ಮಂಗಳೂರು: ದಿಲ್ಲಿಯಲ್ಲಿ ಹೈಕೋರ್ಟ್ ಆವರಣದಲ್ಲಿ ನಿನ್ನೆ ಸಂಭವಿಸಿದ ಸ್ಫೋಟ ಹಾಗೂ ನಗರದ ನೆಹರು ಮೈದಾನಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಬುಧವಾರ ಆಯ್ದ ಸ್ಥಳಗಳಲ್ಲಿ ವ್ಯಾಪಕ ತಪಾಸಣೆ ನಡೆಸಲಾಗಿದ್ದು, ಪೊಲೀಸ್ ಬಂದೋಬಸ್ತು ಬಿಗಿಗೊಳಿಸಲಾಗಿತ್ತು.
ಮಹಾವೀರ ವೃತ್ತ, ನಂತೂರು ಜಂಕ್ಷನ್, ಸರ್ವೀಸ್ ಬಸ್ ನಿಲ್ದಾಣ ಮತ್ತು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾ ನ್ಯಾಯಾಲಯ, ಮಾಲ್, ಬಂದರು ಮತ್ತಿತರ ಕಡೆಗಳಲ್ಲಿ ಎರಡೆರಡು ಬಾರಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದವರು ತಪಾಸಣೆ ನಡೆಸಿದ್ದಾರೆ.
ರಾತ್ರಿ ವೇಳೆ ಹಿಂದೂ ಯುವ ಸೇನೆಯ ಗಣೇಶೋತ್ಸವದ ಶೋಭಾ ಯಾತ್ರೆಯ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು.
Click this button or press Ctrl+G to toggle between Kannada and English
September 8th, 2011 at 23:08:14
ದಿಲ್ಲಿ ಸ್ಪೋಟದಿಂದ ನಮ್ಮ ಅಂತರಿಕ ಭದ್ರತೆಯ ಬಗ್ಗೆ ಹೆಚ್ಹಿನ ಗಮನ ಹರಿಸುವುದು ಒಳ್ಳೆಯದು