ನನ್ನ ಗೆಲುವಿಗೆ ಮುಸ್ಲಿಂ ಸಮುದಾಯ ಕಾರಣ: ರಮಾನಾಥ ರೈ

4:00 PM, Friday, December 29th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Ramanath-raiಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬಂಟ್ವಾಳ ಕ್ಷೇತ್ರದಲ್ಲಿ ತಾನು 6 ಬಾರಿ ಗೆದ್ದು ಬರಲು ಮುಸ್ಲಿಂ ಸಮುದಾಯ ಪ್ರಮುಖ ಪಾತ್ರ ವಹಿಸಿದ್ದಾರೆ. ಜನಪ್ರತಿನಿಧಿಗಳಿಗೆ ಮಗ್ಗುಲ ಮುಳ್ಳಾಗಲಿದಿಯೇ ಎತ್ತಿನ ಹೊಳೆ? ಮುಸ್ಲಿಂ‌ ಸಮುದಾಯದ ಜನರ ಋಣ ಜನ್ಮ ಜನ್ಮಾಂತರಗಳಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರ ದ ಹಿಂದೂ ಸಮುದಾಯದ‌ ಜನರ‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಕುರಿತ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತಿಚೆಗೆ ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಈ ಹೇಳಿಕೆ ನೀಡಿದ್ದಾರೆ. ರೈ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರೈ ಅವರ ಜಾತ್ಯಾತೀತ ಸಿದ್ದಾಂತ ಬಗ್ಗೆ ಚರ್ಚೆ ಆರಂಭವಾಗಿದೆ. ಸಂಖ್ಯಾದೃಷ್ಠಿಯಲ್ಲಿ ಉಳ್ಳಾಲ ಕ್ಷೇತ್ರವನ್ನು ಬಿಟ್ಟರೆ ವಿಟ್ಲದಭಾಗವಾಗಿ ಸೇರಿಕೊಂಡಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅತ್ಯಂತ ಹೆಚ್ಚು ಮುಸ್ಲಿಮರು ಇರುವ ಕ್ಷೇತ್ರ. ಅದರಲ್ಲಿ ಕಡಿಮೆ ಸಂಖ್ಯೆಯಲ್ಲಿರುವವರು ಬಂಟರು. ಆದರೆ ಬ್ಯಾರಿ ಭಾಷೆ ಮಾತನಾಡುವ ಜನರ ಜಾತ್ಯಾತೀತ ನಿಲುವನ್ನು ಎಲ್ಲರೂ ಮೆಚ್ಚಬೇಕಾಗಿದೆ. ಜಾತಿ, ಧರ್ಮದ ಪರಿಧಿಯನ್ನು ಮೀರಿ ರಮಾನಾಥ ರೈ ವಿಧಾನಸಭೆಗೆ ಆಯ್ಕೆ ಮಾಡುವ ಕೆಲಸ ಮಾಡಿದ್ದಾರೆ.

ಹೀಗಾಗಿ ಮುಸ್ಲಿಂ ಸಮುದಾಯದ ಋಣ ಈ ಜನ್ಮದಲ್ಲಿ ತೀರಿಸಲು , ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಒಬ್ಬ ಶಾಸಕ ಆ ಕ್ಷೇತ್ರದ ಎಲ್ಲಾ ಸಮುದಾಯದ ಶಾಸಕನಾಗಿದ್ದು ತನ್ನ ಗೆಲುವಿನಲ್ಲಿ ಎಲ್ಲಾ ಸಮುದಾಯ ದವರ ಪಾತ್ರ ಇರುವುದನ್ನು ರೈ ಮರೆ ತಂತಿದೆ.

ತನ್ನ ಗೆಲುವಿನ ಯಶಸ್ಸಿಗೆ ಕೇವಲ ಮುಸ್ಲಿಂ ಸಮುದಾಯ ಕಾರಣ ಎಂದು ಹೇಳುವುದು ಎಷ್ಟು ಸರಿ ಎನ್ನುವ ಕುರಿತು ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ರೈ ಅವರ ಈ ಹೇಳಿಕೆ ರಾಜಕೀಯ ವಾಗ್ವಾದಕ್ಕೆ ಗುರಿಯಾಗುವ ಸಾದ್ಯತೆಗಳು ಹೆಚ್ಚಾಗಿದೆ. ಮುಂಬರುವ ವಿಧಾನ ಸಭಾ ಚುನಾವಣೆಗೆ ಸಚಿವ ರಮಾನಾಥ ರೈ ಅವರ ಈ ಹೇಳಿಕೆಯನ್ನು ಬಿಜೆಪಿ ಪ್ರಮುಖ ಅಸ್ತ್ರವಾಗಿ ಬಳಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English