ಮಂಗಳೂರು : ಹಿಂದೂ ಯುವಸೇನೆಯ ವತಿಯಿಂದ ನಗರದ ನೆಹರೂ ಮೈದಾನಿನಲ್ಲಿ ನಡೆಯುವ 18 ನೇ ವರ್ಷದ ಗಣೇಶೋತ್ಸವದ ವೈಭಯುತ ವಿಸರ್ಜನಾ ಮೆರವಣಿಗೆ ಶುಕ್ರವಾರ ಸಂಜೆ 7 ಗಂಟೆಗೆ ನಡೆಯಿತು. 7 ದಿನಗಳಿಂದ ಗಣಪತಿಯ ಉತ್ಸವ ಮೂರ್ತಿಯನ್ನು ಬಗೆ ಬಗೆಯ ಶೃಂಗಾರದಿಂದ, ನಾನಾ ಬಗೆಯ ಖಾದ್ಯ – ಪದಾರ್ಥಗಳನ್ನಿಟ್ಟು ಆರಾಧಿಸಲಾಗುತಿತ್ತು.
ವಿಸರ್ಜನಾ ಮೆರವಣಿಗೆಯು ನೆಹರೂ ಮೈದಾನದಿಂದ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ, ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್, ಡೊಂಗರಕೇರಿ, ನ್ಯೂಚಿತ್ರ ಟಾಕೀಸ್, ರಥಬೀದಿಯಾಗಿ ಸಾಗಿತು. ಗಣಪತಿಯ ಉತ್ಸವ ಮೂರ್ತಿಯನ್ನು ಶ್ರೀ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಯಿತು.
ಕೇರಳದ ಚೆಂಡೆವಾದನ, ನಾಸಿಕ್ ಬ್ಯಾಂಡ್, ವಿವಿಧ ವಿನ್ಯಾಸದ ಟ್ಯಾಬ್ಲೊಗಳು, ವಾದ್ಯ ಘೋಷಗಳೊಂದಿಗೆ ಗಣೇಶನ ಮೆರವಣಿಗೆ ಸಾಗಿತು.
ಸಿಡಿಮದ್ದು ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಸಾವಿರಾರು ಭಕ್ತರು ತಡರಾತ್ರಿಯವರೆಗೂ ಮೆರವಣಿಗೆ ಯಲ್ಲಿ ಪಾಲ್ಗೊಂಡು ಪುನೀತರಾದರು. ಈ ಬಾರಿ ಮಳೆ ಇಲ್ಲದೆ ಇದ್ದುದರಿಂದ ಭಕ್ತರು ಮೆರವಣಿಗೆಯ ಕೊನೆಯವರೆಗೂ ನಿಂತು ವೀಕ್ಷಿಸಿದರು.
ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಪ್ರಧಾನ ಕಾರ್ಯದರ್ಶಿ ಶ್ರೀ ರಾಮ ಚಂದ್ರ ಚೌಟ, ಹಿಂದೂ ಯುವಸೇನೆಯ ಅಧ್ಯಕ್ಷ ಯಶೋಧರ ಚೌಟ, ಪ್ರಧಾನ ಕಾರ್ಯದರ್ಶಿ ನಾಗೇಶ್ ಬಜಿಲಕೇರಿ, ಜನಾರ್ದನ ಎಸ್ ಅರ್ಕುಳ, ಪದ್ಮನಾಭ ನಾವೂರು, ಮೋಹನ್ ಪಡೀಲ್, ದಿನಕರ ಶೆಟ್ಟಿ, ಧರ್ಮೇಂದ್ರ, ಹಾಗೂ ಸಂಘಟನೆಯ ಮತ್ತಿತರ ಪಧಾಧಿಕಾರಿಗಳು ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದರು.
Click this button or press Ctrl+G to toggle between Kannada and English