ಮಹಿಳಾ ಸರಕಾರಿ ನೌಕರರ ತ್ರೋಬಾಲ್ ಕ್ರೀಡಾಕೂಟ ಹಾಗೂ ಕನಕ ಜಯಂತಿ ಆಚರಣೆ

6:12 PM, Tuesday, November 7th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

throw ball game ಮ೦ಗಳೂರು: ದ.ಕ ಜಿಲ್ಲಾ ’ಡಿ’ ವರ್ಗ ಸರಕಾರಿ ನೌಕರರ ಸಂಘ (ರಿ) ಮಂಗಳೂರು ಇವರ ವಜ್ರಮಹೋತ್ಸವ ಅಂಗವಾಗಿ ದ.ಕ ಜಿಲ್ಲಾ ಅಬಕಾರಿ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಹಿಳಾ ಸರಕಾರಿ ನೌಕರರ ತ್ರೋಬಾಲ್ ಕ್ರೀಡಾಕೂಟ ಹಾಗೂ ಕನಕ ಜಯಂತಿ ಆಚರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಲಿಲ್ಲಿ ಪಾಯಸ್ ವಹಿಸಿದ್ದರು. ಕನಕ ಜಯಂತಿ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಅಬಕಾರಿ ನಿರೀಕ್ಷಕ ಸತೀಶ ಕುಮಾರ್ ಕುದ್ರೋಳಿ ನುಡಿದರು. ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನು, ಏಕಲವ್ಯ ಪ್ರಶಸ್ತಿ ಪುರಸ್ಕೃತ ಪವರ್ ಲಿಫ್ಟರ್ ನಯನ ಶ್ರೀಯಾನ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಾರ್ಯಕಾರಿ ಅಭಿಯಂತರ ರವೀಂದ್ರ ಕಿಣಿ, ವಾರ್ತಾಧಿಕಾರಿ ಖಾದರ್ ಷಾ, ವಾಲಿಬಾಲ್ ತರಬೇತುದಾರ ನಾರಾಯಣ ಆಳ್ವ, ನವೀನ್ ಕುಂಪಲ, ಸುಶೀಲ ಹಾಜರಿದ್ದರು.

ಈ ಸಂಧರ್ಭದಲ್ಲಿ ಯು. ಕವಿತಾ ಆರ್.ಎಸ್ ಕಿಣಿ, ವಿನ್ಸೆಂಟ್ ಕಾರ್ಲೋ, ಕು|ವೆನಿಜಿಯಾ ಆನ್ಸಿ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ರವರು ಸ್ವಾಗತ ಮಾಡಿದರು. ತದನಂತರ ಜರಗಿದ ಸಮಸ್ತ ದ.ಕ ಜಿಲ್ಲಾ ಸರಕಾರಿ ಮಹಿಳಾ ನೌಕರರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಅಬಕಾರಿ ಇಲಾಖೆ ಹಾಗೂ ದ್ವಿತೀಯ ಸ್ಥಾನ ವೆನ್‌ಲಾಕ್ ಸರಕಾರಿ ಆಸ್ಪತ್ರೆ ತಂಡ ಪ್ರಶಸ್ತಿ ಗಳಿಸಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English