ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ 23ನೇ ಸಮ್ಮೇಳನ

4:13 PM, Friday, December 22nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

communist-partyಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷವು ಒಂದು ಶಿಸ್ತುಬದ್ದ ಪಕ್ಷವಾಗಿದ್ದು ತನ್ನ ನಿರ್ಧಾರಗಳನ್ನು ಪ್ರಜಾಪ್ರಭುತ್ವವಾದಿ ನೆಲೆಯಲ್ಲಿ ನಿರೂಪಿಸುತ್ತದೆ. ಈ ನೆಲೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಸಮ್ಮೇಳನಗಳು ಅತಿ ಪ್ರಾಮುಖ್ಯವಾಗಿದೆ. ಗ್ರಾಮ ಮಟ್ಟದಿಂದ ಪ್ರಾರಂಭವಾಗುವ ಸಮ್ಮೇಳನಗಳು ಮುಂದುವರಿದು ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ಕೊನೆಗೆ ದೇಶಮಟ್ಟದಲ್ಲಿ ಕೊನೆಗೊಳ್ಳುತ್ತದೆ.

ಪ್ರತಿ ಸಮ್ಮೇಳನಗಳಲ್ಲೂ ಹಿಂದಿನ ಮೂರು ವರ್ಷಗಳಲ್ಲಿ ಆದ ಬೆಳವಣಿಗೆ, ತೆಗೆದುಕೊಂಡ ನಿರ್ಣಯಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ವಿಶ್ಲೇಷಣೆ ನಡೆದು ಮುಂದೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಚರ್ಚೆ ನಡೆದು ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಸಿಪಿಐ ಪಕ್ಷದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ 23ನೇ ಸಮ್ಮೇಳನ ಮಂಗಳೂರಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗ್ರಾಮ, ತಾಲೂಕು ಮಟ್ಟದ ಸಮ್ಮೇಳನಗಳು ಮುಗಿದಿದ್ದು ಜಿಲ್ಲಾ ಸಮ್ಮೇಳನ 2017 ರ ಡಿಸೆಂಬರ್ 24, 25 ಮತ್ತು 26ರಂದು ಮಂಗಳೂರಲ್ಲಿ ನಡೆಯಲಿದೆ. ಮೊದಲೆರಡು ದಿನಗಳ ಸಮ್ಮೇಳನ ಪ್ರತಿನಿಧಿ ಸಮ್ಮೇಳನವಾಗಿದ್ದು ಅಲ್ಲಿ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಜಿಲ್ಲಾ ಕಾರ್ಯದರ್ಶಿ ಮಂಡಿಸುವ ರಾಜಕೀಯ, ಸಂಘಟನಾತ್ಮಕ ಹಾಗೂ ಕಾರ್ಯಕ್ರಮಗಳ ಕರಡು ವರದಿಯ ಮೇಲೆ ಈ ಎರುಡು ದಿನಗಳಲ್ಲಿ ಚರ್ಚೆ ನಡೆಯಲಿದ್ದು ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದಲ್ಲದೆ ಮುಂದಿನ ಮೂರು ವರ್ಷಗಳಿಗೆ ಪದಾಧಿಕಾರಿ ಮತ್ತು ಕಾರ್ಯಕಾರಿ ಸಮಿತಿಯನ್ನು ಚುನಾಯಿಸಲಾಗುತ್ತದೆ.

೨೦೧೭ರ ಡಿಸೆಂಬರ್ ೨೬ರಂದು ಬಹಿರಂಗ ಸಮ್ಮೇಳನವು ರ‍್ಯಾಲಿ ಮತ್ತು ಬಹಿರಂಗ ಸಭೆಯೊಂದಿಗೆ ಮಂಗಳೂರಿನ ನೆಹರೂ ಮೈದಾನದ ಕಾ| ಗೋವಿಂದ ಪನ್ಸಾರೆ ವೇದಿಕೆಯಲ್ಲಿ ನಡೆಯಲಿದೆ.

ಬೆಳಗ್ಗೆ ಮಂಗಳೂರು ಮುಖ್ಯ ಸಿಗ್ನಲ್ ವೃತ್ತದ ಬಳಿ (ವೆನ್ಲಾಕ್ ಆಸ್ಪತ್ರೆ/ಮಿಲಾಗ್ರೆಸ್ ಚರ್ಚ್ ಸಮೀಪ) ಒಟ್ಟು ಸೇರಿ ರ‍್ಯಾಲಿ ನಡೆಸಿ ನಂತರ ನೆಹರೂ ಮೈದಾನದಲ್ಲಿ ಬಹಿರಂಗ ಸಭೆ ಜರಗಲಿದೆ ಈ ಮೆರವಣಿಗೆ ಮಂಗಳೂರು ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ನೆಹರೂ ಮೈದಾನದ ಕಾ| ಗೋವಿಂದ ಪನ್ಸಾರೆ ವೇದಿಕೆ ಕಡೆಗೆ ಸಾಗಲಿದೆ. ಅಲ್ಲಿ ಬಹಿರಂಗ ಸಭೆ ನಡೆಯಲಿದೆ.

ಈ ಕಾರ್ಯಕ್ರಮಗಳಲ್ಲಿ ಈ ಪತ್ರಿಕಾ ಹೇಳಿಕೆಗೆ ಲಗತ್ತಿಸಿರುವ ಆಮಂತ್ರಣ ಪತ್ರಿಕೆಯಂತೆ ಗಣ್ಯರು ಭಾಗವಹಿಸಲಿದ್ದಾರೆ. ಕೇರಳ ರಾಜ್ಯದ ಮಾನ್ಯ ಕಂದಾಯ ಮಂತ್ರಿಯವರಾದ ಕಾ| ಇ ಚಂದ್ರಶೇಖರನ್ ಉಧ್ಘಾಟಕರಾಗಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಸಿಪಿಐ ಕಾರ್ಯದರ್ಶಿ ಕಾ| ಪಿ.ವಿ. ಲೋಕೇಶ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಕಾ| ಡಾ| ಸಿದ್ದನಗೌಡ ಪಾಟೀಲ್, ರಾಜ್ಯ ಸಿಪಿಐ ಸಹಾಯಕ ಕಾರ್ಯದರ್ಶಿ ಕಾ| ಸಾತಿ ಸುಂದರೇಶ್ ಭಾಗವಹಿಸಲಿದ್ದಾರೆ. ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾ| ವಿ. ಕುಕ್ಯಾನ್ ವಹಿಸಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English