ಮುಖ್ಯಮಂತ್ರಿ ಕಾರ್ಯಕ್ರಮ ಯಶಸ್ವಿಗಾಗಿ ಶಾಸಕರ ಗ್ರಾಮ ಭೇಟಿ

10:44 AM, Wednesday, January 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

putturಪುತ್ತೂರು: ಜ. 7 ರಂದು ಪುತ್ತೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆಗಮಿಸಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಗ್ರಾಮಗಳಿಗೆ ಭೇಟಿ ನೀಡಿ ಮನವಿ ಮಾಡಿದರು.

ಕೆದಂಬಾಡಿ ಗ್ರಾಮ ವಲಯ ಕಾಂಗ್ರೆಸ್ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು ಅವರ ಮನೆಯಲ್ಲಿ ನಡೆದ ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಸಮುದಾಯಕ್ಕೂ ಹಿತವಾಗಿರುವ ಸರಕಾರವನ್ನೇ ನೀಡಿದೆ. ಬಡವರ ಕಣ್ಣೀರೊರೆಸುವ ಕೆಲಸವನ್ನು ಮಾಡಿದೆ.

ಅನೇಕ ಭಾಗ್ಯಗಳನ್ನು ಕರುಣಿಸುವ ಮೂಲಕ ಜನರ ನೋವಿಗೆ ಸ್ಪಂದಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೂ ಮುಖ್ಯಮಂತ್ರಿಗಳು ಕೋಟ್ಯಂತರ ಅನುದಾನವನ್ನು ನೀಡಿ ಕ್ಷೇತ್ರವನ್ನು ಅಭಿವೃದ್ದಿಪಡಿಸುವಲ್ಲಿ ಸಹಕರಿಸಿದ್ದಾರೆ. ಜ. 7 ರಂದು ನಮ್ಮೂರಿಗೆ ಭೇಟಿ ನೀಡುವ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಎಲ್ಲಾ ಗ್ರಾಮಸ್ಥರು ಕಿಲ್ಲೆ ಮೈದಾನಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಸಿದ್ದರಾಮಯ್ಯ ಅವರ ಭೇಟಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರತೀಯೊಬ್ಬ ಕಾರ್ಯಕರ್ತರೂ ಸಜ್ಜಾಗಬೇಕು. ಗ್ರಾಮಸ್ಥರನ್ನು ಕಾರ್ಯಕ್ರಮಕ್ಕೆ ಕರೆತರುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪಕ್ಷದ ಕಾರ್ಯಕರ್ತರು ಕಾರ್ಯಪೃವೃತ್ತರಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಅಮಲ ರಾಮಚಂದ್ರ ಉಪಸ್ಥಿತರಿದ್ದರು. ಕೆದಂಬಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆದಂಬಾಡಿ ಗ್ರಾಪಂ ಉಪಾಧ್ಯಕ್ಷೆ ಅಸ್ಮಾ ಗಟ್ಟಮನೆ, ಪುರಂದರ್ ರೈ ಕುಂಬ್ರ, ಗ್ರಾಪಂ ಸದಸ್ಯ ಚಂದ್ರಹಾಸ್ ರೈ ಬೋಳೋಡಿ, ಇಸ್ಮಾಯಿಲ್ ತಿಂಗಳಾಡಿ ಮೊದಲಾದವರು ಇದ್ದರು. ಶಾಸಕರ ನಿಯೋಗ ನರಿಮೊಗ್ರು, ಸರ್ವೆ, ಮುಂಡೂರು, ಕೆಯ್ಯೂರು, ಕೊಳ್ತಿಗೆ, ಪೆರ್ಲಂಪಾಡಿ, ಅರಿಯಡ್ಕ, ಬಡಗನ್ನೂರು, ನಿಡ್ಪಳ್ಳಿ, ಬೆಟ್ಟಂಪಾಡಿ, ಪಾಣಾಜೆ, ಒಳಮೊಗ್ರು ಮತ್ತು ಆರ್ಯಾಪು ಗ್ರಾಮಗಳಿಗೆ ಭೇಟಿ ನೀಡಿದರು.

ಬೂತ್ ಅಧ್ಯಕ್ಷರುಗಳಾದ ವಸಂತಕುಮಾರ್ ನರಿಮೊಗರು, ಶಶಿಧರ್ ಎಸ್ ಡಿ ಸರ್ವೆ, ಸಂತೋಷ್ ರೈ ಇಳಂತಾಜೆ ಕೆಯ್ಯೂರು, ವಸಂತ ರೈ ಜೆ ಕೆ ಕೊಳ್ತಿಗೆ, ರಾಜೀವ ರೈ ಕುತ್ಯಾಡಿ, ಸತೀಶ್ ರೈ ನಿಡ್ಪಳ್ಳಿ, ಮಾಧವ ಪೂಜಾರಿ ಬೆಟ್ಟಂಪಾಡಿ, ಲಕ್ಷ್ಮೀನಾರಾಯಣ ರೈ ಪಾಣಾಜೆ, ವಿನೋದ್ ಶೆಟ್ಟಿ ಕುಂಬ್ರ, ಅಶೋಕ್ ಕುಮಾರ್ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English