ಮಂಗಳೂರು: ಮಂಗಳೂರಿನ ಸಾಮಾಜಿಕ ಸಂಸ್ಥೆ ಎಂ.ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಶುಕ್ರವಾರ ವಕ್ಫ್ ಹಾಗೂ ಬ್ಯಾರಿ ಅಕಾಡೆಮಿಗೆ ಆಯ್ಕೆಯಾದ ಎಂ.ಫ್ರೆಂಡ್ಸ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ಆರಿಫ್ ಪಡುಬಿದ್ರಿ ಹಾಗೂ ಅನ್ಸಾರ್ ಬೆಳ್ಳಾರೆ ಅವರನ್ನು ಸನ್ಮಾನಿಸಲಾಯಿತು. ಕಳೆದ ಮೂರು ವರ್ಷಗಳಿಂದ ಎಂ.ಫ್ರೆಂಡ್ಸ್ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅವರನ್ನೂ ಈ ಸಂದರ್ಭ ಸನ್ಮಾನಿಸಲಾಯಿತು.
ಎಂ.ಫ್ರೆಂಡ್ಸ್ ಮಹಾಸಭೆಯಲ್ಲಿ ನಡೆದ ಈ ಸಭೆಯ ಅಧ್ಯಕ್ಷತೆಯನ್ನು ಹನೀಫ್ ಹಾಜಿ ವಹಿಸಿದರು.
ಕೈಕಂಬ ಲೈಫ್ ಲೈನ್ ವೈದ್ಯಾಧಿಕಾರಿ ಡಾ.ಮುಬಶ್ಶಿರ್, ಬಂಟ್ವಾಳ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಮುಸ್ತಫಾ ಗೋಳ್ತಮಜಲು, ವಿಟ್ಲ ಹೋರಿಝೋನ್ ಪಬ್ಲಿಕ್ ಸ್ಕೂಲ್ ಸಂಚಾಲಕ ಅಬೂಬಕರ್ ನೋಟರಿ, ಎಂ.ಫ್ರೆಂಡ್ಸ್ ಉಪಾಧ್ಯಕ್ಷ ಸುಜಾ ಮಹಮ್ಮದ್, ಪುತ್ತೂರಿನ ಉದ್ಯಮಿ ಕೆ.ಪಿ. ಸಾದಿಕ್ ಹಾಜಿ ಕುಂಬ್ರ, ಬೆಳ್ಳಾರೆಯ ಖ್ಯಾತ ಎಂಜಿನಿಯರ್ ಆರಿಫ್ ಬೆಳ್ಳಾರೆ, ಮಂಗಳೂರು ಉದ್ಯಮಿಗಳಾದ ಝುಬೈರ್ ಹಾಗೂ ಇರ್ಶಾದ್, ತುಂಬೆಯ ಬಿಲ್ಡರ್ ಇರ್ಶಾದ್ ತುಂಬೆ, ಬೆಂಗಳೂರು ಅಲ್ ಫಲಾಹ್ ಉದ್ಯಮಿ ಹನೀಫ್ ಕುದ್ದುಪದವು, ಮೆಲ್ಕಾರ್ ಮಹಿಳಾ ಕಾಲೇಜು ಪ್ರಾಂಶುಪಾಲ ಅಬ್ದುಲ್ಲತೀಫ್ ಪುಣಚ, ಜಿ.ಪಂ. ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಕೆ.ಶಾಹುಲ್ ಹಮೀದ್, ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ವಿ.ಎಚ್. ಅಶ್ರಫ್, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಮುಖ್ಯಸ್ಥರಾದ ಸಫ್ವಾನ್ ವಿಟ್ಲ, ಫೈನ್ ಗೋಲ್ಡ್ ಸಂಸ್ಥೆಯ ಡಿ.ಎಂ.ರಶೀದ್ ಉಕ್ಕುಡ, ಕೋಲ್ಪೆ ಮಿಲೇನಿಯಂ ಫ್ರೆಂಡ್ಸ್ ಅಧ್ಯಕ್ಷ ಇಸ್ಮಾಯಿಲ್ ಕೋಲ್ಪೆ, ಜವುಳಿ ಉದ್ಯಮಿ ನೌಶೀನ್ ಬದ್ರಿಯಾ, ಪರ್ತಿಪ್ಪಾಡಿ ಜುಮಾ ಮಸೀದಿ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಉಕ್ಕುಡ ಜುಮಾ ಮಸೀದಿ ಕಾರ್ಯಾಧ್ಯಕ್ಷ ಅಬ್ಬಾಸ್ ಕಲ್ಲಂಗಳ, ಬಂಟ್ವಾಳ ವಿ.ಕನೆಕ್ಟ್ ಅಧ್ಯಕ್ಷ ಆಶಿಕ್ ಕುಕ್ಕಾಜೆ, ಎಂ.ಫ್ರೆಂಡ್ಸ್ ಎನ್ನಾರೈ ಸದಸ್ಯ ರಿಫಾಯಿ ಕೊಡಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ರಶೀದ್ ವಿಟ್ಲ ಸ್ವಾಗತಿಸಿದರು. ಖಲಂದರ್ ಪರ್ತಿಪ್ಪಾಡಿ ಅಭಿನಂದನಾ ಭಾಷಣ ಮಾಡಿದರು.
Click this button or press Ctrl+G to toggle between Kannada and English