ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತವರ ತಾಯಿ ಹೀರಾಬೆನ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಗುಜರಾತ್ ವಿಧಾನಸಭಾ 182 ಸದಸ್ಯ ಬಲವನ್ನು ಹೊಂದಿದೆ. ಮೊದಲ ಹಂತದ ಚುನಾವಣೆ ಡಿ.9 ರಂದು ಮುಗಿದಿದ್ದು, ಇಂದು 2ನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ.
2ನೇ ಹಂತದಲ್ಲಿ ರಾಜಧಾನಿ ಅಹಮದಾಬಾದ್ ಸೇರಿ ಒಟ್ಟು 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿದ್ದು, 2.22 ಕೋಟಿ ಮತದಾರರಿದ್ದಾರೆ. ಕಣದಲ್ಲಿ 851 ಅಭ್ಯರ್ಥಿಗಳಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ.
ಗಾಂಧಿನಗರದಲ್ಲಿ ಪ್ರಧಾನಿ ಮೋದಿ ಅವರ ತಾಯಿ ಗಾಂಧಿ ಹೀರಾಬೆನ್ ಮತಗಟ್ಟೆಗೆ ಬಂದು ಮತದಾನ ಮಾಡಿದರು. ನರನ್‌ಪುರ್‌ನಲ್ಲಿ ಅಮಿತ್ ಶಾ ತಮ್ಮ ಹಕ್ಕು ಚಲಾಯಿಸಿದರು. ಶಂಕರ್ ಸಿನ್ಹಾ ವಘೇಲಾ ಸಹ ಗಾಂಧಿನಗರದ ವಾಸನ್ ಗ್ರಾಮದಲ್ಲಿ ಮತದಾನ ಮಾಡಿದರು. ಇತ್ತ, ಅಹಮದಾಬಾದ್ ವೇಜಾಲ್‌ಪುರ್‌ನಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಕೂಡ ತಮ್ಮ ಮತ ಚಲಾಯಿಸಿದರು. ಗುಜರಾತ್ ಚುನಾವಣೆ: ರಾಹುಲ್ ಗಾಂಧಿ ಜೊತೆಗೆ ಸುದ್ದಿ ವಾಹಿನಿಗೂ ಸಂಕಷ್ಟ!
ಪ್ರಧಾನಿ ನರೇಂದ್ರ ಮೋದಿ ಮುಂಬೈನಿಂದ ಬಂದು ತಮ್ಮ ಹಕ್ಕು ಚಲಾಯಿಸಿದರು. ಅಹಮದಾಬಾದ್‌ನ ಸಬರಮತಿಯ 115ನೇ ರಾನಿಪ್ ಮತಗಟ್ಟೆಯಲ್ಲಿ ಪ್ರಧಾನಿ ಮೋದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ನಂತರ ತೆರೆದ ಕಾರಿನಲ್ಲಿ ಮೋದಿ ಭಾರಿ ಜನಸ್ತೋಮದ ಮಧ್ಯೆ ರೋಡ್ ಶೋ ನಡೆಸಿದರು.
ಇನ್ನು, ಮಾಜಿ ಸಿಎಂ ಆನಂದಿ ಬೆನ್ ಪಟೇಲ್, ಪಟೇಲ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಮತ್ತವರ ತಂದೆ-ತಾಯಿ, ಗುಜರಾತ್ ಕಾಂಗ್ರೆಸ್‌ನ ಅಧ್ಯಕ್ಷ ಭರತ್ ಸಿನ್ಹಾ ಸೋಲಂಕಿ ಹಾಗೂ ಗುಜರಾತ್ ಚುನಾವಣಾ ಆಯೋಗದ ಮುಖ್ಯಾಧಿಕಾರಿ ಬಿಬಿ ಸ್ವೈನ್ ಮತದಾನ ಮಾಡಿದರು.
Click this button or press Ctrl+G to toggle between Kannada and English