ಆಗ್ರಾ: ಪ್ರೇಮದ ಸಂಕೇತ, ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜ್ ಮಹಲ್ ನೋಡುವುದೇ ಒಂದು ಭಾಗ್ಯ. ಆದ್ರೆ ಕೇಂದ್ರ ಸರ್ಕಾರ ತಾಜ್ ಮಹಲ್ ವೀಕ್ಷಣೆಗೆ ಬರುವ ದೇಶಿ ಪ್ರವಾಸಿಗರ ಸಂಖ್ಯೆಗೆ ಮಿತಿ ಹೇರಲು ಮುಂದಾಗಿದೆ.
ಹೌದು, ಪ್ರವಾಸ ದಿನಗಳಲ್ಲಿ ಪ್ರತಿನಿತ್ಯ ತಾಜ್ ವೀಕ್ಷಣೆಗೆ 60 ರಿಂದ 70 ಸಾವಿರಕ್ಕೂ ಭಾರತೀಯರು ಭೇಟಿ ನೀಡುತ್ತಾರೆ. ಈ ವೇಳೆ ಕೆಲವರು ಕಾಲ್ತುಳಿತಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಭಾರತೀಯ ಪ್ರವಾಸಿಗರಿಗೆ ದಿನನಿತ್ಯ ಮಕ್ಕಳು ಸೇರಿದಂತೆ ಒಟ್ಟು 40 ಸಾವಿರ ಪ್ರವಾಸಿಗರಿಗೆ ಮಾತ್ರ ತಾಜ್ ವೀಕ್ಷಣೆಗೆ ಅನುಕೂಲ ಮಾಡಲು ನಿರ್ಧಾರ ತೆಗೆದುಕೊಂಡಿದೆ.
ನಿನ್ನೆ ಸಂಸ್ಕೃತಿ ಕಾರ್ಯದರ್ಶಿ ರವೀಂದ್ರ ಸಿಂಗ್ ಅವರು, ಎಎಸ್ಐ ಅಧಿಕಾರಿಗಳು ಮತ್ತು ಆಗ್ರಾ ಜಿಲ್ಲಾ ಆಡಳಿತದ ಪ್ರತಿನಿಧಿಗಳು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.
ತಾಜ್ ಮಹಲ್‌ಗೆ ಭೇಟಿ ನೀಡುವ ಭಾರತೀಯರ ಪ್ರವಾಸಿಗರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಹೀಗಾಗಿ ದಿನಕ್ಕೆ ಮಕ್ಕಳು ಸೇರಿದಂತೆ 40 ಸಾವಿರ ಭಾರತೀಯ ಪ್ರವಾಸಿಗರಿಗೆ ಮಾತ್ರ ತಾಜ್ ವೀಕ್ಷಣೆ ಮಾಡಬಹುದಾಗಿದೆ. 15 ವರ್ಷದ ಮಕ್ಕಳಿಗೆ ತಾಜ್ ವೀಕ್ಷಣೆಗೆ ಯಾವುದೇ ಶುಲ್ಕ ಇರುವುದಿಲ್ಲ.
ವಿದೇಶಿ ಪ್ರವಾಸಿಗರಿಗೆ ಇದು ಅನ್ವಯವಾಗುವುದಿಲ್ಲ. ಪ್ರಸ್ತುತ ಈ ಸ್ಮಾರಕ ಸಂಕೀರ್ಣ ಪ್ರವೇಶಕ್ಕೆ ಯಾವುದೇ ಮಿತಿ ಇರುವುದಿಲ್ಲ. ಆನ್‌ಲೈನ್‌ನಲ್ಲಿ ತಾಜ್ ವೀಕ್ಷಣೆಗೆ ಟಿಕೆಟ್ ಪಡೆಯಬಹುದಾಗಿದ್ದು, 40 ಸಾವಿರ ಟಿಕೆಟ್ ಖರೀದಿಯಾದ ತಕ್ಷಣ ಬುಕ್ಕಿಂಗ್ ಸ್ಥಗಿತಗೊಳಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ನಿರ್ಧಾರವನ್ನು ಈಗಾಗಲೇ ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಮಹೇಶ್ ಶರ್ಮಾ ಅವರಿಗೆ ತಿಳಿಸಲಾಗಿದೆ. ಇದಕ್ಕೆ ಒಂದೆರಡು ದಿನಗಳಲ್ಲಿ ಒಪ್ಪಿಗೆ ನೀಡಲಾಗುವುದು ಎಂದು ಇಲಾಖೆಯ ಕಾರ್ಯದರ್ಶಿ ರವೀಂದ್ರ ಸಿಂಗ್ ತಿಳಿಸಿದ್ದಾರೆ.
ಒಟ್ಟಿಲ್ಲಿ ಈ ನಿರ್ಧಾರದ ಉದ್ದೇಶ ಒಳ್ಳೆಯದಾದ್ರೂ ತಾಜ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಮಾತ್ರ ಇದು ಶಾಕ್ ನೀಡಿದೆ.
Click this button or press Ctrl+G to toggle between Kannada and English