ಮಂಗಳೂರಿಗರಿಗೆ ಸಂತಸದ ಸುದ್ದಿ, ಉಳ್ಳಾಲದಲ್ಲಿ ಸ್ಕೂಬಾ ಡೈವಿಂಗ್ ಆರಂಭ

10:57 AM, Monday, January 1st, 2018
Share
1 Star2 Stars3 Stars4 Stars5 Stars
(7 rating, 2 votes)
Loading...

scuba-drivingಮಂಗಳೂರು: ಸಮುದ್ರದ ಆಳಕ್ಕಿಳಿದು ಅಲ್ಲಿಯ ಪ್ರಾಕೃತಿ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಕನಸು ಕಾಣುವ ಮಂಗಳೂರಿಗರಿಗೆ ಸಂತಸದ ಸುದ್ದಿ ಇಲ್ಲಿದೆ.

ಇನ್ಮುದೆ ಸ್ಕೂಬಾ ಡೈವಿಂಗ್ ನ ರೋಮಾಂಚಕ ಅನುಭವ ಪಡೆಯಲು ಉತ್ತರ ಕನ್ನಡ ಜಿಲ್ಲೆಯ ನೆತ್ರಾಣಿ ಅಥವಾ ಉಡುಪಿಯ ಕಾಪುಗೆ ಹೋಗಬೇಕಾಗಿಲ್ಲ. ಸ್ಕೂಬಾ ಡೈವಿಂಗ್ ನ ಸಹಾಸಿ ಅನುಭವ ಮಂಗಳೂರಿನಲ್ಲಿಯೂ ದೊರೆಯಲಿದೆ.

ಹೌದು..ಸ್ಕೂಬಾ ಡೈವಿಂಗ್ ಮೂಲಕ ಕಡಲಾಳದ ಬೆರಗುಗಳಿಗೆ ಸಾಕ್ಷಿಯಾಗುವ ಸಾಹಸ ಜಲಕ್ರೀಡೆ ಮಂಗಳೂರು ಹೊರವಲಯದ ಉಳ್ಳಾಲ ಕಡಲತೀರದಲ್ಲಿ ಆರಂಭಗೊಳ್ಳಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆ ಆರಂಭಿಸಲು ಮುಂದಾಗಿದೆ. ಮಂಗಳೂರಿನ ಕಡಲತಡಿಯಲ್ಲಿ ಈ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗವನ್ನು ಪರಿಶೀಲನೆ ನಡೆಸಲಾಗುತ್ತಿತ್ತು. ಅಂತಿಮವಾಗಿ ಉಳ್ಳಾಲ ಸಮೀಪ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆಗೆ ಅವಕಾಶ ನೀಡಲಾಗಿದೆ.

ಸ್ಕೂಬಾ ಡೈವಿಂಗ್ ನಡೆಸಲಾಗುವ ಈ ಪ್ರದೇಶದಲ್ಲಿ ಹವಳದ ದಿಬ್ಬಗಳು, ಆಕರ್ಷಕ ಬಣ್ಣ ಬಣ್ಣದ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಸ್ಕೂಬಾ ಡೈವಿಂಗ್ ನೆಡೆಸಲು ವೆಸ್ಟ್ ಕೋ ಅಡ್ವೆಂಚರ್ಸ್ ಕಂಪೆನಿ ಹಾಗು ಸರ್ಫೆಸ್ ಸಂಸ್ಥೆ ಮುಂದೆ ಬಂದಿವೆ. ಇದೇ ಕಂಪನಿ ಗೋವಾ, ಮುಂಬೈ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಗೆ ವೇದಿಕೆ ಕಲ್ಪಿಸಿದೆ.

ಎಲ್ಲವೂ ಕ್ರಮ ಪ್ರಕಾರ ನಡೆದರೆ ಶೀಘ್ರದಲ್ಲಿಯೇ ಮಂಗಳೂರಿನ ಉಳ್ಳಾಲದಲ್ಲಿ ಸ್ಕೂಬಾ ಡೈವಿಂಗ್ ಸಾಹಸಕ್ಕೆ ಅವಕಾಶ ದೊರೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English