ಮಂಗಳೂರು: ಸುಬ್ರಹ್ಮಣ್ಯದಲ್ಲಿ ದೇವಸ್ಥಾನಕ್ಕೆ ಬಂದ ಚಿತ್ರನಟಿಯೊಬ್ಬಳು ಅನ್ಯಕೋಮಿನ ಹುಡುಗನ ಜೊತೆ ಇದ್ದ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಡಿಸೆಂಬರ್ 20 ರ ಮಧ್ಯಾಹ್ನ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಅನ್ಯಕೋಮಿನ ಹುಡುಗನ ಜೊತೆ ಯುವತಿ ರಾತ್ರಿ ಏಕಾಂಗಿಯಾಗಿ ಚಲಿಸುತ್ತಿದ್ದಾಳೆಂಬ ಸಾರ್ವಜನಿಕರ ದೂರು ಆಧರಿಸಿ ಯುವತಿಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಈಕೆಯನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಮನೆಯವರಿಗೆ ತಿಳಿಸದೇ ಆಕೆ ಬಂದಿರುವುದು ತಿಳಿದು ಬಂದಿದೆ ಎಂದರು.
ಆಗಸ್ಟ್‌ನಲ್ಲಿ ಈಕೆ ಕಾಣೆಯಾಗಿದ್ದಾಳೆಂಬ ದೂರು ಕೂಡ ಮನೆಯವರು ದಾಖಲಿಸಿದ್ದರು. ಮರುದಿನ ಡಿ.21 ರಂದು ಸ್ಟೇಷನ್‌ಗೆ ಬಂದ ಯುವಕನೊಂದಿಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವುದು ತಿಳಿದು ಬಂದಿದ್ದು ಕಾನ್ಸ್‌ಟೇಬಲ್ ಮತ್ತು ಹೆಡ್‌ಕಾನ್ಸ್ ಟೇಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಘಟನೆಯ ನಂತರ ಹುಡುಗನನ್ನು ತನ್ನ ಚಿಕ್ಕಪ್ಪ ಮತ್ತು ಹುಡುಗಿಯನ್ನು ಆಕೆಯ ತಂದೆಯೊಂದಿಗೆ ಕಳುಹಿಸಿ ಕೊಡಲಾಗಿದೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English