ಸಪೋಟಾ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ

11:40 AM, Thursday, December 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

sapotaಹೇರಳವಾದ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗು ಅನೇಕ ಉತ್ತಮ ಅಂಶಗಳನ್ನೊಳಗೊಂಡ ಸಪೋಟಾ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ. ಬಹಳ ತಂಪು ಗುಣದ ಇದರ ಸೇವನೆಯು ಆ್ಯಸಿಡಿಟಿಯವರಿಗೆ ಹಾಗೂ ಉಷ್ಣದೇಹಿಗಳಿಗೆ ಬಹಳ ಹಿತಕರ.

ಸಪೋಟ ವಿದ್‌ ಮಿಕ್ಸೆಡ್‌ ಫ‌ೂಟ್ಸ್‌ ಕಸ್ಟರ್ಡ್‌
ಬೇಕಾಗುವ ಸಾಮಗ್ರಿ: ಹೆಚ್ಚಿದ ಸಪೋಟಾ ಹಣ್ಣು – ಒಂದು ಕಪ್‌, ಹೆಚ್ಚಿದ ಬಾಳೆಹಣ್ಣು, ದ್ರಾಕ್ಷಿ, ಸೇಬು, ಪೈನಾಪಲ್‌ ಇತ್ಯಾದಿ ತಲಾ – ಅರ್ಧ ಕಪ್‌, ಹೆಚ್ಚಿದ ಖರ್ಜೂರ – ಎರಡು, ಅಂಜೂರ – ಒಂದು, ಒಣದ್ರಾಕ್ಷಿ – ಎರಡು ಚಮಚ, ಗೋಡಂಬಿ ಚೂರುಗಳು- ಎರಡು ಚಮಚ, ತುಪ್ಪ – ಒಂದು ಚಮಚ, ಸಕ್ಕರೆ – ಎರಡು ಚಮಚ, ಜೇನುತುಪ್ಪ- ಎರಡು ಚಮಚ, ಹಾಲು – ಎರಡು ಕಪ್‌, ಕಸ್ಟರ್ಡ್‌ ಪುಡಿ – ಎರಡು ಚಮಚ.

sapota-2ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ಗೆ ಸಪೋಟಾ ಹಾಗೂ ಮೇಲೆ ಹೇಳಿದ ಇತರ ಹಣ್ಣುಗಳನ್ನು ಹಾಕಿ ಇದಕ್ಕೆ ಸಕ್ಕರೆ, ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಮಾಡಿಡಿ. ಹಾಲಿಗೆ ಕಸ್ಟರ್ಡ್‌ ಪುಡಿ ಮಿಶ್ರಮಾಡಿ ಸಕ್ಕರೆ ಸೇರಿಸಿ ಕುದಿಸಿ. ಇದು ಆರಿದ ಮೇಲೆ ಫ್ರಿಜ್‌ನಲ್ಲಿಟ್ಟು ತಂಪಾಗಿಸಿಕೊಳ್ಳಿ. ನಂತರ, ಇದಕ್ಕೆ ಹಣ್ಣುಗಳನ್ನು ಮಿಶ್ರಮಾಡಿ ಮೇಲಿನಿಂದ ಚೆರಿಯಿಂದ ಅಲಂಕರಿಸಿ ಸರ್ವ್‌ ಮಾಡಬಹುದು.

ಸಪೋಟಾ ಕುಲ್ಫಿ
ಬೇಕಾಗುವ ಸಾಮಗ್ರಿ: ಸಪೋಟಾ – ನಾಲ್ಕು, ಬಾಳೆಹಣ್ಣು- ಒಂದು, ಖರ್ಜೂರ – ಎರಡು, ಗೋಡಂಬಿ ತರಿ – ಎರಡು ಚಮಚ, ಹಾಲು – ಎರಡು ಕಪ್‌, ಸಕ್ಕರೆ ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಮಿಕ್ಸಿಜಾರಿಗೆ ಸಪೋಟಾ, ಬಾಳೆಹಣ್ಣು, ಹಾಲು ಮತ್ತು ಸಕ್ಕರೆ ಸೇರಿಸಿ ರುಬ್ಬಿ. ನಂತರ ಇದಕ್ಕೆ ಹೆಚ್ಚಿದ ಖರ್ಜೂರ ಮತ್ತು ಗೋಡಂಬಿ ತರಿ ಸೇರಿಸಿ ಕುಲ್ಫಿà ಮೋಡ್‌ಗೆ ಸುರಿದು ಗಟ್ಟಿಯಾಗಿಸಿ ಹೆಚ್ಚಿದ ಸಪೋಟಾ ಹಣ್ಣುಗಳ ಜೊತೆ ಸರ್ವ್‌ ಮಾಡಬಹುದು.

ಚಿಕ್ಕು ಮಿಲ್ಕ್ಶೇಕ್‌
ಬೇಕಾಗುವ ಸಾಮಗ್ರಿ: ಚಿಕ್ಕುಹಣ್ಣು- ಆರು, ಖರ್ಜೂರ – ನಾಲ್ಕು, ಹಾಲು – ಎರಡು ಕಪ್‌, ಸಕ್ಕರೆ – ರುಚಿಗೆ ಬೇಕಷ್ಟು, ಐಸ್‌ಕ್ರೀಮ್‌ – ನಾಲ್ಕು ಚಮಚ. ತಯಾರಿಸುವ ವಿಧಾನ: ಹೆಚ್ಚಿದ ಚಿಕ್ಕು ಹಣ್ಣುಗಳಿಗೆ ನೆನೆಸಿಟ್ಟ ಖರ್ಜೂರ, ಸಕ್ಕರೆ ಹಾಗೂ ತಂಪಾದ ಹಾಲು ಸೇರಿಸಿ ನುಣ್ಣಗೆ ರುಬ್ಬಿ ಐಸ್‌ಕ್ರೀಮ್‌ ಸೇರಿಸಿ ಸರ್ವ್‌ ಮಾಡಬಹುದು. ಐಸ್‌ಕ್ರೀಮ್‌ ಸೇರಿಸದೇ ಐಸ್‌ಪೀಸ್‌ ಸೇರಿಸಿಯೂ ಸರ್ವ್‌ ಮಾಡಬಹುದು.

sapota-3ಚಿಕ್ಕು ವಿದ್‌ ಓಟ್ಸ್‌
ಬೇಕಾಗುವ ಸಾಮಗ್ರಿ: ಹೆಚ್ಚಿದ ಚಿಕ್ಕು ಹಣ್ಣುಗಳು – ನಾಲ್ಕು, ಹೆಚ್ಚಿದ ಬಾಳೆಹಣ್ಣು, ಪಪ್ಪಾಯ, ಸೇಬು, ಖರ್ಜೂರ ಇತ್ಯಾದಿ ತಲಾ- ನಾಲ್ಕು ಚಮಚ, ಹಾಲು- ಒಂದು ಕಪ್‌, ಓಟ್ಸ್‌- ನಾಲ್ಕು ಚಮಚ, ಬಾದಾಮಿತರಿ- ಎರಡು ಚಮಚ, ಕಾರ್ನ್ಫ್ಲೇಕ್ಸ್‌ – ಎರಡು ಚಮಚ.

ತಯಾರಿಸುವ ವಿಧಾನ: ಓಟ್ಸ್‌ನ್ನು ಸ್ವಲ್ಪ ಬೆಚ್ಚಗೆ ಮಾಡಿ ಆರಿದ ಮೇಲೆ ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಹಾಲು ಸೇರಿಸಿ. ನಂತರ, ಹೆಚ್ಚಿದ ಚಿಕ್ಕು ಹಾಗೂ ಇತರ ಹಣ್ಣುಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ಬೇಕಿದ್ದರೆ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಬಹುದು. ನಂತರ, ಬಾದಾಮಿ ತರಿ ಸೇರಿಸಿ ಮಿಶ್ರಮಾಡಿ ಸರ್ವ್‌ ಮಾಡುವಾಗ ಮೇಲಿನಿಂದ ಕಾರ್ನ್ಫ್ಲೇಕ್ಸ್‌ ಹರಡಬಹುದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English