ಮೇಸ್ತ ಸಾವಿಗೆ ನ್ಯಾಯ ಸಿಗದಿದ್ದರೆ ಮಂಗಳೂರು ಬಂದ್:ಶರಣ್ ಪಂಪ್ ವೆಲ್

11:24 AM, Thursday, December 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

sharan-pumpwellಮಂಗಳೂರು: ಪರೇಶ್ ಮೇಸ್ತ ಸಾವಿಗೆ ನ್ಯಾಯ ದೊರೆಯದಿದ್ದಲ್ಲಿ ಮಂಗಳೂರು ಬಂದ್ ಗೆ ಕರೆ ನೀಡಲಾಗುವುದು ಎಂದು ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಎಚ್ಚರಿಸಿದ್ದಾರೆ. ಪ್ರಮಖ ಬೆಳವಣಿಗೆಗಳು ಮಂಗಳೂರಿನಲ್ಲಿ ಪರೇಶ್ ಮೇಸ್ತ ಸಾವಿನ ಪ್ರಕರಣ ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೊನ್ನಾವರ ಗಲಭೆಯಲ್ಲಿ ಕಾಣೆಯಾಗಿದ್ದ ಅಬ್ದುಲ್ ಕಂಡ ಹಿಂದೂಗಳ ಎರಡು ಮುಖ ಹೊನ್ನಾವರದಲ್ಲಿ ಡಿಸೆಂಬರ್ 6 ರಂದು ನಡೆದಿದೆ ಎನ್ನಲಾದ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಖಂಡಿಸಿ ಬುಧವಾರ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪ್ರತಿಭಟನಾ ಸಭೆ ಹಮ್ಮಿಕೊಂಡಿತ್ತು.

sharan-pumpwell-2ದೇಶಕ್ಕೋಸ್ಕರ ಯುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ , “ಇಸ್ಲಾಂಗಾಗಿ ಮುಸ್ಲೀಮರು ಜಿಹಾದ್ ಮಾಡುವುದಾದರೆ, ಹಿಂದೂಗಳು ದೇಶ, ಧರ್ಮಕ್ಕೋಸ್ಕರ ಯುದ್ಧಕ್ಕೂ ತಯಾರಿದ್ದೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಶರಣ್ ಆರೋಪ “ಪರೇಶ್ ಮೇಸ್ತ ಅವರ ಮೃತದೇಹ ಎಣ್ಣೆಯಿಂದ ಸುಟ್ಟಂತೆ, ತಲೆಗೆ ಹೊಡೆದಂತೆ ಹಾಗೂ ಕೈಯಲ್ಲಿದ್ದ ಹಚ್ಚೆಯನ್ನು ತಲವಾರಿನಿಂದ ಕಡಿದು ತೆಗೆದ ರೀತಿಯಲ್ಲಿ ಪತ್ತೆಯಾಗಿತ್ತು.

ಹೊನ್ನಾವರದಲ್ಲಿ ಮುಸ್ಲಿಂ ಗೂಂಡಾಗಳು ಬೀದಿ ದೀಪ ಆಫ್ ಮಾಡಿ ಮಾರುಕಟ್ಟೆ ಪುಡಿ‌ಮಾಡಿದ್ದರು. ಈ ಸಂದರ್ಭದಲ್ಲಿಯೇ ಅಮಾಯಕ ಪರೇಶ್ ಮೇಸ್ತನನ್ನೂ ಅವರು ಹತ್ಯೆ ಮಾಡಿದ್ದಾರೆ,” ಎಂದು ಅವರು ಆರೋಪಿಸಿದರು. ಹಿಂದೂಗಳ ಮೇಲೆ ದೌರ್ಜನ್ಯ “ಕಳೆದ 5 ವರ್ಷದಲ್ಲಿ 19 ಹಿಂದೂ ಯುವಕ‌ರ ಹತ್ಯೆಯಾಗಿವೆ. ಆದರೂ ಹಿಂದೂ ಸಂಘಟನೆಗಳ ವಿರುದ್ದ ಕೋಮುವಾದ ಎಂಬ ಶಬ್ದ ಬಳಸಲಾಗುತ್ತಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು .

ಇಂದು ರಾಜ್ಯದಲ್ಲಿ ಕೇವಲ‌ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರಿದ ಅವರು, ಗೌರಿ ಲಂಕೇಶ್ ಹತ್ಯೆಯಾದಾಗ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಮುಸ್ಲಿಮರ ಸಾವಾದರೆ ಎಲ್ಲಾ ಭಾಗ್ಯಗಳ ಸೌಲಭ್ಯ ಒದಗಿಸಲಾಗುತ್ತದೆ.

ಆದರೆ, ಪರೇಶ್ ಮೇಸ್ತ ಹತ್ಯೆಯಾದಾಗ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು. ಗೃಹಸಚಿವರಾಗಲು ರೆಡ್ಡಿ ನಾಲಾಯಕ್ ಪರೇಶ್ ಮೇಸ್ತ ಕೊಲೆಯನ್ನೂ ಸಹಜ ಸಾವು ಎಂದು ಘೋಷಿಸಲಾಗಿದೆ ಎಂದು ದೂರಿದ ಅವರು, “ಗೃಹ ಸಚಿವರು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣದ ರೀತಿಯಲ್ಲಿ ವರ್ತಿಸುತ್ತಿದ್ದಾರೆ,” ಎಂದರು.

ಗೌರಿ ಲಂಕೇಶ್ ಕೊಲೆ ಪ್ರಕರಣವನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ಗೃಹ ಸಚಿವರು ತಮ್ಮ ಸ್ಥಾನಕ್ಕೆ ನಾಲಾಯಕ್ . ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪರೇಶ್ ಸಾವಿನ ನ್ಯಾಯಕ್ಕಾಗಿ ಶಿರಸಿ, ಹೊನ್ನಾವರದಲ್ಲಿ ಬಂದ್ ನಡೆಸಲಾಗಿತ್ತು. ಪರೇಶ್ ಮೇಸ್ತ ಅವರ ಕುಟುಂಬಕ್ಕೆ ನ್ಯಾಯ ದೊರೆಯದಿದ್ದಲ್ಲಿ ಮಂಗಳೂರು ಬಂದ್ ನಡೆಸುತ್ತೇವೆ ಎಂದು ಅವರು ಎಚ್ಚರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English