ಒಂದೇ ಹೆಸರು… ಕೊಲೆ ಕೇಸ್‌ನಲ್ಲಿ ಇನ್ಯಾರನ್ನೋ ಬಂಧಿಸಿ ಪೇಚಿಗೆ ಸಿಲುಕಿದ ಪೊಲೀಸ್ರು

10:25 AM, Friday, December 22nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

arrestedಮಂಗಳೂರು: ಪಣಂಬೂರು ಪೊಲೀಸರ ಎಡವಟ್ಟಿನಿಂದಾಗಿ ಅಮಾಯಕ ಯುವಕನ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾಗಿ, ಗುರುವಾರ ಆ ವ್ಯಕ್ತಿ ವಿದೇಶದಿಂದ ಆಗಮಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಬೇಕಾದ ಪ್ರಸಂಗ ನಡೆಯಿತು.

ಕುಳಾಯಿ ವಿದ್ಯಾನಗರ ನಿವಾಸಿ ಮೊಹಮ್ಮದ್ ಅಶ್ಫಕ್ ಪೊಲೀಸರ ವಿಚಾರಣೆಗೆ ಒಳಪಟ್ಟವರು. ಅಶ್ಫಕ್‌ ವಿದೇಶದಿಂದ ಆಗಮಿಸುತ್ತಿದ್ದ ಸಂದರ್ಭದಲ್ಲಿ ಠಾಣೆಯಲ್ಲಿ ವಿಚಾರಣೆ ನಡೆಸಿದರು. ನಂತರ ಹೇಳಿಕೆ ಪಡೆದು ಆತನನ್ನು ಬಿಡುಗಡೆಗೊಳಿಸಿ ಮನೆಯವರೆಗೆ ತಲುಪಿಸಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಪೊಲೀಸರು ಮಾಡಿದ ಪ್ರಮಾದಕ್ಕೆ ಅಶ್ಫಕ್‌ ಅವಮಾನ ಎದುರಿಸುವಂತಾಯಿತು ಎಂಬ ಮಾತು ಕೇಳಿಬಂತು.

ಕುಳಾಯಿ ವಿದ್ಯಾನಗರ ನಿವಾಸಿ ಮೊಹಮ್ಮದ್ ಅಶ್ಫಕ್ ಎರಡು ವರ್ಷಗಳ ಹಿಂದೆ ದಮಾಮ್‌‌ಗೆ ಉದ್ಯೋಗಕ್ಕೆ ತೆರಳಿದ್ದರು. ಅಲ್ಲಿ ಅವರು ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿತ್ತಿದ್ದರು. ಅಶ್ಫಕ್ ಗುರುವಾರ ಬೆಳಗ್ಗೆ ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಆಗ ಇಮಿಗ್ರೇಶನ್ ಅಧಿಕಾರಿಗಳು ಅಶ್ಫಕ್ ವಿರುದ್ಧ ಲುಕೌಟ್ ನೊಟೀಸ್ ಹೊರಡಿಸಲಾಗಿದೆ ಎಂದು ದಾಖಲೆ ತೋರಿಸಿ ಬಜಪೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈ ಬಗ್ಗೆ ಬಜಪೆ ಪೊಲೀಸರು ಪಣಂಬೂರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಅಶ್ಫಕ್‌ರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. 2016ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸುಪಾರಿ ನೀಡಿದ್ದ ಕಾರಣಕ್ಕೆ ಮೊಹಮ್ಮದ್ ಅಶ್ಫಕ್ ವಿರುದ್ಧ ಪಣಂಬೂರು ಪೊಲೀಸರು ಲುಕೌಟ್ ನೋಟಿಸ್ ಜಾರಿಗೊಳಿಸಿದ್ದರು. ಆದರೆ ಆ ಪ್ರಕರಣದ ಆರೋಪಿ ಬೇರೊಬ್ಬನಾಗಿದ್ದು, ಆತನ ಹೆಸರು ಮತ್ತು ತಂದೆಯ ಹೆಸರು ಒಂದೇ ಆಗಿರುವುದರಿಂದ ಪೊಲೀಸರಿಂದ ಎಡವಟ್ಟು ಮಾಡಿಕೊಂಡಿದ್ದರು.

ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆ ಘಟನೆ ನಡೆದಾಗ ನಾನು ಊರಿನಲ್ಲೇ ಇದ್ದೆ ಎಂದು ಪೊಲೀಸ್ ಠಾಣೆಯಲ್ಲಿ ಅಶ್ಫಕ್ ಹೇಳಿದ್ದಲ್ಲದೆ, ಈ ಬಗ್ಗೆ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ಪಡೆದು ಅಶ್ಫಕ್‌ನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪಣಂಬೂರು ಪೊಲೀಸರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English