ಸ್ಕೇಟಿಂಗ್ ರಿಂಗ್ ನಲ್ಲೇ ಹೊಡೆದಾಡಿಕೊಂಡ ಸ್ಪರ್ಧಿಗಳು, ವಿಡಿಯೋ ವೈರಲ್

10:21 PM, Thursday, November 30th, 2017
Share
1 Star2 Stars3 Stars4 Stars5 Stars
(No Ratings Yet)
Loading...

scattingಮಂಗಳೂರು: ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಕೇಟಿಂಗ್ ಪಟುಗಳಿಬ್ಬರು ಸ್ಕೇಟಿಂಗ್ ರಿಂಗ್ ನಲ್ಲೇ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರಿನಲ್ಲಿ ರಾಜ್ಯ ಮಟ್ಟದ 33ನೇ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಡೆದಿತ್ತು. ಇದರಲ್ಲಿ ಸ್ಕೇಟಿಂಗ್ ಪಟುವೊಬ್ಬನನ್ನು ಮತ್ತೊಬ್ಬ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸ್ಕೇಟಿಂಗ್ ಪಟುಗಳು ಹೊಡೆದಾಡಿಕೊಂಡಿದ್ದಾರೆ.

ಮಂಗಳೂರಿನ ಹೊಗೈಬೈಲ್ ನಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫೈ ಸ್ಕೇಟಿಂಗ್ ಕ್ಲಬ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಸ್ಪರ್ಧೆ ಎಂದಾಗ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆದರೆ ಇಲ್ಲಿ ಇಬ್ಬರು ಸ್ಕೇಟಿಂಗ್ ಪಟುಗಳು ಹೊಡೆದಾಡಿಕೊಂಡಿರುವುದು ಕ್ರೀಡಾ ಸ್ಫೂರ್ತಿಗೆ ವ್ಯತಿರಿಕ್ತವಾಗಿದೆ.

ಈ ಘಟನೆಯ ಬಗ್ಗೆ ಆಯೋಜಕರಿಂದ ಅಸೋಸಿಯೇಶನಿಗೆ ದೂರು ಬಂದಿದೆ. ರವಿವಾರ ನಡೆಯುವ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆ’ ಎಂದು ಕರ್ನಾಟಕ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಭರತ್‌ ಕುಮಾರ್‌ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English