ಮಂಗಳೂರು: ಪರೇಶ್ ಮೇಸ್ತಾ ಕೊಲೆ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಐಸಿಸ್ ಉಗ್ರರಿಗಿಂತಲೂ ಭೀಭತ್ಯ ಕೃತ್ಯ ನಡೆದಿರುವುದರಿಂದ ಜಿಹಾದಿಗಳು ಹೊನ್ನಾವರದಲ್ಲಿಯೂ ನೆಲೆಯೂರಿರುವ ಬಗ್ಗೆ ಶಂಕೆಯಿದೆ. ಪ್ರಕರಣದ ಬಗ್ಗೆ ಕೂಲಂಕುಶ ತನಿಖೆಯಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯದಲ್ಲಿ ಈಗಾಗಲೇ 20ಕ್ಕೂ ಅಧಿಕ ಹಿಂದೂ ಯುವಕರ ಹತ್ಯೆಯಾಗಿದೆ. ಎಲ್ಲಾ ಕೊಲೆಯಲ್ಲೂ ಪಿಎಫ್ಐ ಕಾರ್ಯಕರ್ತರ ಕೈವಾಡವಿದೆ ಎಂಬ ಆರೋಪವಿದೆ. ಇಷ್ಟಾದರೂ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ತಾಕತ್ತು ಸರ್ಕಾರಕ್ಕಿಲ್ಲ.
ಸರ್ಕಾರಕ್ಕೆ ತಾಕತ್ತಿಲ್ಲದಿದ್ದರೆ ಹೇಳಲಿ. ಹಿಂದೂಗಳೇ ಎಸ್‌ಡಿಪಿಐ, ಪಿಎಫ್ಐನ್ನು ಮಟ್ಟಹಾಕುತ್ತೇವೆ ಎಂದು ಸವಾಲು ಹಾಕಿದರು. ಕೇವಲ ಓಟು ರಾಜಕಾರಣಕ್ಕಾಗಿ ಮಸ್ಲಿಮರ ತುಷ್ಟೀಕರಣದಿಂದಾಗಿ ಇಷ್ಟು ಮಂದಿ ಹಿಂದೂ ಯುವಕರು ಹತ್ಯೆಗೊಳಾದರೂ ಸರ್ಕಾರ ಮೌನ ವಹಿಸಿರುವುದು ಖಂಡನೀಯ ಎಂದರು.
ಪರೇಶ್ ಸಾವು ಸಹಜವೆಂದು ಸರ್ಕಾರ ಹೇಳುತ್ತಿದೆ. ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಹುಡುಗ ಸಣ್ಣ ಕೆರೆಯಲ್ಲಿ ಸಾವನ್ನಪ್ಪುತ್ತಾನೆಂದರೆ ನಂಬುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ಈ ಸಂದರ್ಭ ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಶೇಣವ, ಡಾ. ವಾಮನ ಶೆಣೈ, ಸತ್ಯಜಿತ್ ಸುರತ್ಕಲ್, ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English