ದೆಹಲಿ ಕರ್ನಾಟಕ ಸಂಘದಿಂದ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ

12:17 AM, Tuesday, December 5th, 2017
Share
1 Star2 Stars3 Stars4 Stars5 Stars
(No Ratings Yet)
Loading...

delhiದೆಹಲಿ : ದೆಹಲಿ  ಕರ್ನಾಟಕ ಸಂಘ ಈ ವರ್ಷದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಭಾಷಾ ಬಾಂಧವ್ಯ ಸ್ಥಳೀಯ ಕಲಾವಿದರಿಂದ ವಿವಿಧ ಭಾಷೆಗಳ ನೃತ್ಯಕಾರ್ಯಕ್ರಮವನ್ನುಇದೇ ಡಿಸೆಂಬರ್  3ರಂದು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮಕ್ಕೆಮಂಗಳೂರಿನ ಎಸ್.ಡಿ.ಎಂ.ಲಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಶೆಟ್ಟಿಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ದೆಹಲಿಯಲ್ಲಿ ಕನ್ನಡಕ್ಕಾಗಿ ಸೇವೆ ಮಾಡಿದರಂಗಕರ್ಮಿ, ಖ್ಯಾತಚಿತ್ರಕಲಾವಿದ ಶ್ರೀ ಚೆನ್ನುಎಸ್. ಮಠದ, ಖ್ಯಾತ ಹೋಟೆಲುಉದ್ಯಮಿ ಮತ್ತು ಸಮಾಜ ಸೇವಕರಾದಶ್ರೀ ಶೇಖರ್‌ಎನ್. ಬಂಗೇರ, ಸೌಜನ್ಯ ಪ್ರಿಂಟಿಂಗ್ ಪ್ರೆಸ್‌ನ ಮಾಲೀಕರಾದಶ್ರೀ ವೈಜನಾಥ್‌ಎನ್. ಹೆಗಣೆ ಅವರುಗಳಿಗೆ ವಿಶಿಷ್ಠ ಕನ್ನಡಿಗ ಪ್ರಶಸ್ತಿ ನೀಡಿಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀ ರಾಜೇಂದ್ರ ಶೆಟ್ಟಿಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ವಹಿಸಿದ್ದರು.

ಇದೇ ಸಂದರ್ಭದಲ್ಲಿಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮಾಜವಾದೀಚಿಂತಕ, ಧೀಮಂತ ನಾಯಕ ದಿವಂಗತಜೆ.ಹೆಚ್.ಪಟೇಲ್‌ಅವರು ಸಂಸತ್ತಿನಲ್ಲಿ ದಿನಾಂಕ04-12-1967 ರಂದು ಮಾರ್ದನಿಸಿದ ಕನ್ನಡ ಕಹಳೆ 03-12-2017ಕ್ಕೆ ಐವತ್ತು ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಕನ್ನಡದ ಕಹಳೆಗೆ 50ರ ಸಂಭ್ರಮ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.ಇದುಕನ್ನಡಿಗರಿಗೆಅತ್ಯಂತಅಭಿಮಾನದ ಸಂಗತಿ ಮಾತ್ರವಲ್ಲ ಸಂಭ್ರಮಾಚರಣೆಯ ಸಂಗತಿಕೂಡ ಹೌದು. ಕಾರಣ ಹಿಂದಿಯನ್ನು ಬಿಟ್ಟರೆ ಉಳಿದೆಲ್ಲ ಭಾರತೀಯ ಭಾಷೆಗಳಲ್ಲಿಯೇ ಮೊದಲ ಬಾರಿಗೆಕನ್ನಡದಧ್ವನಿ ಕೇಳಿಸಿದ್ದು ಪಟೇಲರಿಂದ.ಸಂಸತ್ತಿನಲ್ಲಿ ಪಟೇಲ್‌ಕುರಿತುಶ್ರೀ ಚಂದ್ರಶೇಖರ್‌ಎನ್.ಪಿ.ಅವರುಮಾತನಾಡಿದರು.

ಸಭಾಕಾರ್ಯಕ್ರಮದ ನಂತರ ಸ್ಥಳೀಯ ಕಲಾವಿದರಿಂದ ವಿವಿಧ ಭಾಷೆಗಳ ನೃತ್ಯಕಾರ್ಯಕ್ರಮ ನಡೆಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜಅವರು ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English