ಮಂಗಳೂರು: ಮನುಷ್ಯ ತನ್ನ ಹಲ್ಲುಗಳ ಬಗ್ಗೆ ತೀವ್ರ ಕಾಳಜಿ ವಹಿಸಬೇಕು. ದೇಹದ ಆರೋಗ್ಯದ ಬಗ್ಗೆ ಎಷ್ಟು ಗಮನ ನೀಡತ್ತೇವೆಯೋ ಅಷ್ಟೇ ಗಮನವನ್ನು ಹಲ್ಲುಗಳ ಆರೋಗ್ಯದ ಕಡೆಗೂ ನೀಡಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಹೇಳಿದರು.
ರಥಬೀದಿಯ ಡಾ.ಪಿ.ದಯಾನಂದ ಪೈ.ಪಿ.ಸತೀಶ್ ಪೈ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಯುವ ರೆಡ್‌ಕ್ರಾಸ್ ಘಟಕ, ರೋವರ್ಸ್-ರೇಂಜರ‍್ಸ್ ಘಟಕ ಮತ್ತು ಲಯನ್ಸ್ ಕ್ಲಬ್ ಬೆಂದೂರ್‌ವೆಲ್ ಇದರ ಆಶ್ರಯದಲ್ಲಿ ನಡೆದ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಹಲ್ಲುಗಳ ಸ್ವಚ್ಚತೆಯ ಕಡೆಗೆ ಗಮನ ಕೊಟ್ಟರೆ ಆರೋಗ್ಯ ಪೂರ್ಣ ಬದುಕು ನಮ್ಮದಾಗುತ್ತದೆ ಎಂದು ಅವರು ನುಡಿದರು.
ಮಂಗಳೂರಿನ ಕಸ್ತೂರ್ಬಾ ದಂತ ವೈದ್ಯಕೀಯ ಕಾಲೇಜಿನ ಡಾ.ರಾಜೇಶ್ ಮತ್ತು ತಂಡದವರು ಕಾಲೇಜು ವಿದ್ಯಾರ್ಥಿಗಳ ದಂತ ತಪಾಸಣೆಯನ್ನು ನಡೆಸಿ ಕೊಟ್ಟರು. ಮೂರು ದಿವಸಗಳ ಕಾಲ ನಡೆದ ಈ ತಪಾಸಣಾ ಶಿಬಿರದ ಪ್ರಯೋಜನವನ್ನು ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪಡೆದುಕೊಂಡರು.
ಈ ಶಿಬಿರವನ್ನು ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜನಾಧಿಕಾರಿ ಪ್ರೊ.ಮಹೇಶ್ ಕೆ.ಬಿ., ರೇಂಜರ‍್ಸ್- ರೋವರ‍್ಸ್ ನ ಪ್ರೊ.ಪುರುಷೋತ್ತಮ ಭಟ್ ಮತ್ತು ಡಾ.ಶೈಲಾರಾಣಿ ಹಾಗೂ ಲಯನ್ಸ್ ಕ್ಲಬ್ ಬೆಂದೂರ್‌ವೆಲ್‌ನ ಅಧ್ಯಕ್ಷರಾದ ಶ್ರೀ ನಾಗೇಶ್ ಕುಮಾರ್ ಎನ್.ಜೆ., ಕಾರ್ಯದರ್ಶಿ ಶ್ರೀ ದೇರಣ್ಣ ಬಿ. ಖಜಾಂಚಿ ಮತ್ತು ಶ್ರೀ ಅನಂತ ಶೇಟ್ ಇವರು ಸಂಯೋಜಿಸಿದ್ದರು.
Click this button or press Ctrl+G to toggle between Kannada and English