ಮಂಗಳೂರು:ರಾಷ್ಟ್ರಪತಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಕರಾವಳಿ ಭಾಗದ ಜನರ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಈ ಋತುವಿನ ಮೊದಲ ಕಂಬಳಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಕಂಬಳದ ವೇಳೆ ಓಡುವ ಕೋಣಗಳು 140 ರಿಂದ 160 ಮೀಟರ್ ದೂರವನ್ನು 12 ರಿಂದ 13 ಸೆಕೆಂಡುಗಳಲ್ಲಿ ಕ್ರಮಿಸಲಿವೆ 2014ರಲ್ಲಿ ನಿಷೇಧಕ್ಕೊಳಗಾಗಿದ್ದ ಕಂಬಳಕ್ಕೆ ಮತ್ತೆ ರಾಜ್ಯ ಸರ್ಕಾರದ ಮಸೂದೆಯ ಬೆಂಬಲ ಸಿಕ್ಕಿದ್ದರಿಂದ ಈ ವರ್ಷ ಕಂಬಳ ಮತ್ತಷ್ಟು ರೋಚಕತೆಯಿಂದ ನಡೆಯಲಿದೆ.
ನವೆಂಬರ್ 11 ಮತ್ತು 12 ರಂದು ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ನಡೆಯಲಿದ್ದು, ಕರೆ ನಿರ್ಮಾಣದ ಕೆಲಸ ಜೋರಾಗಿ ಸಾಗಿದೆ. ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಈ ಕಂಬಳ ನಡೆಯಲಿದ್ದು, ಕಂಬಳದ ವಿಚಾರ ಕೋರ್ಟ್ ಮೆಟ್ಟಿಲೇರಿದ ಎರಡು ವರ್ಷದ ಬಳಿಕ ಅಧಿಕೃತವಾಗಿ ನಡೆಯುತ್ತಿದೆ.
ಇದೇ ವೇಳೆ, ರಾಜ್ಯ ಸರಕಾರ ಕಂಬಳದ ಕುರಿತು ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತವೂ ಲಭಿಸಿದ್ದು, ಕಂಬಳ ಪ್ರಿಯರಿಗೆ ವರದಾನವಾಗಿದೆ.
Click this button or press Ctrl+G to toggle between Kannada and English