ಮಂಗಳೂರು : ಭಾದ್ರಪದ ಶುದ್ಧ ಚೌತಿಯ ಪುಣ್ಯ ದಿನ ಗಣೇಶೋತ್ಸವವನ್ನು ಹಿರಿಯ ಕಿರಿಯರೆನ್ನದೆ ದೇಶದ ಉದ್ದಗಲ ಮನು ಕುಲವೆಲ್ಲ ಆಚರಿಸುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ, ಕೇರಿ ಕೇರಿಗಳಲ್ಲಿ ಗಣೇಶೋತ್ಸವದ ಸಂಬ್ರಮ ಮುಗಿಲು ಮುಟ್ಟಿದೆ.
ಗಣೇಶನನ್ನು ಹಲವು ಬಗೆಯಲ್ಲಿ ಜನರು ಪೂಜಿಸುತ್ತಾರೆ. ಗಣಪತಿಯನ್ನು ಹೇಗೆ ರೂಪಿಸಿದರೂ ಆತ ಪೂಜ್ಯನೆ. ಇ೦ದು ಗಣಪತಿ ದೇವಸ್ಥಾನಗಳಲ್ಲಿ ಭಕ್ತರ ಮಹಾಪೂರವೇ ಹರಿದಿದೆ . ಮಂಗಳೂರಿನ ಶರವು, ಕಾಸರಗೋಡು ಜಿಲ್ಲೆಯ ಮಧೂರು, ದ.ಕ. ಜಿಲ್ಲೆಯ ಸೌತಡ್ಕ, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಬಾರಕೂರು ಬಟ್ಟೆ ವಿನಾಯಕ, ಪೆರ್ಣಂಕಿಲ, ಉದ್ಯಾವರ, ಪಡುಬಿದ್ರಿ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ಪೂಜೆ ಸಲ್ಲಿಸಲಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ಭೋಜನ ಪ್ರಸಾದದ ವ್ಯವಸ್ಥೆಯೂ ಮಾಡಲಾಗಿತ್ತು. ಸಾರ್ವಜನಿಕ ಗಣೇಶೋತ್ಸವಗಳು ಇನ್ನೂ ಒಂದು ವಾರಗಳ ಕಾಲ ನಡೆಲಿದ್ದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿರುವುದು ಕಂಡು ಬಂತು.
Click this button or press Ctrl+G to toggle between Kannada and English