ಬಸ್ಸಿನಲ್ಲಿ ಸೀಟು ಬಿಟ್ಟು ಕೊಡಬೇಕೆಂದು ಯುವಕನೊಂದಿಗೆ ಹೋರಾಡಿದ ಮಹಿಳೆ

1:29 PM, Monday, November 27th, 2017
Share
1 Star2 Stars3 Stars4 Stars5 Stars
(No Ratings Yet)
Loading...

Bus seatಮಂಗಳೂರು:  ಮಂಗಳೂರಿನ ಬಸ್ಸೊಂದರಲ್ಲಿ ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ ಯುವಕನನ್ನು ತರಾಟೆಗೆ ತೆಗೆದುಕೊಂಡು ಆತ ಮೇಲೇಳುವವರೆಗೂ ಬಿಡದೆ  ಮಹಿಳೆಯೊಬ್ಬರು ಸೀಟಿಗಾಗಿ ಹೋರಾಡಿ ಜಯ ಗಳಿಸಿದ್ದಾರೆ.

ಸಹಪ್ರಯಾಣಿಕನೊಬ್ಬ ಆ ಯುವಕನನ್ನುದ್ದೇಶಿಸಿ, `ಏಳಬೇಡ. ಆಕೆ ಏನು ಮಾಡುತ್ತಾಳೆ ನೋಡೋಣ’ ಎಂದು ತುಳುವಿನಲ್ಲಿ ಹೇಳುತ್ತಿದ್ದರೂ ಸ್ವಲ್ಪವೂ ವಿಚಲಿತವಾಗದ ಆ ಮಹಿಳೆ ಕೊನೆಗೂ ಯುವಕನನ್ನು ಸೀಟಿನಿಂದ ಮೇಲೇಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಕ್ಕಳನ್ನು ಹಿಡಿದು ಬರುವ ಮಹಿಳೆಯರಿಗೆ, ವಯಸ್ಸಾದ ಅಜ್ಜಿಯಂದಿಯರಿಗೆ ಅದೆಷ್ಟೋ ಯುವಕರು ಸೀಟು ಬಿಟ್ಟು ಔದಾರ್ಯತೆ  ತೋರುತ್ತಾರೆ. ಕೆಲವೊಮ್ಮೆ ಮಹಿಳೆಯರೇ ಪುರುಷರ ಸೀಟುಗಳಲ್ಲಿ ಕುಳಿತು ಸೀಟು ಬಿಟ್ಟು ಕೊಡಿರುವುದೂ ಉಂಟು. ಆದರೆ ಇಲ್ಲಿ ಮಹಿಳಾ ಆಸನ ಬೇಕು ಎಂದು ಹೋರಾಡಿದ ಧೀರ ಮಹಿಳೆ ಇವರೆನ್ನ ಬಹುದು.

ನಿರ್ವಾಹಕ ಮಾತ್ರ ಇಷ್ಟೆಲ್ಲಾ ಆದರೂ ಸುಮ್ಮನಿದ್ದ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English