ಮಂಗಳೂರು: ಮಂಗಳೂರು ಯುವಜನತೆ ಇಂದು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಕರ ಮನಸ್ಸನ್ನು ಬೆಳೆಸಿಕೊಳ್ಳುವುದು ಸಾಧ್ಯ. ಕರಾವಳಿ ಯುವ ಉತ್ಸವವು ಇದಕ್ಕೆ ಅತ್ಯಂತ ಸೂಕ್ತ ಅವಕಾಶ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ದ.ಕ.ಜಿಲ್ಲಾ ಕರಾವಳಿ ಯುವ ಉತ್ಸವ ಉಪಸಮಿತಿ ಅಧ್ಯಕ್ಷರೂ ಆದ ಪ್ರಮಿಳಾ ಎಂ.ಕೆ., ನುಡಿದರು.
ಪುರಭವನದಲ್ಲಿ ಕರಾವಳಿ ಉತ್ಸವದ ಅಂಗವಾಗಿ ನಡೆದ ಕರಾವಳಿ ಯುವ ಉತ್ಸವ ಪೂರ್ವ ಪ್ರಥಮ ಸುತ್ತಿನ ಅಡಿಷನ್ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಯುವ ಉತ್ಸವದ ಕಾರ್ಯಾಧ್ಯಕ್ಷ ಕಾರ್‍ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಛೇರಿ ವಿಶೇೀಷ ಅಧಿಕಾರಿ, ಶ್ರೀಧರ್ ಮಣಿಯಾಣಿ, ಕಾರ್ಯಕ್ರಮ ಸಂಯೋಜಕರಾದ ಶೇಷಪ್ಪ, ಡಾ.ನಾಗವೇಣಿ ಮಂಚಿ ಉಪಸ್ಥಿತರಿದ್ದರು.
ಪ್ರತಿ ವಿಭಾಗದಲ್ಲಿ 10ಕ್ಕಿಂತ ಹೆಚ್ಚು ತಂಡಗಳು ಉತ್ಸುಕತೆಯಿಂದ ಭಾಗವಹಿಸಿದ್ದು, ಯುವ ಉತ್ಸವಕ್ಕೆ ನೀಡಿದ ಅವಕಾಶವು ಸಾರ್ಥಕ್ಯವನ್ನು ಕಂಡಿರುತ್ತದೆ. ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯ ವೈಯುಕ್ತಿಕ ಹಾಗೂ ಸಮೂಹ, ಪಾಶ್ಚಾತ್ಯ ನೃತ್ಯ ವೈಯುಕ್ತಿಕ ಹಾಗೂ ಸಮೂಹ, ಜನಪದ ಗೀತೆ ಸಮೂಹ, ಯಕ್ಷಯುಗಳ ನೃತ್ಯ, ಕಿರುಪ್ರಹಸನ, ಏಕಾಪಾತ್ರಾಭಿನಯ, ಮೂಕಾಭಿನಯ ಹಾಗೂ ಪಾರಂಪರಿಕ ವಸ್ತ್ರ ಪ್ಯಾಶನ್ ಪ್ರದರ್ಶನ ನಡೆಯಿತು.
Click this button or press Ctrl+G to toggle between Kannada and English