ಕಾಸರಗೋಡು: ಮನೆಗೆ ನುಗ್ಗಿದ ದರೋಡೆಕೋರ ತಂಡ ನಿವೃತ್ತ ಶಿಕ್ಷಕಿಯ ಕತ್ತು ಕೊಯ್ದು ಕೊಲೆಗೈದ ಘಟನೆ ಚೀಮೇನಿಯಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಅವರ ಪತಿಯನ್ನುಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೀಮೇನಿ ಪುಲಿಯನ್ನೂರಿನ ನಿವೃತ್ತ ಶಿಕ್ಷಕಿ ಪಿ.ವಿ. ಜಾನಕಿ (65) ಕೊಲೆಗೀಡಾದವರು ಎಂದು ಗುರುತಿಸಲಾಗಿದೆ. ಪತಿ ನಿವೃತ್ತ ಶಿಕ್ಷಕ ಕೃಷ್ಣನ್ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರನ್ನು ಕಟ್ಟಿ ಹಾಕಿ ಮಾರಾಕಾಸ್ತ್ರದಿಂದ ಕತ್ತು ಕೊಯ್ದ ಬಳಿಕ ದರೋಡೆ ನಡೆಸಲಾಗಿದೆ. ಮೂವರ ತಂಡ ಈ ಕೃತ್ಯ ನಡೆಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿಸಿದೆ.
ದಂಪತಿ ಮೇಲೆ ಹಲ್ಲೆ ನಡೆಸಿದ ತಂಡ, ಜಾನಕಿ ಅವರ ಮೈಮೇಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಕಳವು ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳ ಮಾಹಿತಿ ಕಲೆ ಹಾಕುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
Click this button or press Ctrl+G to toggle between Kannada and English