ಗಲ್ಲು ಶಿಕ್ಷೆ : ಮದ್ರಾಸ್‌ ಹೈಕೋರ್ಟ್‌ ತಡೆಗೆ ಪೂಜಾರಿ ಆಕ್ರೋಶ

6:33 PM, Wednesday, August 31st, 2011
Share
1 Star2 Stars3 Stars4 Stars5 Stars
(3 rating, 1 votes)
Loading...

Poojary Press

ಮಂಗಳೂರು : ಮದ್ರಾಸ್‌ ಹೈಕೋರ್ಟ್‌ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರಿಗೆ ಸುಪ್ರೀಂ ಕೋರ್ಟ್‌ ವಿಧಿಸಿರುವ ಗಲ್ಲು ಶಿಕ್ಷೆಗೆ ಎಂಟು ವಾರಗಳ ತಡೆಯಾಜ್ಞೆ ನೀಡಿರುವುದರ ವಿರುದ್ಧ ಕೇಂದ್ರ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ .

ತಮಿಳುನಾಡು ವಿಧಾನಸಭೆಯಲ್ಲಿ ಹಂತಕರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ನಿರ್ಣಯ ಕೈಗೊಂಡಿರುವುದು ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಹಂತಕರಿಗೆ ಈಗಾಗಲೇ 20 ವರ್ಷ ಜೀವದಾನ ನೀಡಲಾಗಿದೆ. ಇನ್ನು ವಿಳಂಬ ಮಾಡದೆ ಗಲ್ಲು ಶಿಕ್ಷೆಗೊಳಪಡಿಸಬೇಕು ಎಂದು ಮಂಗಳವಾರ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜೀವ್‌ ಗಾಂಧಿ ಹಂತಕರು ಕ್ಷಮಾದಾನ ನೀಡುವಂತೆ ಮಾಡಿರುವ ಮನವಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ವಿಶೇಷ ನ್ಯಾಯಾಲಯ ಕೂಡಾ ಗಲ್ಲು ಶಿಕ್ಷೆಗೆ ಆದೇಶಿಸಿದೆ. ಹೀಗಿರುವಾಗ ಮದ್ರಾಸ್‌ ಹೈಕೋರ್ಟ್‌ 8 ವಾರಗಳ ತಡೆಯಾಜ್ಞೆ ನೀಡುವುದು ಎಷ್ಟು ಸರಿ ಎಂದು ಪೂಜಾರಿ ಪ್ರಶ್ನಿಸಿದರು. ಸರಕಾರ ತತ್‌ಕ್ಷಣ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಫ‌jಲ್‌ಗ‌ುರು, ಕಸಬ್‌ ಸೇರಿದಂತೆ ಎಲ್ಲ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ಜಾರಿಗೆ ಕೇಂದ್ರ ತಕ್ಷಣ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡರಾದ ಹರಿಕೃಷ್ಣ ಬಂಟ್ವಾಳ್‌, ಸುರೇಶ್‌ ಬಲ್ಲಾಳ್‌ ಹಾಗೂ ಅರುಣ್‌ ಕುವೆಲ್ಲೋ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English