ಜಂಟಿ ಕ್ರಿಯಾ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ನಿಯೋಗದಿಂದ ಮನವಿ

4:48 PM, Tuesday, November 7th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

nalin kumar kateel ಮಂಗಳೂರು: ಜಂಟಿ ಕ್ರಿಯಾ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ನಿಯೋಗ ಸಂಸದ ನಳಿನ್ ಕುಮಾರ್ ಕಟೀಲ್ ಇವರನ್ನು ತಾ.6-7-2017  ರಂದು ಮಂಗಳೂರು ಸರ್ಕ್ಯುಟ್ ಹೌಸ್‌ನಲ್ಲಿ ಭೇಟಿಯಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಾ.29-10-2017 ರಂದು ಉಜಿರೆಯಲ್ಲಿ, ಹಲವು ಭೂ ಹಗರಣ ಮತ್ತಿತರ ಕಾನೂನು ಉಲ್ಲಂಘನೆಗಳ ಕ್ರಿಮಿನಲ್ ಕೇಸ್‌ಗಳ ತನಿಖೆ ಎದುರಿಸುತ್ತಿರುವ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮಾತ್ರವಲ್ಲದೆ ಭಾರೀ ಹೊಗಳಿಕೆ ಮಾಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮನವಿ ಸಲ್ಲಿಸಿತು.

ಸಂಸದರು ಪ್ರಧಾನಿಯವರಿಗೆ ನಾವು ನೀಡಿದ ಮತ್ತು ಪತ್ರಿಕೆಯಲ್ಲಿ ಪ್ರಕಟಿಸಿದ ’ಬಹಿರಂಗ ಪ್ರಶ್ನೆ’ಗಳಲ್ಲಿ ಕಾಣಿಸಿರುವ ಹೆಗ್ಗಡೆ ಸಂಸ್ಥಾನದ ಕಾನೂನು ಉಲ್ಲಂಘನೆಗಳ, ಅಕ್ರಮಗಳ, ಈಗಾಗಾಲೇ ಆದ ಆದೇಶಗಳ, ಶಿಫಾರಸು ವರದಿಗಳ ಕುರಿತು ಸ್ವತಃ ಪ್ರಧಾನಿಯವರಿಗೆ ಮನವರಿಕೆ ಮಾಡಬೇಕಾಗಿ ಒತ್ತಾಯಿಸಿತು. ಸುಮಾರು 11/2 ಗಂಟೆಗಳ ಕಾಲ ನಿಯೋಗದೊಂದಿಗೆ ಮಾತುಕತೆ ಮಾಡಿದ ಸಂಸದರು ಮನವಿಯನ್ನು ಪರಿಶೀಲಿಸಿ ಮುಂದುವರಿಯುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ಕೆ.ವಿಶ್ವನಾಥ ಶೆಟ್ಟಿ, ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ಟ್ರಸ್ಟಿ ರಂಜನ್ ರಾವ್ ಯರ್ಡೂರ್, ಸಾಮಾಜಿಕ ಕಾರ್ಯಕರ್ತ ಸೋಮಶೇಖರ ದೇವಸ್ಯ, ಕೃಷಿಕರ ವೇದಿಕೆ-ಕರ್ನಾಟಕದ ಕಾರ್ಯದರ್ಶಿ ಸದಾಶಿವ ಹೆಗ್ಡೆ, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ಕೆ.ಸೋಮ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್, ದ.ಕ.ಪರಿಸರಾಸಕ್ತರ ಒಕ್ಕೂಟದ ಕಾರ್ಯದರ್ಶಿ ಎ.ಬಾಬು. ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English