ನೋಟು ಅಮಾನ್ಯೀಕರಣಕ್ಕೆ ಒಂದು ವರ್ಷ, ಕರಾಳ ದಿನ ಆಚರಿಸಿದ ಕಾಂಗ್ರೆಸ್

9:25 PM, Wednesday, November 8th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

congress protest ಮಂಗಳೂರು : ದ.ಕ ಜಿಲ್ಲಾ ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳು  ನೋಟು ಅಮಾನ್ಯೀಕರಣಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಕರಾಳ ದಿನ’ವನ್ನು  ಬುಧವಾರ ಆಚರಿಸಿದವು.

ಮಂಗಳೂರಿನ ಕಾಂಗ್ರೆಸ್ ಕಚೇರಿ ಎದುರು ನಡೆದ ಕರಾಳ ದಿನ ಪ್ರತಿಭಟನೆಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಬಂಡವಾಳ ಶಾಹಿಗಳ ಪರ ಮೋದಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಜನಸಾಮಾನ್ಯರ ಕಷ್ಟ ಅವರ ಗಮನದಲ್ಲಿಲ್ಲ. ಪ್ರಪಂಚ ಸುತ್ತುವುದೇ ಅವರ ನಿತ್ಯದ ಕಾಯಕವಾಗಿದೆ. ಅದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.

ಶಾಸಕರಾದ ಜೆ. ಆರ್. ಲೋಬೊ, ಐವನ್ ಡಿ. ಸೋಜಾ, ಮೇಯರ್ ಕವಿತಾ ಸನಿಲ್, ನಗರ ಪಾಲಿಕೆ ಸದಸ್ಯರಾದ ಅಪ್ಪಿ, ನವೀನ್ ಡಿ. ಸೋಜಾ, ಶಶಿಧರ ಹೆಗ್ಡೆ, ಎ. ಸಿ. ವಿನಯರಾಜ್, ಜಿಲ್ಲಾ ಕಾಂಗೆಸ್ ಅಧ್ಯಕ್ಷ ಹರೀಶ್ ಕುಮಾರ್, ನಾಯಕರಾದ ಸುರೇಶ್ ಬಲ್ಲಾಳ, ಸಲೀಂ, ಸಂತೋಷ್ ಶೆಟ್ಟಿ, ಹಿಲ್ದಾ ಆಳ್ವ, ಶಾಲೆಟ್ ಪಿಂಟೊ ಮೊದಲಾದವರಿದ್ದರು.

congress protest

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English