ಧರ್ಮಸ್ಥಳಕ್ಕೆ ರಾಘವೇಶ್ವರ ಭಾರತೀ ಸ್ವಾಮೀಜಿ ಭೇಟಿ

6:03 PM, Friday, November 10th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

darmasthalaಉಜಿರೆ: ಹೊಸನಗರ ಶ್ರೀ ರಾಮಚಂದ್ರ್ರಾಪುರ ಮಠದ ಸಮಸ್ಯೆಒಂದರ ಪರಿಹಾರದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿಕೊಂಡಾಗ ದೇವರ ಅಭಯ ಮತ್ತುರಕ್ಷೆ ಮಠಕ್ಕೆದೊರಕಿ ಸಮಸ್ಯೆ ಸುಲಲಿತವಾಗಿ ಪರಿಹಾರಗೊಂಡಿದೆ. ಶುಕ್ರವಾರ ಶ್ರೀ ಸ್ವಾಮಿಯದರ್ಶನ ಹಾಗೂ ಸೇವೆಯಿಂದಧನ್ಯತೆ, ಶಾಂತಿ ಹಾಗೂ ತೃಪ್ತಿ ದೊರಕಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸ್ವಾಮೀಜಿಯವರು ದೇವರದರ್ಶನ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.ಅವರ 286 ಮಂದಿ ಭಕ್ತರು ೫ ಆವರ್ತಗಳಲ್ಲಿ 1430 ರುದ್ರ ಪಠಣ ಮಾಡಿದರು.ಮಠ ಹಾಗೂ ತಮ್ಮ ಗುರುಗಳಿಗಾಗಿ ರುದ್ರಪಠಣ ಮಾಡಿದ ಭಕ್ತರ ಸೇವೆಯನ್ನುಅವರು ಶ್ಲಾಘಿಸಿದರು.

ಅಭಯಾಕ್ಷರ ಆಂದೋಲನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ ಹಾಗೂ ಡಾ. ಬಿ. ಯಶೋವರ್ಮ ಸಹಿ ಹಾಕಿ ಶುಭ ಹಾರೈಸಿರುವುದರಿಂದ ಆಂದೋಲನಕ್ಕೆ ಆನೆ ಬಲ ಬಂದಂತಾಗಿದೆ.ಅದು ಯಶಸ್ವಿಯಾಗುವುದರ ಬಗ್ಗೆ ಭರವಸೆ ಹಾಗೂ ವಿಶ್ವಾಸ ಮೂಡಿ ಬಂದಿದೆಎಂದು ಸ್ವಾಮೀಜಿ ಹೇಳಿದರು.ಧರ್ಮದದೃಷ್ಟಿಯೊಂದಿಗೆಎಲ್ಲರಯೋಗ-ಕ್ಷೇಮಕ್ಕಾಗಿ ಕೆಲಸ ಮಾಡುವುದರಿಂದಜೀವನ ಪಾವನವಾಗುತ್ತದೆಎಂದು ಸ್ವಾಮೀಜಿ ಹೇಳಿದರು.

darmasthalaತಮ್ಮ ಮೊದಲ ಭೇಟಿಯಲ್ಲೆ ಧರ್ಮಸ್ಥಳದ ಬಗ್ಗೆ ಅಪಾರಗೌರವ ಮೂಡಿ ಬಂದಿದೆ.ಅಂದು ವೀರೇಂದ್ರ ಹೆಗ್ಗಡೆಯವರಲ್ಲಿ ಶ್ರೀ ಮಂಜುನಾಥ ಸ್ವಾಮಿಯನ್ನುಕಂಡರೆಇಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಹೆಗ್ಗಡೆಯವರನ್ನುಕಂಡಿದ್ದೇನೆಎಂದು ಸ್ವಾಮೀಜಿ ಹೇಳಿದರು.ಅನಿವಾರ್ಯ ಕಾರಣಗಳಿಂದ ಹೆಗ್ಗಡೆಯವರು ಉಪಸ್ಥಿತರಿರಲಿಲ್ಲ.

ಪ್ರಾಸ್ತಾವಿಕವಾಗಿ ಮಾತನಾಡಿದಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ತನ್ನಆತ್ಮಕಲ್ಯಾಣದೊಂದಿಗೆಧ್ಯಾನ, ತಪಸ್ಸು ಮತ್ತುತ್ಯಾಗದಿಂದಇತರರಕಲ್ಯಾಣಕ್ಕಾಗಿಚಿಂತಿಸುವವರೇ ನಿಜವಾದ ಗುರುಗಳಾಗಿದ್ದು ಆರಾಧನೆಗೆಅರ್ಹರಾಗಿರುತ್ತಾರೆ. ಗೋವುಗಳ ರಕ್ಷಣೆ ಬಗ್ಗೆ ಸ್ವಾಮೀಜಿಯವರ ಆಸಕ್ತಿ ಮತ್ತು ಕಾಳಜಿ ಬಗ್ಗೆ ಅವರು ಶ್ಲಾಘಿಸಿದರು.

ಹೇಮಾವತಿ ವಿ. ಹೆಗ್ಗಡೆಯವರುಅಭಯಾಕ್ಷರಆಂದೋಲನಕ್ಕೆ ಸಹಿ ಹಾಕಿ ಚಾಲನೆ ನೀಡಿ ಶುಭ ಹಾರೈಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English