ಅಹ್ಮದಾಬಾದ್: ಈ ವರ್ಷದ ಕಟ್ಟಕಡೆಯ ಚುನಾವಣೆ ರಿಯಾಲಿಟಿ ಶೋಗೆ ಗುಜರಾತ್ ಅಣಿಯಾಗಿದೆ. ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ತಿಳಿಯಲು ಕ್ಷಣಗಣನೆ ಆರಂಭವಾಗಿದೆ.
22 ವರ್ಷಗಳ ಕಾಲ ಆಡಳಿತ ನಡೆಸಿರುವ ಭಾರತೀಯ ಜನತಾ ಪಕ್ಷ ಪ್ರಥಮ ಬಾರಿಗೆ ಕಾಂಗ್ರೆಸ್ಸಿನಿಂದ ಭಾರೀ ತುರುಸಿನ ಸ್ಪರ್ಧೆಯನ್ನು ಈ ಬಾರಿ ಎದುರಿಸಿದೆ. ತಕ್ಕಡಿ ಯಾವುದೇ ಬದಿಗೂ ತೂಗಬಹುದು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
LIVE : ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ
9.56 : ಬಿಜೆಪಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರಾಳಿ ವಿರುದ್ಧ 7,600 ಮತಗಳ ಮುನ್ನಡೆ ಕಂಡುಕೊಂಡಿದ್ದಾರೆ.
9.38 : ಬಿಜೆಪಿ – 96, ಕಾಂಗ್ರೆಸ್ – 84, ಇತರೆ – 2. ಟ್ವೆಂಟಿ ಟ್ವಂಟಿ ಮ್ಯಾಚ್ ತರಹ ಗುಜರಾತ್ ಚುನಾವಣೆ ಫಲಿತಾಂಶ ರೋಚಕತೆಯನ್ನು ಮೂಡಿಸಿದೆ.
9.27 : ಬಿಜೆಪಿ – 86, ಕಾಂಗ್ರೆಸ್ – 83, ಇತರೆ – 1. ಯಾರು ಗೆಲ್ಲಬಹುದು? ಯಾರು ಮಣ್ಣು ಮುಕ್ಕಬಹುದು?
9.15 : ಇಲ್ಲಿ ಎಲ್ಲವೂ ಇದ್ದಕ್ಕಿದ್ದಂತೆ ಉಲ್ಟಾಪುಲ್ಟಾ ಆಗಿದೆ. ಪ್ರಥಮ ಬಾರಿಗೆ ಕಾಂಗ್ರೆಸ್ ಬಿಜೆಪಿಗಿಂತ ಮುಂದಿದೆ. ಕಾಂಗ್ರೆಸ್ – 89, ಬಿಜೆಪಿ – 76.
9.00 : ಗುಜರಾತ್ ಚುನಾವಣಾ ನಾಟಕ ರಂಗದಲ್ಲಿ ಕ್ಷಣಕ್ಷಣಕ್ಕೂ ಬಣ್ಣಗಳು ಬದಲಾಗುತ್ತಿವೆ. ತಕ್ಕಡಿ ಒಂದು ಬಾರಿ ಬಿಜೆಪಿಯತ್ತ ತೂಗಿದರೆ, ಮತ್ತೊಂದು ಬಾರಿ ಕಾಂಗ್ರೆಸ್ಸಿನಲ್ಲಿ ತೂಗುತ್ತಿದೆ. ಬಿಜೆಪಿ – 90, ಕಾಂಗ್ರೆಸ್ – 80.
8.55 : ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿಜಯ್ ರೂಪಾನಿ ಅವರಿಗೆ ಹಿನ್ನಡೆಯುಂಟಾಗಿದೆ. ಈ ಕ್ಷೇತ್ರ ಪಾಟಿದಾರ್ ಸಮುದಾಯದವರು ಪ್ರಬಲವಾಗಿರುವ ಕ್ಷೇತ್ರ.
8.50 : ಬಿಜೆಪಿ ಮುನ್ನಡೆಯಲ್ಲಿ ಸೆಂಚುರಿ ಬಾರಿಸಿದ್ದು, ಈ ಎಲ್ಲ ಕ್ಷೇತ್ರಗಳಲ್ಲಿ ಗೆದ್ದಿದ್ದೇ ಆದರೆ, 6ನೇ ಬಾರಿ ಸರಕಾರ ರಚಿಸುವುದು ಖಚಿತ.
8.38 : ಬಿಜೆಪಿ ವಿರುದ್ಧ ಸಿಡಿದೆದ್ದಿದ್ದ ಪಾಟಿದಾರ್ ಸಮುದಾಯ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿದ್ದು, ಮೆಹಸಾನದಲ್ಲಿ ಬಿಜೆಪಿಯ ವಿಜಯ್ ರೂಪಾಣಿ, ಪೋರಬಂದರ್ ದಲ್ಲಿ ಕಾಂಗ್ರೆಸ್ ನಾಯಕ ಅರ್ಜುನ್ ಮೊಡವಾಡಿಯಾ ಹಿಂದಿದ್ದಾರೆ.
8.33 : ಸಂಖ್ಯೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಬಿಜೆಪಿ 51 ಕ್ಷೇತ್ರಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ 28ರಲ್ಲಿ ಮುಂದಿದೆ.
8.30 : ವಡಗಾಮ್ ನಲ್ಲಿ ಕಾಂಗ್ರೆಸ್ ಸೇರಿರುವ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಅವರು ಮುನ್ನಡೆ ಸಾಧಿಸಿದ್ದಾರೆ.
8.27 : ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ವಿಜಯ್ ರೂಪಾನಿ ಮುನ್ನಡೆ ಸಾಧಿಸಿದ್ದಾರೆ.
8.25 : ಮತಎಣಿಕೆ ಆರಂಭವಾಗಿ 25 ಕಳೆಯುವುದರೊಳಗೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡು 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸಮಬಲ ಸಾಧಿಸಿವೆ.
8.00 : ಗುಜರಾತ್ ನಲ್ಲಿ ಮತಎಣಿಕೆ ಆರಂಭವಾಗಿದ್ದು, ಭಾರತೀಯ ಜನತಾ ಪಕ್ಷ 6 ಮತ್ತು ಕಾಂಗ್ರೆಸ್ 2ರಲ್ಲಿ ಮುನ್ನಡೆ ಸಾಧಿಸಿವೆ.
ಒಟ್ಟು 182 ಕ್ಷೇತ್ರಗಳಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತ ಸಿಗಬೇಕಾದರೆ 93 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಚುನಾವಣಾಪೂರ್ವ ಸಮೀಕ್ಷೆಗಳಾಗಲಿ, ಚುನಾವಣೋತ್ತರ ಸಮೀಕ್ಷೆಗಳಾಗಲಿ ಬಿಜೆಪಿಯೇ ಗೆಲ್ಲುತ್ತದೆ ಎಂದು ಹೇಳಿವೆ. ಆದರೆ, ಏನು ಬೇಕಾದರೂ ಆಗಬಹುದು ಎಂದು ಹಿಂದಿನ ಚುನಾವಣೆಗಳು ಎಚ್ಚರಿಕೆ ನೀಡಿವೆ.
Click this button or press Ctrl+G to toggle between Kannada and English