ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ, ಬೆಂಗಳೂರು ಹಾಗು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ, ಮಂಗಳೂರು ಇದರ ವತಿಯಿಂದ ಮಂಗಳೂರಿನ 64 ನೇ ಅಖಿಲ ಭಾರತ ಸಹಕಾರ ಸಪ್ತಾಹ -2017 ನೆಹರು ಮೈದಾನ ಫುಟ್‌ಬಾಲ್ ಗ್ರೌಂಡ್ ನಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಡಾ.ಎಂ ಎನ್. ರಾಜೇಂದ್ರ ಕುಮಾರ್ ರವರು ಪ್ರತಿ ವರ್ಷ ನವೆಂಬರ್ 14 ರಿಂದ 20 ರವರೆಗೆ ರಾಷ್ಟ್ರಾದಾದ್ಯಂತ “ಅಖಿಲ ಭಾರತ ಸಹಕಾರ ಸಪ್ತಾಹ ” ನಡೆಯುತ್ತದೆ. ಪಂಡಿತ್ ನೆಹರೂರವರ ಜನ್ಮ ದಿನವಾದ ನವೆಂಬರ್ 14 ರಂದು ಸಪ್ತಾಹದ ಉದ್ಘಾಟನೆ ನಡೆಸಲಾಗುತ್ತದೆ ಎಂದರು.
ಸಪ್ತಾಹದ ಉದ್ಘಾಟನೆಗಿಂತ ಮುಂಚಿತವಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಕೊಡಿಯಾಲ್‌ಬೈಲ್ , ಮಂಗಳೂರು ಇದರ ಪ್ರಧಾನ ಕಛೇರಿಯ ಆವರಣದಿಂದ ನೆಹರೂ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಮೊಳಹಳ್ಳಿ ಶಿವರಾಯರ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಸಹಕಾರ ಮತ್ತು ಸಂಸ್ಕೃತಿ ಯನ್ನು ಬಿಂಬಿಸುವ ವಿವಿಧ ಸ್ತಬ್ಧ ಚಿತ್ರಗಳು , ಡೊಳ್ಳುಕುಣಿತ, ವೀರಗಾಸೆ, ಕೇರಳ ಚೆಂಡೆ , ಕಲ್ಲಡ್ಕ ಗೊಂಬೆ ಮುಂತಾದ 22 ವಿವಿಧ ಮನೋರಂಜನಾ ತಂಡಗಳೊಂದಿಗೆ ಅದ್ದೂರಿಯ ” ಸಮುದಾಯದತ್ತ ಸಹಕಾರ ಜಾಥಾ ” ನಡೆಯಲಿದೆ ಎಂದು ಹೇಳಿದರು.
ಸಹಕಾರ ಸಪ್ತಾಹದ ಉದ್ಘಾಟನೆ ಹಾಗೂ ನಂದಿನಿ ಉತ್ಪನ್ನಗಳ ಬಿಡುಗಡೆಯನ್ನು ಸನ್ಮಾನ್ಯ ಶ್ರೀ ರಮೇಶ್ ಜಾರಜಿಹೊಳಿ, ಮಾನ್ಯ ಸಹಕಾರ ಸಚಿವರು, ಕರ್ನಾಟಕ ಸರ್ಕಾರ ಇವರು ನೆರವೇರಿಸಲಿದ್ದು, ಸಹಕಾರ ಜಾಥಾ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಡಿ.ವಿ ಸದಾನಂದ ಗೌಡ , ಇವರು ಮಾಡಲಿದ್ದಾರೆ. ಸಪ್ತಾಹದ ದ್ವಜಾರೋಹಣವನ್ನು ಸನ್ಮಾನ್ಯ ಶ್ರೀ ಬಿ.ರಮಾನಾಥ ರೈ, ಮಾನ್ಯ ಅರಣ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ಇವರು ನೆರವೇರಿಸಲಿದ್ದು , ಸಹಕಾರ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಯನ್ನು ಯು ಟಿ ಖಾದರ್ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗು ಗ್ರಾಹಕ ವ್ಯವಹಾರಗಳ ಸಚಿವರು , ಇವರು ಬಿಡುಗಡೆ ಮಾಡಲಿದ್ದಾರೆ. ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನವನ್ನು ಸನ್ಮಾನ್ಯ ಶ್ರೀ ಪ್ರಮೋದ್ ಮದ್ವರಾಜ್ ಇವರು ನೆರವೇರಿಸಲಿದ್ದಾರೆ ಎಂದು ಹೇಳಿದರು .
Click this button or press Ctrl+G to toggle between Kannada and English