ಚೆನ್ನೈ, : ನೂರು ಕೆಜಿಗಿಂತ ಭಾರವಾಗಿದ್ದ ಆ ಪುಟ್ಟ ಮರಿಆನೆಯನ್ನು ಆ ಅರಣ್ಯ ಸಂರಕ್ಷಕ ಹೇಗೆ ಎತ್ತಿದನೋ, ಎತ್ತಿಯೇಬಿಟ್ಟ! ಆ ಕ್ಷಣದಲ್ಲಿ ಅವರ ಮನದಲ್ಲಿ ಏನೂ ಓಡುತ್ತಿರಲಿಲ್ಲ. ಆಗಬೇಕಾಗಿದ್ದುದು ಒಂದೇ, ಆನೆಮರಿಯನ್ನು ಉಳಿಸಬೇಕಾಗಿತ್ತು. ಸಿದ್ದನ ನೆನಪಿನಲ್ಲಿ ‘ವರ್ಲ್ಡ್ ವೈಲ್ಡ್‌ಲೈಫ್ ಮೂಮೆಂಟ್’ ಆರಂಭ ಇವರೇ ಇಲ್ಲವೇ ನಿಜವಾದ ಹೀರೋ, ನಿಜವಾದ ‘ಬಾಹುಬಲಿ’? 28 ವರ್ಷದ ತಮಿಳುನಾಡಿನ ಪಳನಿಚಾಮಿ ಶರತ್ ಕುಮಾರ್ ಅವರು ಸಂಕಷ್ಟದಲ್ಲಿ ಸಿಲುಕಿದ್ದ ಆನೆಮರಿಯನ್ನು ಪಾರುಮಾಡಿದ ಮತ್ತು ಅದರ ತಾಯಿಯೊಂದಿಗೆ ಕೂಡಿಸಿದ ಹೃದಯಂಗಮ ಕಥೆ ಇಲ್ಲಿದೆ.
ಆನೆಮರಿಯನ್ನು ಎತ್ತುವುದನ್ನು ಊಹಿಸಲೂ ಸಾಧ್ಯವಿಲ್ಲದಿರುವಾಗ ಅವರು ಎತ್ತಿದ್ದು ಹೇಗೆ? ಎಂದು ಅವರ ಹಳ್ಳಿಯಲ್ಲಿ ಎಲ್ಲರೂ ಅಚ್ಚರಿಯಿಂದ ಕೇಳುತ್ತಿದ್ದಾರೆ. ಇದಕ್ಕಾಗಿ ಎಲ್ಲೆಡೆಯಿಂದಲೂ ಪ್ರಶಂಸೆಯ ಸುರಿಮಳೆ ಪಳನಿಚಾಮಿ ಅವರಿಗೆ ಹರಿದುಬರುತ್ತಿವೆ.
ಆನೆ ಜತೆಗೆ ಬಾಹುಬಲಿ ಸ್ಟಂಟ್, ಬೆನ್ನ ಮೂಳೆಗೆ ತಂದಿತು ಕುತ್ತು “ಆನೆಮರಿ ಭಾರೀ ಭಾರವಾಗಿತ್ತು. ಆದರೆ, ಹೇಗೆ ಎತ್ತಿದೆನೋ ಗೊತ್ತಿಲ್ಲ, ಆ ಒಂದು ಕ್ಷಣದಲ್ಲಿ ಆನೆಮರಿಯನ್ನು ಎತ್ತಿಯೇಬಿಟ್ಟೆ” ಎಂದು ಆರಡಿ ಎತ್ತರ, ಎಂಬತ್ತು ಕೆಜಿ ತೂಗುವ ಅವರು ಸಂತೋಷಭರಿತರಾಗಿ ಹೇಳುವಾಗ ಕೇಳುಗರ ಮೈಮೇಲೆಲ್ಲ ಕೂದಲುಗಳು ನಿಮಿರುತ್ತವೆ, ಮುಳ್ಳಿನ ಗುಳ್ಳೆಗಳೇಳುತ್ತವೆ.
ಆ ಕಾಡಿನಲ್ಲಿ ಮತ್ತು ದಾರಿಯಲ್ಲಿ ನನ್ನ ಸಮತೋಲನವನ್ನು ಕಳೆದುಕೊಳ್ಳುವ ಅಪಾಯವಿತ್ತು. ಆದರೆ, ನನ್ನ ಸ್ನೇಹಿತರು ನನ್ನ ಸಹಾಯಕ್ಕೆ ಬಂದರು ಎಂದು, ಉದಕಮಂಡಲದಿಂದ 50 ಕಿ.ಮೀ. ದೂರದಲ್ಲಿರುವ ಮೆಟ್ಟುಪಾಳ್ಯಂ ಎಂಬ ಅರಣ್ಯದಲ್ಲಿ ಸಂರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಪಳನಿಚಾಮಿ ಹೇಳುತ್ತಾರೆ. ಚಾಮಿಯ ಮಾತುಗಳಲ್ಲೇ ಕೇಳಿ. ಈ ಘಟನೆ ನಡೆದಿದ್ದು ಡಿಸೆಂಬರ್ 12ರಂದು. ರಾತ್ರಿಪಾಳಿ ಮುಗಿಸಿ ಮನೆಗೆ ತೆರಳುತ್ತಿದ್ದೆ.
ಆಗ, ಹೆಣ್ಣು ಆನೆಯೊಂದು ನವಭದ್ರ ಕಾಳಿಯಮ್ಮನ್ ದೇವಸ್ಥಾನದ ಬಳಿ ರಸ್ತೆಗೆ ಅಡ್ಡಲಾಗಿ ನಿಂತಿದೆ ಎಂಬ ಸಂದೇಶ ಬಂದಿತು. ಪಟಾಕಿಗಳನ್ನು ಸಿಡಿಸಿ ಅದನ್ನೇನೋ ಓಡಿಸಲಾಯಿತು. ಆದರೆ, ಬಳಿಯಲ್ಲಿಯೇ ಮರಿಆನೆ ಸಣ್ಣ ಗುಣಿಯಲ್ಲಿ ಸಿಲುಕಿದ್ದು ಕಂಡುಬಂದಿತು. ಮರಿಆನೆ ಗುಣಿಯಲ್ಲಿ ಸಿಲುಕಿದ್ದರಿಂದಲೇ ತಾಯಿ ಆನೆ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಆನೆಮರಿಗೆ ಅಡ್ಡಲಾಗಿ ಒಂದು ಬಂಡೆಯಿತ್ತು. ಅದನ್ನು ಸರಿಸಿ ಮರಿಯನ್ನು ನಾಲ್ವರು ಸೇರಿ ಮೇಲೆತ್ತಿದೆವು. ಆರಂಭದಲ್ಲಿ ನಾಲ್ವರೂ ಸೇರಿ ಅದನ್ನು ಎತ್ತಿದೆವು.
ಅದನ್ನು ರಸ್ತೆ ದಾಟಿಸಿ ಅದರ ಅಮ್ಮನೊಂದಿಗೆ ಕೂಡಿಸಬೇಕಾಗಿತ್ತು. ಆದರೆ, ತಾಯಿ ಆನೆ ದಾಳಿ ಮಾಡುವ ಹೆದರಿಕೆಯಿದ್ದರಿಂದ ಹಿಂಜರಿದೆವು. ತಾಯಿಆನೆ ಎಲ್ಲರ ಮೇಲೆ ದಾಳಿ ಮಾಡಬಾರದೆಂದು ನಾನೇ ಅದನ್ನು ಅನಾಮತ್ತಾಗಿ ಎತ್ತಿ ರಸ್ತೆ ದಾಟಿಸಿ, ಸುಮಾರು 50 ಮೀಟರ್ ಕ್ರಮಿಸಿ ಇಳಿಸಿದೆ. ಅಲ್ಲಿ ನೀರಿನ ಬಳಿ ಇಳಿಸಿ ಸುಮಾರು ಹೊತ್ತು ಕಾದರೂ ತಾಯಿಆನೆ ಬರಲಿಲ್ಲ. ಬೇರೆ ದಾರಿ ಕಾಣದೆ, ನಾವು ಮನೆಗೆ ತೆರಳಿದೆವು. ಮರುದಿನ ಬಂದು ನೋಡಿದಾಗ ಮರಿಆನೆ ಅಲ್ಲಿ ಇರಲಿಲ್ಲ. ಆದರೆ ಅಲ್ಲಿ ದೊಡ್ಡ ಆನೆ ಮತ್ತು ಮರಿಆನೆಯ ಕಾಲಿನ ಗುರುತುಗಳು ಅಲ್ಲಿ ಕಾಣಿಸಿದವು. ಮರಿಆನೆ ತಾಯಿಯೊಂದಿಗೆ ಸೇರಿಕೊಂಡಿದೆ ಎಂದು ನೆಮ್ಮದಿಯಿಂದ ಕೆಲಸಕ್ಕೆ ತೆರಳಿದೆವು.
Click this button or press Ctrl+G to toggle between Kannada and English