ಮತ್ತು ಶ್ರೀಮತಿ ಕವಿತ ಕಾಮತ್ ಪ್ರಾರ್ಥನೆಗೈದರು. ಕಾರ್ಯದರ್ಶಿ ರೊ. ವಿನ್ಸೆಂಟ್ ನಜರತ್ ಧನ್ಯವಾದ ಹೇಳಿದರು.
Click this button or press Ctrl+G to toggle between Kannada and English