ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಪದವಿ ವಿಭಾಗ ಹಾಗೂ ಇನ್ನರ್‍ವೀಲ್ ಕ್ಲಬ್ ಮೂಡುಬಿದಿರೆ ಸಹಯೋಗದಲ್ಲಿ ಮೂಡುಬಿದಿರೆ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ `ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನು ಮಾಹಿತಿ ಯೋಜನೆ’ ಕುರಿತು ಸೋಮವಾರ ಕಾರ್ಯಕ್ರಮ ನಡೆಯಿತು.
ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳ ಹಕ್ಕುಗಳ ಕಾಯಿದೆಗಳನ್ನು ಸಮರ್ಪಕ ಅನುಷ್ಠಾನಕ್ಕೆ ಪೂರಕವಾಗಿ ಮಕ್ಕಳ ಪೆÇೀಷಕರು, ಶಿಕ್ಷಕರು, ಶಿಕ್ಷಣ ಇಲಾಖೆ ಸೇರಿದಂತೆ ಆಡಳಿತ ವ್ಯವಸ್ಥೆ ಹಾಗೂ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಲ್ಲಿ ಸ್ವಯಂ ತೀರ್ಮಾನ ತೆಗೆದುಕೊಳ್ಳುವ ಕೌಶಲ್ಯ ಅಭ್ಯಾಸಬಲದಿಂದ, ಪೆÇೀಷಕರ ಕಾಳಜಿಯಿಂದ ಮತ್ತು ಪರಿಸರದಿಂದ ರೂಢಿಸಲ್ಪಡುತ್ತದೆ ಎಂದರು.
ಮೈಸೂರಿನ ಎಎನ್‍ಎಸ್‍ಎಸ್‍ಐಆರ್‍ಡಿಯ ವಿಕೇಂದ್ರೀಕೃತ ತರಬೇತಿ ಸಂಯೋಜಕ ಹಿರಿಯಡ್ಕ ಜಯಂತ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಶಿವಕಾಶಿಯಲ್ಲಿ ಇರುವಂತಹ ಬಾಲ ಕಾರ್ಮಿಕ ವ್ಯವಸ್ಥೆ ದುರದೃಷ್ಟಕರ. ಮಗುವನ್ನು ಅಹಾರ ಒದಗಿಸುವ ಕೈಯನ್ನಾಗಿಸದಂತೆ ನಮ್ಮ ಸಾಮಾಜಿಕ ಪರಿಸರ ಬದಲಾಗಬೇಕಾಗಿದೆ ಎಂದರು.
ಇನ್ನರ್ ವೀಲ್ ಕಾರ್ಯದರ್ಶಿ ಶಾಲಿನಿ ಹರೀಶ್ ನಾಯಕ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ರೋಟರಿ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ ಉಪಸ್ಥಿತರಿದ್ದರು.
ಮನ್ಮಥ ಹೆಗ್ಡೆ ಸ್ವಾಗತಿಸಿದರು. ಆಳ್ವಾಸ್ ಸಮಾಜ ಕಾರ್ಯ ಪದವಿ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ಪ್ರಸ್ತಾವನೆಗೈದರು. ಸ್ವರಾಜ್ ನಿರೂಪಿಸಿದರು. ಗಜಾನನ ಮರಾಠೆ ವಂದಿಸಿದರು.
ಆಳ್ವಾಸ್ ಸಮಾಜ ಕಾರ್ಯ ಕಾಲೇಜಿನ ವಿದ್ಯಾರ್ಥಿಗಳು ಸಾಂದರ್ಭಿಕ ಬೀದಿ ನಾಟಕ ಪ್ರಸ್ತುತಪಡಿಸಿದರು.
Click this button or press Ctrl+G to toggle between Kannada and English