ಮಂಗಳೂರು : ಕರಾವಳಿ ಜನತೆಯ ನಿರೀಕ್ಷಿತ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಿದ್ಧಗೊಂಡ ಹಾಸ್ಯ ರಸಪ್ರಧಾನ ‘ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾ ಇಂದು ಪೂರ್ವಾಹ್ನ ಮಂಗಳೂರುನ ಜ್ಯೋತಿ ಟಾಕೀಸ್ ಮತ್ತು ಉಡುಪಿ ಅಲ್ಲಿನ ಕಲ್ಪನಾ ಥಿಯೇಟರ್ ಸೇರಿದಂತೆ ಕರಾವಳಿಯಾದ್ಯಂತ ಭರ್ಜರಿಯಾಗಿ ತೆರೆಕಂಡಿತು.
ಸ್ಥಾನೀಯ ರಿಕ್ಷಾ ಚಾಲಕರು ದೀಪ ಪ್ರಜ್ವಲಿಸಿ ‘ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಅತಿಥಿಗಳಾಗಿ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಕರಾಟೆಪಟು ವಸಂತ್ ಶೆಟ್ಟಿ, ಜ್ಯೋತಿ ಟಾಕೀಸ್‌ನ ಕೆ.ಪ್ರಶಾಂತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕೂಳೂರು ಮಾಧವ ಭಂಡಾರಿ, ಮೇಘಾ ಸೌರಭ್ ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿತ್ರವನ್ನು ವೀಕ್ಷಿಸಿ ಬಾರೀ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡವನ್ನು ಅಭಿನಂದಿಸಿ ಚಿತ್ರದ ಯಶಸ್ಸಿಗೆ ಶುಭಾರೈಸಿದರು. ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಜಯಪ್ರಸಾದ್ ಬಜಾಲ್, ಅಭಿನೇತ ಕಾರ್ಕಳ ಶೇಖರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ನಟರಾಜ್ ಸುರತ್ಕಲ್, ಇನ್‌ಒಕ್ಸ್ ಮಣಿಪಾಲ್, ಅಮರಶ್ರೀ ಮೂಡಬಿದ್ರೆ, ರಾಧಿಕಾ ಮತ್ತು ಪ್ಲಾನೆಟ್ ಕಾರ್ಕಳ, ಅರುಣಾ ಪುತ್ತೂರು, ಭಾರತ್ ಬೆಳ್ತಂಗಡಿ, ಸಂತೋಷ್ ಸುಳ್ಯ, ಹಾಗೂ ಮಂಗಳೂರುನ ಪಿವಿಆರ್, ಬಿಗ್ ಸಿನೆಮಾಸ್, ಸಿನಿಪೊಲಿಸ್ ಇತ್ಯಾದಿ ಚಿತ್ರಮಂದಿರಗಳಲ್ಲೂ ಭರ್ಜರಿಯಾಗಿ ಪ್ರದರ್ಶಿಸಲ್ಪಟ್ಟು ಸಿನೆಮಾಪ್ರಿಯರ ಮನಾಕರ್ಷಿಸಿತು.
ಚಿತ್ರದ ನಾಯಕನಟ ಸೌರಭ್ ಸುರೇಶ್ ಭಂಡಾರಿ ಸ್ವಾಗತಿಸಿದರು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೃಹತ್ ಕಟೌಟ್:
ಮಂಗಳೂರುನ ಜ್ಯೋತಿ ಟಾಕೀಸ್‌ನ ಮುಂಭಾಗದಲ್ಲಿ ಗಣೆಶ್ ಆರ್ಟಿಸ್ಟ್ ರಚಿತ ಕೇಶವ ಸುವರ್ಣ ನಿರ್ಮಿಸಿದ ನಾಯಕನಟ ಸೌರಭ್ ಸುರೇಶ್ ಭಂಡಾರಿ ಅವರ ಭಾರೀ ಗಾತ್ರದ ೬೧’x೩೦’ ಉದ್ದಗಲದ ಬೃಹತ್ ಕಟೌಟ್ ಅತ್ಯಾಕರ್ಷಕವಾಗಿ ಕಂಗೋಳಿಸುತ್ತಿದ್ದು, ಕರಾವಳಿಯಲ್ಲೇ ಇಷ್ಟೊಂದು ದೊಡ್ಡದಾದ ಕಟೌಟ್ ಇದೇ ಮೊದಲ ಬಾರಿ ಪ್ರದರ್ಶಿಸಲ್ಪಟ್ಟಿದೆ ಎಂದು ಚಿತ್ರಪ್ರಿಯರ ಅನಿಸಿಕೆಯಾಗಿತ್ತು.
Click this button or press Ctrl+G to toggle between Kannada and English