ದಂತ ವೈದ್ಯ ವಿದ್ಯಾರ್ಥಿಗಳ ಶಿಕ್ಷಣ ಪ್ರೇಮ

4:46 PM, Wednesday, November 29th, 2017
Share
1 Star2 Stars3 Stars4 Stars5 Stars
(No Ratings Yet)
Loading...

students-educationಸುರತ್ಕಲ್‌ : ಮುಕ್ಕದಲ್ಲಿರುವ ಶ್ರೀನಿವಾಸ್‌ ದಂತ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಸರಕಾರಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾರ್ಯಕ್ರಮದ ಮೂಲಕ ಸಹಾಯ ಹಸ್ತ ಚಾಚಿದ್ದು, ಸ್ವಂತ ಖರ್ಚಿನಿಂದ 92 ಮಕ್ಕಳಿಗೆ ಶಾಲಾ ಬ್ಯಾಗ್‌ ವಿತರಿಸಿದ್ದಾರೆ.

ಮಕ್ಕಳ ದಿನಾಚರಣೆಯಂದು ವಿದ್ಯಾರ್ಥಿಗಳು ಆಹಾರ ಖಾದ್ಯ ತಯಾರಿಸಿ ಅದನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿದ್ದರು. ಉಳಿದ ಹಣದಿಂದ ಚೇಳಾಯಿರಿನ ಕಳವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಂಗಳವಾರ ಶಾಲಾ ಬ್ಯಾಗ್‌ ವಿತರಿಸಿದರು.

ಶ್ರೀನಿವಾಸ್‌ ಸಮೂಹ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕ ಡಾ| ಎ. ಶ್ರೀನಿವಾಸ ರಾವ್‌ ಶುಭ ಹಾರೈಸಿದರು. ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಮನೋಜ್‌ ವರ್ಮ ಮಾತನಾಡಿ, ದಂತ ವೈದ್ಯ ವಿದ್ಯಾರ್ಥಿಗಳು ಮಕ್ಕಳ ಶಿಕ್ಷಣಕ್ಕಾಗಿ ತಾವೇ ಆಹಾರ ಮಾರಾಟ ಮಾಡಿ ಹಣ ಸಂಗ್ರಹಿಸಿ ಮಕ್ಕಳಿಗೆ ಬ್ಯಾಗ್‌ ವಿತರಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಈ ಉತ್ತಮ ಕಾರ್ಯಕ್ರಮಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಪ್ರೋತ್ಸಾಹ ನೀಡುತ್ತಿದೆ. ಸುಮಾರು ಹದಿನೈದು ಶಾಲೆಗಳಲ್ಲಿ ಶ್ರೀನಿವಾಸ್‌ ದಂತ ಕಾಲೇ ಜಿನಿಂದ ಉಚಿತ ದಂತ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರಿಗೂ ಇದರ ಪ್ರಯೋಜನವಿದೆ ಎಂದರು.

ಮುಖ್ಯೋಪಾಧ್ಯಾಯ ರವೀಂದ್ರ ರಾವ್‌ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, ಶಾಲಾ ಟ್ರಸ್ಟ್‌ ವತಿಯಿಂದ ಐವರು ಶಿಕ್ಷಕರ ನೇಮಕ ಮಾಡಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ದಂತ ಕಾಲೇಜು ಶಾಲೆಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು ಅಭಿನಂದನೀಯ ಎಂದರು.

ದಂತ ಆರೋಗ್ಯದ ಕುರಿತು ವೈದ್ಯ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು. ಮಕ್ಕಳ ದಂತ ವಿಭಾಗದ ಡಾ| ಕೆ. ರೇಶ್ಮಾ ಪೈ, ಡಾ| ಅರವಿಂದ್‌ ಭಟ್‌, ಡಾ| ಲಾವಣ್ಯಾ ವರ್ಮ, ಡಾ| ನತಾಶ ಅಮನ್ನ, ಡಾ| ಹೇಮಂತ್‌, ಡಾ| ನಿಶಿತ್‌, ಡಾ| ಶಿಹಾನ್‌, ಲಕ್ಷ್ಮೀಶ ರಾವ್‌, ಗಂಗಾಧರ ಪೂಜಾರಿ, ಪೋಷಕ ವರ್ಗದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English