ಜಾಲತಾಣಗಳಲ್ಲಿ ಅಪಪ್ರಚಾರಕ್ಕೆ ಪಟ್ಲ ಟ್ರಸ್ಟ್‌ ವಿರೋಧ

6:45 PM, Wednesday, November 29th, 2017
Share
1 Star2 Stars3 Stars4 Stars5 Stars
(No Ratings Yet)
Loading...

Pattlaguttu-Sathish-shettyಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ಕಟೀಲಿನ, ಕಟೀಲು ಮೇಳ ಹಾಗೂ ಅಸ್ರಣ್ಣರುಗಳ ಬಗ್ಗೆ, ಮೇಳದ ಯಜಮಾನರ ಬಗ್ಗೆ, ಯಕ್ಷ ಬೋಧಿನಿ ಟ್ರಸ್ಟ್‌ ಬಗ್ಗೆ ಅಪಚಾರ ಎಸಗುವುದನ್ನು ಪಟ್ಲ ಟ್ರಸ್ಟ್‌ ತೀವ್ರವಾಗಿ ವಿರೋಧಿಸುತ್ತದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್‌ ಶೆಟ್ಟಿ ತಿಳಿಸಿದ್ದಾರೆ.

ಕಟೀಲಿನ ಯಕ್ಷಗಾನ ಮೇಳದ ಕಲಾವಿದರ ವರ್ಗಾವಣೆ ವಿಚಾರದಲ್ಲಿ ಕಳೆದ ಹತ್ತಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅನಪೇಕ್ಷಿತ ಹೇಳಿಕೆಗಳು “ಅಭಿಮಾನಿಗಳು’ ಎನ್ನುವ ಹೆಸರಿನಲ್ಲಿ ಪ್ರಸಾರವಾಗುತ್ತಿವೆ. ಶ್ರೀ ಕ್ಷೇತ್ರ ಮತ್ತು ಮೇಳಕ್ಕಿಂತ ನಾವು ಯಾರೂ ದೊಡ್ಡವರಲ್ಲ. ಕಟೀಲು ಮೇಳದ ಸಂಪೂರ್ಣ ಜವಾಬ್ದಾರಿ ಮೇಳದ ಯಜಮಾನರಿಗೆ ಸಂಬಂಧಿಸಿದ್ದು. ಮೇಳದ ಕಲಾವಿದರ ವರ್ಗಾವಣೆ ವಿಚಾರದಲ್ಲಿ ಟ್ರಸ್ಟ್‌ ನಿರ್ಲಿಪ್ತ ಧೋರಣೆಯನ್ನು ಪ್ರಾರಂಭದಿಂದಲೂ ಅನುಸರಿಸುತ್ತಿದೆ. ಮೇಳದ ಯಜಮಾನರ ತೀರ್ಮಾನಕ್ಕೆ ವಿರುದ್ಧವಾಗಿ ನಾವು ಯಾವುದೇ ಹೇಳಿಕೆ ಕೊಟ್ಟಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅದೇ ರೀತಿ ಮೇಳದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯಕ್ಷಬೋಧಿನಿ ಟ್ರಸ್ಟ್‌ ಕಾರ್ಯಚಟುವಟಿಕೆಗಳು ಪಟ್ಲ ಟ್ರಸ್ಟ್‌ ಸ್ಥಾಪನೆಗೆ ಪ್ರೇರಣೆಯಾಗಿರುತ್ತದೆ. ಯಕ್ಷಬೋಧಿನಿ ಟ್ರಸ್ಟ್‌ನ ಪದಾಧಿ ಕಾರಿಗಳ ಬಗ್ಗೆ ನಾವು ಅಪಾರ ಗೌರವ ಹೊಂದಿರುತ್ತೇವೆ. ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ಉದ್ಘಾಟಿಸಲ್ಪಟ್ಟು ಕಳೆದೆರಡು ವರ್ಷಗಳಿಂದ ಕಲಾ ವಿದರಿಗಾಗಿ ಅನೇಕ ಸೇವಾ ಕಾರ್ಯಕ್ರಮಗಳನ್ನು ವಿವಿಧೆಡೆ ಟ್ರಸ್ಟ್‌ ಸಂಘಟಿಸಿರುತ್ತದೆ. ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಟ್ರಸ್ಟ್‌ ಇನ್ನಷ್ಟು ಸೇವಾ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English