ಹೆಚ್ಚಿನ ಬೆಲೆಗೆ ಮಿನರಲ್‌‌ ವಾಟರ್‌‌ ಮಾರಿದ್ರೆ ಜೈಲೂಟ ಗ್ಯಾರಂಟಿ!

2:06 PM, Tuesday, December 12th, 2017
Share
1 Star2 Stars3 Stars4 Stars5 Stars
(No Ratings Yet)
Loading...

minaral-waterನವದೆಹಲಿ: ಮಿನರಲ್‌‌ ವಾಟರ್‌‌ ಬಾಟಲ್‌ಗಳ ಎಂಆರ್‌‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರೇ ಎಚ್ಚರ. ಯಾಕಂದರೆ, ಎಂಆರ್‌‌ಪಿಗಿಂತ ಮಿನರಲ್‌‌ ವಾಟರ್‌‌ ಬಾಟಲ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಿದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತಿದೆ.

ಹೌದು, ಮಿನರಲ್‌‌ ವಾಟರ್‌‌ ಬಾಟಲ್‌ಗಳನ್ನು ಎಂಆರ್‌‌ಪಿಗಿಂತ ಹೆಚ್ಚಿನ ಬೆಲೆಗೆ ಮಾರುವ ಹೋಟೆಲ್‌‌, ರೆಸ್ಟೋರೆಂಟ್‌ ಹಾಗೂ ಮಲ್ಟಿಪ್ಲೆಕ್ಸ್‌‌ನವರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಮಿನರಲ್‌‌ ವಾಟರ್‌‌ ಬಾಟಲ್‌ಗಳ ಸಂಬಂಧ ಎಫ್‌‌ಹೆಚ್‌‌ಆರ್‌ಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಹೋಟೆಲ್‌‌, ರೆಸ್ಟೋರೆಂಟ್‌ ಹಾಗೂ ಮಲ್ಟಿಪ್ಲೆಕ್ಸ್‌‌ಗಳಲ್ಲಿ ಮಿನರಲ್‌‌ ವಾಟರ್‌‌ ಬಾಟಲ್‌ಗಳನ್ನು ಎಂಆರ್‌‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಿದರೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಎಂಆರ್‌ಪಿಗಿಂತ ಹೆಚ್ಚಿನ ಬೆಲೆ ಮಾರಾಟದಿಂದ ಗ್ರಾಹಕರಿಗೆ ಅನ್ಯಾಯವಾಗುವುದು ಮಾತ್ರವಲ್ಲ, ತೆರಿಗೆ ವಂಚನೆಯೂ ಆಗುತ್ತಿದೆ ಎಂದು ಹೇಳಿದೆ.

ಹೋಟೆಲ್‌, ರೆಸ್ಟೋರೆಂಟ್‌, ಮಲ್ಟಿಪ್ಲೆಕ್ಸ್‌ಗಳು ಸಾಮಾನ್ಯ ದರದಲ್ಲಿ ವಾಟರ್‌‌ ಬಾಟಲ್‌‌ಗಳನ್ನು ಖರೀದಿಸಿರುತ್ತವೆ. ಆದರೆ, ಎಂಆರ್‌ಪಿ ದರಕ್ಕೆ ಮಾರಾಟ ಮಾಡದೆ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತವೆ. ಇದರಿಂದ ಸರ್ಕಾರಕ್ಕೆ ಬರಬೇಕಾಗಿದ್ದ ಹೆಚ್ಚುವರಿ ಆದಾಯ ಖೋತಾ ಆಗುತ್ತದೆ ಎಂದೂ ಕೇಂದ್ರ ಹೇಳಿದೆ.

ಹೀಗಾಗಿ ಈ ರೀತಿ ಹೆಚ್ಚುವರಿ ಬೆಲೆ ಪಡೆಯುವುದು ಕಾನೂನಿನ ಪ್ರಕಾರ ಅಪರಾಧ ಎಂದಿರುವ ಕೇಂದ್ರ ಸರ್ಕಾರ, ಹೆಚ್ಚಿನ ಬೆಲೆಗೆ ವಾಟರ್‌ ಬಾಟಲ್‌ಗಳನ್ನು ಹೋಟೆಲ್‌, ರೆಸ್ಟೋರೆಂಟ್‌, ಮಲ್ಟಿಪ್ಲೆಕ್ಸ್‌ಗಳಿಗೆ ಮೊದಲ 25,000, ನಂತರ 50,000 ರೂ. ದಂಡ ವಿಧಿಸಲಾಗುತ್ತದೆ. ಇದರ ನಂತರವೂ ಮತ್ತದೇ ತಪ್ಪು ಮಾಡಿದರೆ 1 ಲಕ್ಷ ರೂ. ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ಕೂಡ ವಿಧಿಸಬಹುದು ಎಂದು ಸುಪ್ರೀಂಕೋರ್ಟ್‌ಗೆ ಸರ್ಕಾರ ತಿಳಿಸಿದೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English